ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಿ| ಕಮಾಂಡರ್‌ಗಳಿಗೆ ಸೇನಾ ಮುಖ್ಯಸ್ಥ ನರವಣೆ ಸೂಚನೆ|ಲಖನೌ ಸೆಂಟ್ರಲ್ ಕಮಾಂಡ್ ಭೇಟಿ ವೇಳೆ ಮುನ್ನೆಚ್ಚರಿಕೆ
ಲಖನೌ(ಆ.08): ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ಸದಾ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರು ಹಿರಿಯ ಕಮಾಂಡರ್‌ಗಳಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಇಲ್ಲಿನ ಸೆಂಟ್ರಲ್ ಕಮಾಂಡ್ ಕೇಂದ್ರ ಕಚೇರಿಗೆ ಭೇಟಿ ನೀಡಿ, ಸೇನೆಯ ಸನ್ನದ್ಧ ಸ್ಥಿತಿಯನ್ನು ಪರಿಶೀಲಿಸಿದ ಅವರು ಇಂಥದ್ದೊಂದು ಸೂಚನೆ ನೀಡಿದ್ದಾರೆ. ಇದೇ ವೇಳೆ ಸೆಂಟ್ರಲ್ ಕಮಾಂಡ್‌ನ ಸನ್ನದ್ಧ ಸ್ಥಿತಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
undefined
ಲಡಾಖ್‌ನಲ್ಲಿ ಹಾಲಿ ಸ್ಥಿತಿ ಕಾಪಾಡುವ ಚೀನಾ ಕುತಂತ್ರಕ್ಕೆ ಭಾರತದ ಬ್ರೇಕ್!
ಇತ್ತೀಚಿನ ದಿನಗಳಲ್ಲಿ ಲಡಾಖ್ ಗಡಿಯಲ್ಲಿ ಚೀನಾದ ಕ್ಯಾತೆ ಹೆಚ್ಚಾಗಿರುವ ಬೆನ್ನಲ್ಲೇ, ಅಲ್ಲಿ ಭಾರತೀಯ ಸೇನೆ ತನ್ನ ಸೇನಾ ಜಮಾವಣೆ ಹೆಚ್ಚಿಸಿದೆ. ಜೊತೆಗೆ ಅಲ್ಲಿ ಇನ್ನಷ್ಟುದಿನ ಸಂಘರ್ಷ ಮುಂದುವರೆಯುವ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.