ಅರುಣಾಚಲದ ಮೇಲೆ ಚೀನಾ ಕಣ್ಣು : ಅಮೆರಿಕ

Kannadaprabha News   | Kannada Prabha
Published : Dec 26, 2025, 04:44 AM IST
China

ಸಾರಾಂಶ

ತೈವಾನ್‌ನಂತೆ ಅರುಣಾಚಲ ಪ್ರದೇಶವನ್ನು ತನ್ನ ಭಾಗವಾಗಿಸಿಕೊಳ್ಳುವುದನ್ನು ಪ್ರಮುಖ ಆಸಕ್ತಿಗಳಲ್ಲೊಂದು ಎಂದು ಪರಿಗಣಿಸಿರುವುದಾಗಿ ಅಮೆರಿಕದ ವರದಿ ಹೇಳಿದೆ. ‘ತೈವಾನ್‌, ದಕ್ಷಿಣ ಚೀನಾ ಸಮುದ್ರ, ಸೆಂಕಾಕು ದ್ವೀಪಗಳ ಜತೆ ಅರುಣಾಚಲವನ್ನೂ ಸೇರಿಸಿಕೊಂಡು, 2047ರ ಹೊತ್ತಿಗೆ ಅಖಂಡ ಚೀನಾವನ್ನು ನಿರ್ಮಿಸುವ ಗುರಿ

ವಾಷಿಂಗ್ಟನ್‌ : ತೈವಾನ್‌ನಂತೆ ಅರುಣಾಚಲ ಪ್ರದೇಶವನ್ನು ತನ್ನ ಭಾಗವಾಗಿಸಿಕೊಳ್ಳುವುದನ್ನು ಪ್ರಮುಖ ಆಸಕ್ತಿಗಳಲ್ಲೊಂದು ಎಂದು ಪರಿಗಣಿಸಿರುವುದಾಗಿ ಅಮೆರಿಕದ ವರದಿ ಹೇಳಿದೆ. ‘ತೈವಾನ್‌, ದಕ್ಷಿಣ ಚೀನಾ ಸಮುದ್ರ, ಸೆಂಕಾಕು ದ್ವೀಪಗಳ ಜತೆ ಅರುಣಾಚಲವನ್ನೂ ಸೇರಿಸಿಕೊಂಡು, 2047ರ ಹೊತ್ತಿಗೆ ಅಖಂಡ ಚೀನಾವನ್ನು ನಿರ್ಮಿಸುವ ಗುರಿಯನ್ನು ಚೀನಾ ಹೊಂದಿದೆ. ಇದಕ್ಕಾಗಿ ವಿಶ್ವದರ್ಜೆಯ ಸೇನೆಯನ್ನು ತಯಾರಿಸುತ್ತಿದೆ ಎಂದು ವರದಿ ಹೇಳಿದೆ. ಅರುಣಾಚಲವನ್ನು ತನ್ನ ಭೂಪಟಕ್ಕೆ ಸೇರಿಸಿಕೊಂಡಿರುವ ಚೀನಾ, ಅದಕ್ಕೊಂದು ಹೆಸರನ್ನೂ ಇಟ್ಟಿದೆ.

ಭಾರತ- ಅಮೆರಿಕ ಸಂಬಂಧ ಹಾಳು ಮಾಡಲು ಪ್ರಯತ್ನ:

ಬೀಜಿಂಗ್: ಗಡಿ ವಿಷಯದಲ್ಲಿ ಸ್ವಲ್ಪ ಮೃಧು ಧೋರಣೆ ತೋರಿಸುವ ಮೂಲಕ ಅಮೆರಿಕದೊಂದಿಗೆ ಭಾರತದ ಸಂಬಂಧವನ್ನು ಹಾಳು ಮಾಡಲು ಚೀನಾ ಯತ್ನಿಸುತ್ತಿದೆ ಎಂಬ ಅಮೆರಿಕದ ಯುದ್ಧ ಇಲಾಖೆಯ ವರದಿಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಇಲಾಖೆ, ‘ಪೆಂಟಗಾನ್‌ ವರದಿಯು ಚೀನಾದ ರಕ್ಷಣಾ ನೀತಿಯನ್ನು ಹಾಳು ಮಾಡುತ್ತಿದೆ. ಇತರ ದೇಶಗಳ ನಡುವೆ ಭಿನ್ನಾಭಿಪ್ರಾಯ ಬಿತ್ತುವ ಕೆಲಸ ಮಾಡುತ್ತಿದೆ. ಅಮೆರಿಕ ತನ್ನ ಮಿಲಿಟರಿ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ನೆಪ ಹುಡುಕುತ್ತಿದೆ. ಚೀನಾ ಈ ವರದಿಯನ್ನು ವಿರೋಧಿಸುತ್ತಿದೆ’ ಎಂದಿದ್ದಾರೆ.

