ದೇಶದ ವ್ಯಕ್ತಿಗಳಿಂದಲೇ ದೇಶದ ವಿರುದ್ಧ ಪಿತೂರಿ: ರಾಜೀವ್‌ ಚಂದ್ರಶೇಖರ್‌

Published : Aug 07, 2023, 04:46 PM IST
ದೇಶದ ವ್ಯಕ್ತಿಗಳಿಂದಲೇ ದೇಶದ ವಿರುದ್ಧ ಪಿತೂರಿ: ರಾಜೀವ್‌ ಚಂದ್ರಶೇಖರ್‌

ಸಾರಾಂಶ

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸರ್ಕಾರದ ವಿರುದ್ಧ ಸುಳ್ಳು ಮತ್ತು ದ್ವೇಷವನ್ನು ಹರಡಲು ಮತ್ತು ಕೆಟ್ಟ ವಿಚಾರವನ್ನು ಪ್ರಚಾರ ಮಾಡಲು ಸಂಘಟಿತ ಪ್ರಯತ್ನಗಳನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ನೆನಪಿಸಿಕೊಂಡಿದ್ದಾರೆ.


ನವದೆಹಲಿ (ಆ.7): ತನ್ನ ನಿರೂಪಣೆಯನ್ನು ಸೂಕ್ಷ್ಮವಾಗಿ ಮುನ್ನಡೆಸಲು ಮತ್ತು ಟೀಕೆಗಳನ್ನು ದಿಕ್ಕನ್ನು ತಿರುಗಿಸಲು ಚೀನಾ ಜಾಗತಿಕವಾಗಿ ಎಂಥಾ ಭದ್ರವಾದ ಜಾಲವನ್ನು ನಿರೂಪಿಸಿದೆ ಎನ್ನುವುದನ್ನು ನ್ಯೂಯಾರ್ಕ್‌ ಟೈಮ್ಸ್‌ ತನಿಖಾ ವರದಿಯಲ್ಲಿ ಬಹಿರಂಗಪಡಿಸುವುದರೊಂದಿಗೆ ಭಾರತ ಕೂಡ ಇದಕ್ಕೆ ಪ್ರತಿಕ್ರಿಯಿಸಿದೆ. ನ್ಯೂಯಾರ್ಕ್‌ ಟೈಮ್ಸ್‌ ಬಹಿರಂಗ ಪಡಿಸಿರುವ ಸುದ್ದಿ ಭಾರತದ ಮಟ್ಟಿಗೆ ಹೊಸ ಸಂಗತಿಯಲ್ಲ. ಬದಲಿಗೆ ಇದು ಭಾರತದ ಉದಯವನ್ನು ವಿರೋಧಿಸುವ ದೇಶದ ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳಿಂದ ಹಣ ಮತ್ತು ಪ್ರೋತ್ಸಾಹಿಸುತ್ತಿರುವ ಆಪರೇಟರ್‌ಗಳ ಜಾಲದ ಸಂಕೀರ್ಣ ಪಿತೂರಿಯಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸೋಮವಾರ ಹೇಳಿದ್ದಾರೆ.

ನ್ಯೂಸ್‌ಕ್ಲಿಕ್ ವೆಬ್ ಪೋರ್ಟಲ್ 'ನ್ಯೂಸ್‌ಕ್ಲಿಕ್' ಚೀನಾದ ಕುರಿತಾಗಿ ಪ್ರಚಾರ ಮಾಡಲು 38 ಕೋಟಿ ರೂಪಾಯಿ ಹಣವನ್ನು ಪಡೆದಿರುವ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಬಹಿರಂಗಪಡಿಸಿದ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಜೊತೆಗೆ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, “ಜನರು ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಗುಂಪು ಒಟ್ಟಾಗಿ ಸೇರಿಕೊಂಡು, ಮಾಧ್ಯಮ ವೇದಿಕೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಆ ಬಳಿಕ ಇವರದೇ ನಡುವೆ ಆಪ್ತ ಸಮನ್ವಯದೊಂದಿಗೆ ಕ್ರಾದ್‌ ಪೋಸ್ಟ್‌ ಹಾಗೂ ಪರಸ್ಪರ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಸರ್ಕಾರದ ವಿರೋಧಿ ಟೀಕೆಗಳನ್ನು ಇವರೆಲ್ಲರೂ ಒಟ್ಟಾಗಿ ಹಂಚಿಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸುಳ್ಳು ಮತ್ತು ದ್ವೇಷ, ಸರ್ಕಾರದ ಬಗ್ಗೆ, ಕೆಟ್ಟ ಅಭಿಪ್ರಾಯ ಉಂಟುಮಾಡುವುದು ಇವರ ಮುಖ್ಯ ಉದ್ದೇಶ. ಅದರ ಇತ್ತೀಚಿನ ಉದಾಹರಣೆ ಎಂದರೆ ಮಣಿಪುರ ಹಿಂಸಾಚಾರ. ಇನ್ನು ಈ ರಾಜಕೀಯ ಪ್ರೇರಿತ ತಮ್ಮದೇ ನಿರೂಪಣೆ ಮಾಡುವ ಹಿಂದೆ ರಾಜಕೀಯ ನಾಯಕರೂ ಇದ್ದಾರೆ' ಎಂದು ಹೇಳಿದ್ದಾರೆ.

