
ನವದೆಹಲಿ(ಜ.15): ಮೊಬೈಲ್ ಆ್ಯಪ್ ಸೇರಿದಂತೆ ಆನ್‌ಲೈನ್ ಸಾಲ ನೀಡಿಕೆ ಸಂಸ್ಥೆಗಳ ಮೇಲಿನ ದೂರುಗಳು ದಿನೇ ದಿನೇ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಇವುಗಳ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ. ಈ ಸಂಬಂಧ ಶಿಫಾರಸು ಮಾಡಲು 6 ಜನ ತಜ್ಞರ ಸಮಿತಿಯೊಂದನ್ನು ರಚಿಸಿದ್ದು, ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ಈ ಸಮಿತಿಯು, ಕಾನೂನಿನ ಪರಿಮಿತಿಯಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ಮತ್ತು ಯಾವುದೇ ಕಾನೂನಿನ ಮಿತಿಯಲ್ಲಿ ಸಿಗದೇ ಅಕ್ರಮವಾಗಿ ಇಂಥ ಸಾಲ ನೀಡುತ್ತಿರುವ ಸಂಸ್ಥೆಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಕುರಿತು ತನ್ನ ಶಿಫಾರಸುಗಳನ್ನು ನೀಡಲಿದೆ. ಹಣಕಾಸು ವಲಯಕ್ಕೆ ಡಿಜಿಟಲ್ ಪ್ರವೇಶ ಸ್ವಾಗತಾರ್ಹವಾದರೂ, ಅದರಲ್ಲೂ ಕೆಲ ಅಪಾಯಗಳಿವೆ.
CBI ಅಧಿಕಾರಿಗಳ ಮೇಲೆ CBI ದಾಳಿ: ನಾಲ್ವರ ವಿರುದ್ಧ ಕೇಸ್
ಹೀಗಾಗಿ ಇಂಥ ವಿಷಯದಲ್ಲಿ ಸಮತೋಲಿತ ಹೆಜ್ಜೆ ಇಡುವುದು ಅನಿವಾರ್ಯ. ಹೀಗಾದಲ್ಲಿ ಹಣಕಾಸು ವಲಯದಲ್ಲಿನ ಡಿಜಿಟಲ್ ಪ್ರವೇಶವು ಕಾನೂನಿನ ಚೌಕಟ್ಟಿಗೆ ಒಳಪಟ್ಟನಾವಿನ್ಯತೆಗೆ, ದತ್ತಾಂಶ ಭದ್ರತೆಗೆ, ಗ್ರಾಹಕರ ಸುರಕ್ಷತೆಗೆ ಅನುವು ಮಾಡಿಕೊಡಲಿದೆ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಚೀನಾ ಮೂಲದ ಕಂಪನಿಗಳು ಭಾರತದಲ್ಲಿ ಅಕ್ರಮವಾಗಿ ಬೇರೂರಿಕೊಂಡು ಸಾವಿರಾರು ಕೋಟಿ ಸಾಲ ವಿತರಿಸುತ್ತಿರುವುದು ಮತ್ತು ಅವುಗಳ ದುಬಾರಿ ಬಡ್ಡಿ ಕಟ್ಟಲಾರದೇ ಹಲವಾರು ಜನ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಆರ್‌ಬಿಐ ಈ ಕ್ರಮಕ್ಕೆ ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