ಪಾಕ್‌, ಲಂಕಾ, ಬಾಂಗ್ಲಾದಲ್ಲಿ ಸೇನಾ ನೆಲೆಗೆ ಚೀನಾ ಸ್ಕೆಚ್‌

ಅಮೆರಿಕದ ಸಂಸತ್‌ಗೆ ಸಲ್ಲಿಸಿದ ವರದಿಯಲ್ಲಿ ಆಘಾತಕಾರಿ ಅಂಶಮಲಕ್ಕಾ, ಹೊರ್ಮುಜ್‌ ಜಲಸಂಧಿ ಸೇರಿ ಹಲವೆಡೆ ಹಿಡಿತಕ್ಕೆ ಸ್ಕೀಂ==

ವಾಷಿಂಗ್ಟನ್‌: ಭಾರತದ ನೆರೆಹೊರೆಯ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ಹೊಸದಾಗಿ ಸೇನಾ ನೆಲೆ ಸ್ಥಾಪಿಸುವ ಬಗ್ಗೆ ಚೀನಾ ಗಂಭೀರ ಚಿಂತನೆ ನಡೆಸಿದೆ. ಈ ಮೂಲಕ ಮಲಕ್ಕಾ, ಹೊರ್ಮುಜ್‌ ಜಲಸಂಧಿ, ಆಫ್ರಿಕಾ ಮತ್ತು ಮಧ್ಯ ಪೂರ್ವ ದೇಶಗಳ ವಲಯದಲ್ಲಿ ತನ್ನ ಸೇನಾ ಪ್ರಾಬಲ್ಯವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.ಅಮೆರಿಕದ ಯುದ್ಧ ಇಲಾಖೆಯು ಅಮೆರಿಕ ಸಂಸತ್ತಿಗೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ಚೀನಾ ಸರ್ಕಾರದ ಮಿಲಿಟರಿ ಮತ್ತು ಭದ್ರತಾ ಬೆಳವಣಿಗೆಗಳ ಕುರಿತಾದ ವರದಿಯಲ್ಲಿ ಈ ಎಲ್ಲಾ ಅಂಶಗಳನ್ನು ಪ್ರಸ್ತಾಪಿಸಲಾಗಿದೆ.

ಮಲಕ್ಕಾ ಜಲಸಂಧಿ ಮೂಲಕ ಭಾರತ ಮತ್ತು ಅಮೆರಿಕ ಯಾವುದೇ ಸಂದರ್ಭದಲ್ಲಿ ತನ್ನನ್ನು ಸುತ್ತುವರೆಯುವ ಅವಕಾಶ ಇದೆ ಎಂಬುದೇ ಈ ವಲಯದಲ್ಲಿ ಸೇನಾ ನೆಲೆ ಸ್ಥಾಪಿಸುವುದಕ್ಕೆ ಚೀನಾಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ

ವರದಿಯಲ್ಲಿ ಏನಿದೆ?ಚೀನಾ ಹೊಸದಾಗಿ ಕನಿಷ್ಠ 20 ಸ್ಥಳಗಳಲ್ಲಿ ಸೇನಾ ನೆಲೆ ಸ್ಥಾಪಿಸುವ ಉದ್ದೇಶ ಹೊಂದಿದೆ

ಇವುಗಳಲ್ಲಿ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಸೇರಿ, ಆಫ್ರಿಕಾದ ಹಲವು ದೇಶಗಳಿವೆ

ಪಾಕಿಸ್ತಾನದಲ್ಲಿ ಗದ್ವಾರ್‌ ನೌಕಾ ನೆಲೆ ಜೊತೆಗೆ ಹೊಸ ಸೇನಾ ನೆಲೆ ಚಿಂತನೆ ಚೀನಾದ್ದು

2025ರ ಮೇ ವೇಳೆಗೆ ಪಾಕ್‌ಗೆ ಚೀನಾ 4ನೇ ತಲೆಮಾರಿನ 36 ಜೆ-10ಸಿ ವಿಮಾನ ನೀಡಿದೆ

ಇದು ಭಾರತದಲ್ಲಿರುವ ಫ್ರಾನ್ಸ್‌ ನಿರ್ಮಿತ ರಫೇಲ್‌ ಯುದ್ಧ ವಿಮಾನದ ಸಂಖ್ಯೆಗೆ ಸಮನಾಗಿದೆ

ಅಮೆರಿಕ- ಭಾರತ ಸ್ನೇಹ ತಡೆಯಲೆಂದೇ ಭಾರತದ ಜೊತೆ ಚೀನಾ ತನ್ನ ಸ್ನೇಹ ಹೆಚಿಸುತ್ತಿದೆ

ಗಡಿ ಬಿಕ್ಕಟ್ಟು ತಣ್ಣಗಾದ ಸಮಯವನ್ನು ಭಾರತದ ಜೊತೆ ಸ್ನೇಹವೃದ್ಧಿಗೆ ಚೀನಾ ಬಳಸುತ್ತಿದೆ

ಅರುಣಾಚಲದ ಮೇಲಿನ ಹಕ್ಕು ಸ್ಥಾಪನೆ ಈಗಲೂ ಚೀನಾ ಪ್ರಮುಖ ನಿಲುವಾಗಿದೆ ಇದೆ

ಟಿಬೆಟ್‌ ತೈವಾನ್ ರೀತಿಯಲ್ಲೇ ಅರುಣಾಚಲದ ಸ್ವಾಧೀನವೂ ಚೀನಾದ ಪ್ರಮುಖ ಅಪೇಕ್ಷೆ

ಚೀನಾ ಅತ್ಯಾಧುನಿಕ ಯುದ್ಧ ನೌಕೆ, 6ನೇ ತಲೆಮಾರಿನ ವಿಮಾನ, ಅಣ್ವಸ್ತ್ರ ಅಮೆರಿಕಕ್ಕೆ ಕಳವಳಕಾರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’
370ನೇ ವಿಧಿ ರದ್ದತಿ ಬಿಜೆಪಿಯ ಹೆಮ್ಮೆ : ಪ್ರಧಾನಿ ಮೋದಿ ಹರ್ಷ