ಭಾರತದಲ್ಲಿ ಚೀನಾ ಕುರಿತಾಗಿ ಪ್ರಚಾರ, ಅಮೆರಿಕದ ಕೋಟ್ಯಧಿಪತಿಯ ಮಹಾಸಂಚು

"ಇದು ಯಾವುದೇ ಮುಗ್ಧ ಚಟುವಟಿಕೆಯೂ ಅಲ್ಲ. ಇದು ಸಂಕೀರ್ಣವಾದ ಪಿತೂರಿಯಾಗಿದೆ. ಇದು ಭಾರತದ ಉದಯ, ರಾಷ್ಟ್ರಗಳ ಜಾಗತಿಕ ಸಮುದಾಯದಲ್ಲಿ ಅದರ ವಿಶ್ವಾಸ, ಬೆಳೆಯುತ್ತಿರುವುದನ್ನು ವಿರೋಧಿಸುವ ದೇಶದ ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳಿಂದ ಹಣ ಮತ್ತು ಉತ್ತೇಜನ ಪಡೆಯುತ್ತಿರುವ ಆಪರೇಟರ್‌ಗಳ ಜಾಲವಾಗಿದೆ ಎಂದಿದ್ದಾರೆ.

ಮಣಿಪುರ ಹಿಂಸಾಚಾರದಲ್ಲಿ ವಿದೇಶಿ ಏಜೆನ್ಸಿಗಳ ಕೈವಾಡ ತಳ್ಳಿ ಹಾಕುವಂತಿಲ್ಲ: ಮಾಜಿ ಆರ್ಮಿ ಚೀಫ್‌ ನರವಾಣೆ

ದೇಶದ ಪ್ರಜಾಪ್ರಭುತ್ವಕ್ಕೆ ನಿಜವಾದ ಅಪಾಯ ಎನ್ನುವುದಿದ್ದರೆ, ಅದು ತಪ್ಪಿ ಮಾಹಿತಿ ಮಾತ್ರ ಎಂದು ಹೇಳಿದ ರಾಜೀವ್‌ ಚಂದ್ರಶೇಖರ್‌, "ಪ್ರತಿ ಬಾರಿ ತಪ್ಪು ಮಾಹಿತಿಗೆ ಕಡಿವಾಣ ಹಾಕಲು ಪ್ರಯತ್ನಿಸಿದಾಗ, ಚೀನಾ ಪ್ರೇರಿತ ಸುದ್ದಿ ಹಂಚುವ ಮಾಧ್ಯಮ ವೇದಿಕೆಗಳು ತಮ್ಮ ಪರವಾಗಿ ಮಾತನಾಡುವ ವ್ಯಕ್ತಿಗಳ ಮೂಲಕ ದಾಳಿ ಮಾಡುವುದು ಮಾತ್ರವಲ್ಲದೆ, ವಾಕ್‌ ಸ್ವಾತಂತ್ರ್ಯ ಎನ್ನುವ ಸುಳ್ಳು ಹೊದಿಕೆಯನ್ನೂ ಹಾಸುತ್ತದೆ. ನಮಗೆ ಸಂವಿಧಾನ ವಾಕ್‌ ಸ್ವಾತಂತ್ರ್ಯ ನೀಡಿದೆ. ಆದರೆ, ರಾಷ್ಟ್ರದ ಬೆಳವಣಿಗೆಯನ್ನು ತಡೆಯುವ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳುವುದನ್ನು ಇವರು ವಾಕ್‌ ಸ್ವಾತಂತ್ರ್ಯ ಎನ್ನುತ್ತಾರೆ. ದೇಶದ ಕುರಿತಾಗಿ ನಂಬಿಕೆ ಹೋಗುವಂಥ, ಸಮಾಜದ ನಡುವೆ ಒಡಕು ಮೂಡಿಸುವಂಥ ಸುದ್ದಿಗಳನ್ನು ಪ್ರಚಾರ ಮಾಡುವಲ್ಲಿ ಚೀನಾ ನಿರತವಾಗಿ ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ಸಮಸ್ಯೆ : ಏರ್‌ಲೈನ್‌ಗಳಿಗೆ ವಿಧಿಸಿದ್ದ ಕಠಿಣ ಆದೇಶ ರದ್ದು
ಮದುವೆ ವಯಸ್ಸಾಗದಿದ್ರೂ ವಯಸ್ಕರು ಲಿವ್‌ ಇನ್‌ನಲ್ಲಿ ಇರಬಹುದು: ಕೋರ್ಟ್‌