'Z ಇಲ್ಲ SPGನೂ ಇಲ್ಲ, ಬಂಗಲೆ ಖಾಲಿ ಮಾಡಿ' ಪ್ರಿಯಾಂಕಾಗೆ ಕೇಂದ್ರದ ಲೆಟರ್

By Suvarna News  |  First Published Jul 1, 2020, 10:15 PM IST

ಕೇಂದ್ರ ಸರ್ಕಾರದಿಂದ ಮತ್ತೊಂದು ದಿಟ್ಟ ಕ್ರಮ/ ಮನೆ ಖಾಲಿ ಮಾಡಲು ಪ್ರಿಯಾಂಕಾ ವಾದ್ರಾ ಗಾಂಧಿಗೆ ಸೂಚನೆ/  ಎಸ್‌ಪಿಜಿ ಸೆಕ್ಯೂರಿಟಿ ಹಿಂದಕ್ಕೆ


ನವದೆಹಲಿ(ಜು. 01)   ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಿದ್ದ ಎಸ್‌ಪಿಜಿ ಭದ್ರತೆ ಹಿಂಪಡೆಯಲಾಗಿದ್ದು ಲೋಧಿ ಎಸ್ಟೇಟ್‌ನಲ್ಲಿ ಸರ್ಕಾರ ನೀಡಿರುವ ಮನೆ ಒಂದು ತಿಂಗಳೊಳಗೆ ಖಾಲಿ ಮಾಡಲು ತಿಳಿಸಲಾಗಿದೆ.

ಎಸ್‌ಪಿಜಿ ಭದ್ರತೆ ರದ್ದಾಗಿರುವುದಕ್ಕೆ  ಪ್ರಿಯಾಂಕ ಗಾಂಧಿ ವಾದ್ರಾ ಬಂಗಲೆಯನ್ನು ಆಗಸ್ಟ್ 1ರೊಳಗೆ ಖಾಲಿ ಮಾಡಲೇಬೇಕಿದೆ.  ನಂ 35, ಟೈಪ್ 6B, ಲೂದಿ ಎಸ್ಟೇಟ್ ನಲ್ಲಿರುವ ನಿವಾಸ ಅನಿವಾರ್ಯವಾಗಿ ಖಾಲಿ ಮಾಡಲೇಬೇಕಿದೆ.

Latest Videos

undefined

ಈ ಬಗ್ಗೆ ಪ್ರಿಯಾಂಕಾ ಇಲ್ಲಿಯವರೆಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಎಸ್‌ಪಿಜಿ ಭದ್ರತೆ ಮತ್ತು ಝಡ್‌ + ಸೆಕ್ಯೂರಿಯನ್ನು ಹಿಂಪಡೆದ ನಂತರ ನಮೂದಿತವಾಗಿರುವ ಬಂಗಲೆಯಲ್ಲಿ ವಾಸ ಮಾಡುವ ಅವಕಾಶ ಇರುವುದಿಲ್ಲ. 

ನಾನು ಇಂದಿರಾ ಮೊಮ್ಮಗಳು ಎಂದು ಗುಡುಗಿದ್ದ ಪ್ರಿಯಾಂಕಾ

ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬಸ್ಥರಿಗೆ ನಿರ್ದಿಷ್ಟ ಅವಧಿವರೆಗೆ ಮಾತ್ರ ವಿಶೇಷ ರಕ್ಷಣಾ ದಳದ (ಎಸ್‌ಪಿಜಿ) ಭದ್ರತೆ ಒದಗಿಸುವ 'ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌' ಕಾಯಿದೆ ತಿದ್ದುಪಡಿ ತಂದು ಈ ರೀತಿ ಭದ್ರತೆ ನೀಡುವುದನ್ನು ಹಿಂಪಡೆಯಲಾಗಿತ್ತು. 

ಕಳೆದ ವರ್ಷ ನವೆಂಬರ್ ನಲ್ಲಿ ಸೋನಿಯಾ ಗಾಂಧಿ ಕುಟುಂಬಕ್ಕೆ ನೀಡಿದ್ದ ವಿಶೇಷ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿತ್ತು. ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಝಡ್ ಭದ್ರತೆ ಹೊಂದಿದ್ದರು. ಈಗ ಪ್ರಧಾನ ಮಂತ್ರಿ ಮಾತ್ರ ಝಡ್ ವ್ಯಾಪ್ತಿಗೆ ಒಳಪಟ್ಟಿದ್ದಾರೆ.  ಅಖಿಲೇಶ್ ಯಾದವ್, ಲಾಲೂ ಪ್ರಸಾದ್ ಯಾದವ್, ರಾಜೀವ್ ಪ್ರತಾಪ್ ರೂಡಾ, ಉದಿತ್ ರಾಜ್, ಇಂದ್ರೇಶ್ ಕುಮಾರ್ ಅವರಿಗೆ ನೀಡಿದ್ದ ಭದ್ರತೆಯನ್ನು ತಗ್ಗಿಸಲಾಗಿದೆ. 

 

 

click me!