ಭಾರತದಿಂದ 6 ಸಮುದ್ರ ಆಹಾರ ಆಮದು ನಿಷೇಧಿಸಿದ ಚೀನಾ!

By Suvarna NewsFirst Published Jun 11, 2021, 7:48 PM IST
Highlights
  • ಫ್ರೂಜನ್ ಸೀ ಫುಡ್ ಆಮದಿಗೆ ನಿರ್ಬಂಧ ಹೇರಿದ ಚೀನಾ
  • ಕೊರೋನಾ ವೈರಸ್ ಹರಡುತ್ತಿದೆ ಅನ್ನೋ ಆರೋಪ
  • 6 ಆಹಾರದ ಪ್ಯಾಕ್‌ಗಳಲ್ಲಿ ವೈರಸ್ ಪತ್ತೆ 

ಬೀಜಿಂಗ್(ಜೂ.11): ಕೊರೋನಾ ವೈರಸ್ ಕುರಿತು ಪ್ರತಿ ದೇಶಗಳು ಅತೀವ ಎಚ್ಚರಿಕೆ ವಹಿಸುತ್ತಿದೆ. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ಸೇವೆ ನಿರ್ಬಂಧ, ಕಟ್ಟು ನಿಟ್ಟಿನ ಮಾರ್ಗಸೂಚಿ ಪಾಲನೆ ಸೇರಿದಂತೆ ಹಲವು ನಿಯಮಗಳನ್ನು ಅನುಸರಿಸುತ್ತಿದೆ. ಅದರಲ್ಲೂ ಚೀನಾ ವಿದೇಶದಿಂದ ಆಮದು ಮಾಡುತ್ತಿರುವ ಪ್ರತಿ ವಸ್ತುಗಳನ್ನೂ ಪರೀಕ್ಷೆ ನಡೆಸುತ್ತಿದೆ. ಹೀಗೆ ಪರೀಕ್ಷೆಯಲ್ಲಿ ಭಾರತಿಂದ ಆಮದು ಮಾಡುತ್ತಿರುವ ಹೆಪ್ಪುಗಟ್ಟಿಸಿದ 6 ಸಮುದ್ರದ ಆಹಾರಗಳಲ್ಲಿ ಕೊರೋನಾ ಪತ್ತೆಯಾಗಿದೆ. ಹೀಗಾಗಿ 6 ಉತ್ಪನ್ನಗಳ ಆಮದು ನಿಷೇಧಿಸಿದೆ.

ಕೊರೋನಾ ಮೂಲ ಪತ್ತೆ ಹಚ್ಚಿದ ಅಮೆರಿಕ ಲ್ಯಾಬೊರೇಟೊರಿ; ಚೀನಾಗೆ ನುಂಗಲಾರದ ತುತ್ತು!...

ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವ ಸೀಫುಡ್ ಆಹಾರ ಪ್ಯಾಕಿಂಗ್‌ನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಕಳೆದ 6 ತಿಂಗಳಲ್ಲಿ ಹಲವು ಬಾರಿ ಈ ಪ್ಯಾಕೇಜ್ ಮೇಲೆ ವೈರಸ್ ಪತ್ತೆಯಾಗಿದೆ. ಇದು ಚೀನಾದಲ್ಲಿ ಅಪಾಯದ ಮಟ್ಟ ಹೆಚ್ಚಿಸಲಿದೆ. ಹೀಗಾಗಿ ಆಮದು ನಿಷೇಧಿಸಿದೆ.

WHO ಕಣ್ಣಾಮುಚ್ಚಾಲೆ ಆಟದ ಹಿಂದೆ ಚೀನಾ ಕೈವಾಡ; ಅಮೆರಿಕ NSA ಅಧಿಕಾರಿ!

2019ರ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಕೊರೋನಾ ಸ್ಫೋಟಗೊಂಡಿತು. ಬಳಿಕ ಭಾರತ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಹರಡುಮ ಮೂಲಕ ಇನ್ನಿಲ್ಲದ ಸಂಕಷ್ಟಕ್ಕೆ ತಳ್ಳಿತು. ಇತ್ತ ಚೀನಾ ಕೊರೋನಾ ನಿಯಂತ್ರಣಕ್ಕೆ ತಂದಿದೆ. ಇದೀಗ ಕೊರೋನಾ ಹರಡದಂತೆ ಕಟ್ಟು ನಿಟ್ಟಿನ ಸೂಚನೆ ಪಾಲಿಸುತ್ತಿದೆ. ಇದರ ಅಂಗವಾಗಿ ಯಾವುದೇ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು, ಆಹಾರ ಉತ್ಪನ್ನಗಳನ್ನು ಪರೀಕ್ಷೆಗೆ ಒಳಪಡಿಸುತ್ತಿದೆ. 

ಇಷ್ಟಾದರೂ ವಿದೇಶದಿಂದ ಆಗಮಿಸಿದವರಲ್ಲಿ ಕೊರೋನಾ ಪತ್ತೆಯಾಗುತ್ತಿದೆ. ಇದರ ಜೊತೆಗೆ  ದಕ್ಷಿಣ ಗುವಾಂಗ್‌ಡಾಂಗ್ ಪ್ರಾಂತ್ಯದ 15 ಕೊರೋನ ಪ್ರಕರಣಗಳು ವರದಿಯಾಗಿದೆ. ಇದರು ಆಮದು ಮಾಡಿದ ವಸ್ತುಗಳಿಂದ ಹರಡಿದ ಕೊರೋನಾವಾಗಿದೆ ಎಂದು ಚೀನಾ ಹೇಳಿದೆ.

click me!