ಲಡಾಖ್‌ನಲ್ಲಿ ಹಾಲಿ ಸ್ಥಿತಿ ಕಾಪಾಡುವ ಚೀನಾ ಕುತಂತ್ರಕ್ಕೆ ಭಾರತದ ಬ್ರೇಕ್‌!

By Kannadaprabha News  |  First Published Aug 8, 2020, 8:56 AM IST

ಲಡಾಖ್‌ನಲ್ಲಿ ಹಾಲಿ ಸ್ಥಿತಿ ಕಾಪಾಡುವ ಚೀನಾ ಕುತಂತ್ರಕ್ಕೆ ಭಾರತದ ಬ್ರೇಕ್‌| ಚೀನಾ ಸೇನೆಗೆ ಖಡಕ್‌ ಉತ್ತರ| ಮತ್ತೊಂದು ಮಾತುಕತೆ ಯತ್ನ ವಿಫಲ


ನವದೆಹಲಿ(ಆ.08): ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ಈಗಿರುವ ಸ್ಥಿತಿಯನ್ನೇ ಕಾಪಾಡಿಕೊಳ್ಳುವ ಚೀನಾ ಬೇಡಿಕೆಯನ್ನು ಭಾರತೀಯ ಸೇನೆ ಸಾರಾಸಗಟಾಗಿ ತಿರಸ್ಕರಿಸಿದೆ. ಅಲ್ಲದೇ ಘರ್ಷಣೆಗೂ ಮುನ್ನ ಇದ್ದ ಸ್ಥಿತಿಯನ್ನೇ ಕಾಪಾಡಿಕೊಳ್ಳಬೇಕು ಎಂದು ಚೀನಾವನ್ನು ಭಾರತ ಒತ್ತಾಯಿಸಿದೆ. ಇದಕ್ಕೆ ಒಪ್ಪಿಕೊಳ್ಳದ ಹೊರತೂ 1,597 ಕಿ.ಮೀ. ಗಡಿಯುದ್ಧಕ್ಕೂ ನಿಯೋಜಿಸಿದ ಭದ್ರತೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಗಡಿಯಿಂದ ಉಭಯ ಸೇನೆಗಳು ತೆರವುಗೊಳ್ಳಬೇಕು ಎನ್ನುವ ದ್ವಿಪಕ್ಷೀಯ ಮಾತುಕತೆ ಬಳಿಕವೂ ಗಡಿಯಲ್ಲಿ ಚೀನಾ ಭಾರೀ ಪ್ರಮಾಣದ ಸೇನೆಯನ್ನು ನಿಯೋಜಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಸೇನೆ ಜಮಾವಣೆ ಮಾಡುತ್ತಿದೆ. ಈ ಮಧ್ಯೆ ಸೇನೆ ಜಮಾವಣೆಯಾದ ಬಳಿಕ ಇರುವ ಸ್ಥಿತಿಯನ್ನೇ ಮುಂದುವರಿಸಬೇಕು ಎನ್ನುವ ಚೀನಾದ ಪ್ರಸ್ತಾಪವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ . ಸಂಘರ್ಷಕ್ಕೂ ಮುನ್ನ ಇದ್ದ ಸ್ಥಿತಿಯನ್ನೆ ಮುಂದುವರಿಸಬೇಕು ಎಂದು ಭಾರತ ಹೇಳಿದೆ. ಆ ಮೂಲಕ ಗಡಿ ಸಂಘರ್ಷ ಮತ್ತಷ್ಟುಬಿಗಿಯಾಗಿದೆ.

Latest Videos

undefined

ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಿ: ಕಮಾಂಡರ್‌ಗಳಿಗೆ ಸೇನಾ ಮುಖ್ಯಸ್ಥ ನರವಣೆ ಸೂಚನೆ!

ದ್ವಿಪಕ್ಷೀಯ ಮಾತುಕತೆಗೆ ಅನುಗುಣವಾಗಿ ಯಾವುದೇ ಅಪೇಕ್ಷೆಗಳಿಲ್ಲದೇ ಯಥಾಸ್ಥಿತಿ ಕಾಪಾಡಿಕೊಳ್ಳಲು ಮುಂದಾಗಬೇಕೆಂದು ಅನೇಕ ಬಾರಿ ಹೇಳಿದರೂ ಅದಕ್ಕೆ ಮನ್ನಣೆ ನೀಡಿಲ್ಲ. ಮತ್ತೆ ಮತ್ತೆ ಅದನ್ನೇ ಹೇಳುತ್ತಾ ಬಂದಿದ್ದೇವೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆ ಕಾರಣ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲ್ಪಟ್ಟಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಿಲ್ಲ ಎಂದಿದೆ ಎನ್ನಲಾಗಿದೆ. ಅಲ್ಲದೆ, ಚೀನಾ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ನೋಡಿ ಮುಂದಿನ ಹೆಜ್ಜೆ ಇಡುವುದಾಗಿ ಸ್ಪಷ್ಟಪಡಿಸಿದೆ ಎಂದು ಅಧಿಕಾರಿಗಳಿಂದ ತಿಳಿದುಬಂದಿದೆ.

click me!