ಸದ್ದಿಲ್ಲದೆ ಚೀನಾದ ಮೇಲೆ ಕೇಂದ್ರದಿಂದ ಮತ್ತೊಂದು ಗದಾಪ್ರಹಾರ

By Suvarna NewsFirst Published Jul 1, 2020, 11:08 PM IST
Highlights

ಕೇಂದ್ರದಿಂದ ಚೀನಾದ ಮೇಲೆ ಮತ್ತೊಂದು ಪ್ರಹಾರ/ ಹೆದ್ದಾರಿ ಯೋಜನೆಗಳಲ್ಲಿ ಚೀನಾಕ್ಕೆ ಪ್ರವೇಶ ಇಲ್ಲ/ ಸಣ್ಣ ಕೈಗಾರಿಕೆಯಲ್ಲಿಯೂ ಚೀನಾ ಹೂಡಿಕೆಗೆ ನೋ

ನವದೆಹಲಿ(ಜು. 01) ಭಾರತದ  ಗಡಿಯಲ್ಲಿ ಚೀನಾ ಸಂಘರ್ಷ ಮಾಡಿದ ನಂತರ ಕೇಂದ್ರ ಸರ್ಕಾರ ಸದ್ದಿಲ್ಲದೆ ಒಂದೊಂದೆ ಏಟುಗಳನ್ನು ನೀಡುತ್ತಾ ಬಂದಿದೆ. ಮೊದಲು ಪ್ರಮುಖ ರೈಲ್ವೆ ಯೋಜನೆಗಳಿಂದ ಮುಕ್ತಿ ನಂತರ ಚೀನಾ ಅಪ್ಲಿಕೇಶನ್ ಬ್ಯಾನ್.. ಇದೀಗ ಮತ್ತೊಂದು ಹೊಡೆತ ನೀಡಿದೆ.

ಜಂಟಿ ಉದ್ಯಮಗಳು ಸೇರಿದಂತೆ  ಭಾರತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಭಾಗವಹಿಸಲು ಚೀನಾ ಕಂಪನಿಗಳಿಗೆ ಭಾರತ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ  ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಷಷ್ಟವಾಗಿ ಹೇಳಿದ್ದಾರೆ.

ಕಳ್ಳನಿಗೆ ಸುಳ್ಳನ ಸಾಕ್ಷಿ, ಕುತಂತ್ರಿ ಪಾಕ್ ಬೆಂಬಲಕ್ಕೆ ನರಿಬುದ್ಧಿ ಚೀನಾ

ಯಾವ ತರಹದ ಹೂಡಿಕೆಗೂ ಚೀನಾ ಕಂಪನಿಗಳ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಗಡ್ಕರಿ ತಿಳಿಸಿದ್ದಾರೆ.  ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿಯೂ ಚೀನಾ ಹೂಡಿಕೆ ವಂಚಿತವಾಗಲಿದೆ.

ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು 20 ಮಂದಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಬಳಿಕ ಒಂದೊಂದೆ ಬೆಳವಣಿಗೆ ನಡೆಯುತ್ತಿದೆ.   5 ಜಿ ಸೇವೆಯಿಂದಲೂ ಚೀನಾ ಹೊರಗಿಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.  ಮುಂದೆ ಏನು ಮಾಡಬೇಕು ಎಂಬುದಕ್ಕೆ ಇಲಾಖಾ ಮಟ್ಟೆದಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ. 

 

 

click me!