ಟ್ವಿಟರ್ ಹೊಸ ವಿವಾದ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್‌ ಖಾತೆಯಲ್ಲಿ 'ಆಟ'!

By Suvarna NewsFirst Published Jul 12, 2021, 4:04 PM IST
Highlights

* ಮತ್ತೆ ಟ್ವಿಟರ್‌ ವಿವಾದ, ಈ ಬಾರಿ ಮತ್ತೊಬ್ಬ ಸಚಿವರ ಖಾತೆಯಲ್ಲಿ ಆಟ

* ನೂತನ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಖಾತೆಯಲ್ಲಿದ್ದ ಬ್ಲೂ ಟಿಕ್ ಮಾಯ

* ಈ ಎಡವಟ್ಟಿಗೇನು ಕಾರಣ ಎಂದೂ ಬಹಿರಂಗಪಡಿಸಿದ ಟ್ವಿಟರ್

ನವದೆಹಲಿ(ಜು.12): ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರಂ ಟ್ವಿಟರ್‌ ವಿವಾದಗಳಿಗೆ ಕಡಿವಾಣ ಬೀಳುತ್ತಿಲ್ಲ. ಒಂದಾದ ಬಳಿಕ ಮತ್ತೊಂದರಂತೆ ಇದು ವಿವಾದಗಳನ್ನು ಎಳೆದುಕೊಳ್ಳುತ್ತಿದೆ. ಬ್ಲೂ ಟಿಕ್‌ ತೆಗೆದು ಹಾಕುವ ವಿಚಾರವಾಗಿ ಯಾವತ್ತೂ ಟೀಕೆಗೊಳಗಾಗುತ್ತಿರುವ ಟ್ವಿಟರ್ ಈ ಬಾರಿ, ಮೋದಿ ಟೀಂನ ನೂತನ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್‌ ಖಾತೆಯಿಂದ ಬ್ಲೂ ಟಿಕ್‌ ಮಾರ್ಕ್‌ ತೆಗೆದು ಹಾಕಿದೆ.

ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಕೇರಳ ಉದ್ಯಮಿಗೆ ಸಚಿವ ರಾಜೀವ್ ಚಂದ್ರಶೇಖರ್ ಆಹ್ವಾನ!

ಹೌದು ಸಚಿವ ರಾಜೀವ್ ಚಂದ್ರಶೇಖರ್ ಟ್ವಿಟರ್‌ ಖಾತೆಯಿಂದ ಬ್ಲೂ ಮಾರ್ಕ್ ತೆಗೆದು ಹಾಕಿದ ಟ್ವಿಟರ್ ಕೆಲ ಸಮಯದ ಬಳಿಕ ಮತ್ತೆ ಹಾಕಿದೆ. ಅದೇನಿದ್ದರೂ ಸದ್ಯ ಟ್ವಿಟರ್‌ನ ಈ ಎಡವಟ್ಟು ಭಾರೀ ಟೀಕೆಗೊಳಗಾಗಿದೆ.

Union Minister of State for Electronics & Information Technology and Skill Development, Rajeev Chandrasekhar lost the blue verified badge on Twitter, which was restored later

Twitter said the name change of his handle on the micro-blogging site could be the reason.

(File pic) pic.twitter.com/X0eUCm5fb8

— ANI (@ANI)

ಕಾರಣ ಕೊಟ್ಟ ಟ್ವಿಟರ್: 

ಇನ್ನು ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಟ್ವಿಟರ್ ಒಬ್ಬ ಬಳಕೆದಾರ ತನ್ನ ಹೆಸರು ಅಥವಾ ಸ್ಪೆಲ್ಲಿಂಗ್ ಬದಲಾಯಿಸಿದರೆ ತನ್ನಿಂತಾನಾಗೇ ಬ್ಲೂಟ ಟಿಕ್ ಹೊರಟು ಹೋಗುತ್ತದೆ ಎಂದಿದೆ. ಇನ್ನು ರಾಜೀವ್ ಚಂದ್ರಶೇಖರ್‌ರವರ ಖಾತೆಯಲ್ಲಿ ಬಳಕೆದಾರರ ಹೆಸರು ಈ ಹಿಂದೆ Rajeev MP ಎಂದಿತ್ತು. ಆದರೆ ಸಚಿವರಾದ ಬಳಿಕ ಇದನ್ನು ಬದಲಾಯಿಸಿ Rajeev GOI ಎಂದು ಮಾಡಿದ್ದಾರೆ. 

ಯುವಕರ ಭವಿಷ್ಯಕ್ಕೆ ನೆರವಾಗುವ ರೀತಿ ಕೆಲಸ ಮಾಡುವೆ : ಆರ್‌ ಸಿ

ಇನ್ನು ರಾಜೀವ್ ಚಂದ್ರಶೇಖರ್‌ರವರು ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಮೋದಿ ಟೀಂನ ಅತೀ ಹೆಚ್ಚು ಶಿಕ್ಷಿತ ಸಚಿವರ ಪಟ್ಟಿಯಲ್ಲಿದ್ದಾರೆ.

click me!