* ಗಡಿಯಲ್ಲಿ ಚೀನಾ ಚಟುವಟಿಕೆ ಹೆಚ್ಚಳ
* ಮೂಲಭೂತ ಸೌಕರ‍್ಯ ಹೆಚ್ಚಿಸಿಕೊಳ್ಳುತ್ತಿರುವ ಚೀನಾ
* ಭಾರತಕ್ಕಿಂತ ಅನುಕೂಲಕರ ಸ್ಥಳದಲ್ಲಿ ಸೇನಾ ಪೋಸ್ಟ್ ಸ್ಥಾಪಿಸುವ ಹುನ್ನಾರ
* ಗಡಿ ಪ್ರದೇಶಗಳಿಗೆ ಭೇಟಿ ನೀಡಿದ ಹಿಮಾಚಲ ಸಿಎಂ ಮಾಹಿತಿ
* ಈ ಎಲ್ಲಾ ಮಾಹಿತಿ ಕೇಂದ್ರಕ್ಕೂ ರವಾನೆ: ಜೈರಾಂ ಠಾಕೂರ್
ಶಿಮ್ಲಾ(ಜೂ.02): ಇತ್ತ ಭಾರತದಲ್ಲಿ ಕೊರೋನಾ 2ನೇ ಅಲೆ ಹಾವಳಿ ಇರುವ ಸಂದರ್ಭದಲ್ಲೇ, ಅತ್ತ ಗಡಿಯಲ್ಲಿ ಚೀನಾ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಚೀನಾ ಜೊತೆ ಗಡಿ ಹಂಚಿಕೊಳ್ಳುವ ಕಿನ್ನಾರ್ ಮತ್ತು ಲಹಾಲ್ ಸ್ಪಿತಿ ಜಿಲ್ಲೆಯ ಗಡಿ ಪ್ರದೇಶಗಳಿಗೆ ಭೇಟಿ ನೀಡಿದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.
ಚೀನಾದಲ್ಲಿ ಹಕ್ಕಿ ಜ್ವರದ ರೂಪಾಂತರಿ ವೈರಸ್ ಪತ್ತೆ, ಕೋಳಿ ಮಾಂಸವೇ ಮೂಲ
‘ಟಿಬೆಟ್ ಪ್ರಾಂತ್ಯದಲ್ಲಿ ಚೀನಾ ಮೂಲಭೂತ ಸೌಕರ್ಯದ ಅಭಿವೃದ್ಧಿಯನ್ನು ಭಾರೀ ಪ್ರಮಾಣದಲ್ಲಿ ತ್ವರಿತಗೊಳಿಸಿದೆ. ಟಿಬೆಟ್ ಪ್ರಾಂತ್ಯದಲ್ಲಿ ಭಾರತದ ಪೋಸ್ಟ್ಗಳಿಗಿಂತಲೂ ಉತ್ತಮ ಅಥವಾ ಅನುಕೂಲಕರವಾದ ಸ್ಥಳವನ್ನು ಶೋಧಿಸಲು ಚೀನಾ ಯತ್ನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ಚೀನಾದ ಅಭಿವೃದ್ಧಿ ಕಾರ್ಯಗಳು ಚೀನಾದ ಗಡಿ ವ್ಯಾಪ್ತಿಯಲ್ಲೇ ಇವೆ. ಈ ಕುರಿತಾದ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಾಗುತ್ತದೆ. ಇಂಥ ಸಂಕಷ್ಟದ ಅವಧಿಯಲ್ಲೂ ಭಾರತೀಯ ಯೋಧರು ಚೀನಾದ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ನೈತಿಕ ಧೈರ್ಯ ತುಂಬುವುದು ನನ್ನ ಆದ್ಯ ಕರ್ತವ್ಯವಾಗಿದೆ’ ಎಂದಿದ್ದಾರೆ.
ಗಲ್ವಾನ್ ಸಂಘರ್ಷಕ್ಕೆ ಒಂದು ವರ್ಷ: ಚೀನಾ, ಭಾರತ ಸಂಬಂಧಕ್ಕೆ ತಿರುವು ಕೊಟ್ಟ ಹೋರಾಟ!
ಇತ್ತೀಚೆಗಷ್ಟೇ ಗಡಿ ಪ್ರದೇಶಗಳಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಅಲ್ಲಿನ ವಾಸ್ತವ ಸ್ಥಿತಿಯ ಮಾಹಿತಿಯನ್ನು ರಾಜ್ಯದ ಜನತೆ ಮುಂದಿಡಬೇಕು ಎಂದು ಹಿಮಾಚಲ ಕಾಂಗ್ರೆಸ್ ಆಗ್ರಹಿಸಿತ್ತು.