
ನವದೆಹಲಿ: ಮೇ ತಿಂಗಳಲ್ಲಿ ನಡೆದ ಭಾರತದ ವಿರುದ್ಧದ ಸಮರದ (ಆಪರೇಷನ್ ಸಿಂದೂರ) ವೇಳೆ ಪಾಕಿಸ್ತಾನ ಚೀನಿ ನಿರ್ಮಿತ ಶಸ್ತ್ರಾಸ್ತ್ರ ಬಳಸಿತ್ತು. ಈ ಸಂದರ್ಭವನ್ನು ಚೀನಾ ತನ್ನ ಶಸ್ತ್ರಾಸ್ತ್ರ ಸಾಮರ್ಥ್ಯ ಹೇಗಿದೆ ಎಂಬುದನ್ನು ಪರೀಕ್ಷಾರ್ಥವಾಗಿ ಬಳಸಿಕೊಂಡಿತು ಎಂದು ಮಂಗಳವಾರ ಪ್ರಕಟವಾದ ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗದ ವರದಿ ಹೇಳಿದೆ.
‘ಸಮರದಲ್ಲಿ ಮೊದಲ ಬಾರಿಗೆ ಚೀನಾದ ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳಾದ ಎಚ್‌ಕ್ಯು-9 ವಾಯು ರಕ್ಷಣಾ ವ್ಯವಸ್ಥೆ, ಪಿಎಲ್-15 ಕ್ಷಿಪಣಿಗಳು ಮತ್ತು ಜೆ-10 ಯುದ್ಧ ವಿಮಾನ ಬಳಸಲಾಯಿತು. ಇದನ್ನು ಚೀನಾ ತನ್ನ ಶಸ್ತ್ರ ಸಾಮರ್ಥ್ಯ ಪರಿಶೀಲಿಸಿತು’ ಎಂದು ವರದಿ ಹೇಳಿದೆ.
ಇದೇ ವರದಿಯು, ‘ಭಾರತದ ಪಹಲ್ಗಾಂ ಮೇಲೆ ದಾಳಿ ಮಾಡಿದವರು ಪಾಕ್ ಉಗ್ರರಲ್ಲ’ ಎಂದು ಹೇಳಿ ಇತ್ತೀಚೆಗೆ ಆಕ್ರೋಶಕ್ಕೆ ಕಾರಣವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