Omicron Case ಹೊಸ ತಳಿ ವೈರಸ್ ಅಪಯಕಾರಿ, ಚೀನಾ ಪಾಕ್‌ನಲ್ಲಿ ಮೊದಲ ಒಮಿಕ್ರೋನ್‌ ಕೇಸ್‌ !

Published : Dec 14, 2021, 03:17 AM IST
Omicron Case ಹೊಸ ತಳಿ ವೈರಸ್ ಅಪಯಕಾರಿ, ಚೀನಾ ಪಾಕ್‌ನಲ್ಲಿ ಮೊದಲ ಒಮಿಕ್ರೋನ್‌ ಕೇಸ್‌ !

ಸಾರಾಂಶ

ಚೀನಾ, ಪಾಕ್‌ನಲ್ಲಿ ಮೊದಲ ಒಮಿಕ್ರೋನ್‌ ಕೇಸ್‌  ಲಂಡನ್‌ನಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಸೋಂಕು 12 ಸೋಂಕಿತರ ವರದಿ ಇಂದು?

ನವದೆಹಲಿ(ಡಿ.14): ವಿಶ್ವದಲ್ಲಿ ಮೊದಲ ಕೊರೋನಾ ವೈರಸ್‌ ಪತ್ತೆಯಾದ ಚೀನಾದಲ್ಲಿ, ಇದೇ ಮೊದಲ ಬಾರಿಗೆ ಒಮಿಕ್ರೋನ್‌ ವೈರಸ್‌ ಪತ್ತೆಯಾಗಿದೆ. ಉತ್ತರ ಚೀನಾದ ತಿಯಾನ್‌ಜಿನ್‌ ನಗರದಲ್ಲಿ ದೇಶದ ಮೊದಲ ಕೇಸು ಪತ್ತೆಯಾಗಿದೆ. ಈ ನಡುವೆ ನೆರೆಯ ಪಾಕಿಸ್ತಾನದಲ್ಲೂ ಸೋಮವಾರ ಮೊದಲ ರೂಪಾಂತರಿ ಪತ್ತೆಯಾಗಿದೆ. ನೆರೆ ರಾಷ್ಟ್ರಗಳಲ್ಲಿ ಓಮಿಕ್ರಾನ್ ಕೇಸ್ ಪತ್ತೆಯಾಗಿರುವುದು ಇದೀಗ ಭಾರತದ ಆತಂಕ ಹೆಚ್ಚಿಸಿದೆ. ಭಾರತದಲ್ಲಿ ಈಗಾಗಲೇ 40 ಪ್ರಕರಣ ವರದಿಯಾಗಿದ್ದು, ಆತಂಕ ಬೇಡ ಅಪಾಯಕಾರಿ ಅಲ್ಲ ಎಂದಿದ್ದ ಹಲವರು ಇದೀಗ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದಾರೆ.

ಮತ್ತೆ 2 ಒಮಿಕ್ರೋನ್‌ ಕೇಸ್‌ ಪತ್ತೆ
ಮುಂಬೈ: ಮಹಾರಾಷ್ಟ್ರದಲ್ಲಿ ಸೋಮವಾರ ಇನ್ನೆರಡು ಒಮಿಕ್ರೋನ್‌ ಕೇಸ್‌ ಪತ್ತೆಯಾಗಿದ್ದು, ರಾಜ್ಯದಲ್ಲಿ ಪತ್ತೆಯಾದ ಒಟ್ಟು ಕೇಸ್‌ಗಳ ಸಂಖ್ಯೆ 20ಕ್ಕೆ ಏರಿದೆ.

Omicron Variant: ಮೊದಲ ಬಲಿ ಪಡೆದುಕೊಂಡ ಒಮಿಕ್ರೋನ್

ಲಂಡನ್‌ನಿಂದ ಬಂದ ಇಬ್ಬರಿಗೆ ಸೋಂಕು
ಲಂಡನ್‌ನಿಂದ ಸೋಮವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಹೈರಿಸ್ಕ್‌ ದೇಶಗಳಿಂದ ರಾಜ್ಯಕ್ಕೆ ಆಗಮಿಸಿ ಸೋಂಕು ದೃಢಪಟ್ಟವರ ಸಂಖ್ಯೆ 9ಕ್ಕೆ ಹೆಚ್ಚಳವಾಗಿದೆ.

ಒಮಿಕ್ರೋನ್‌ ಸೋಂಕು ಹೆಚ್ಚಿರುವ ಹೈರಿಸ್ಕ್‌ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಡಿ.1ರಿಂದ 12ವರೆಗೂ ಇಂಗ್ಲೆಂಡ್‌ನಿಂದ ಬಂದ ಐದು ಮಂದಿ, ಜರ್ಮನಿಯಿಂದ ಬಂದ ಇಬ್ಬರು ಸೇರಿ ಏಳು ಪ್ರಯಾಣಿಕರಲ್ಲಿ ಸೋಂಕು ದೃಢಪಟ್ಟಿತ್ತು. ಲಂಡನ್‌ನಿಂದ ಸೋಮವಾರ ಬೆಳಗಿನ ಜಾವ ಬಂದ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೊಳಪಡಿಸಿದಾಗ ಮತ್ತೆ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇಬ್ಬರಲ್ಲೂ ಸೋಂಕಿನ ಲಕ್ಷಣಗಳಿರಲಿಲ್ಲ. ವಂಶವಾಹಿ ಪರೀಕ್ಷೆಗೆ ಅವರ ಗಂಟಲು ದ್ರವ ಮಾದರಿ ಕಳುಹಿಸಿ, ಕೂಡಲೇ ಅವರನ್ನು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Omicron Test Kit ವಾರಗಟ್ಟಲೇ ಕಾಯಬೇಕಿಲ್ಲ 2 ಗಂಟೆಯಲ್ಲಿ ರಿಸಲ್ಟ್, ICMR ಅಭಿವೃದ್ಧಿ ಪಡಿಸಿದ ಟೆಸ್ಟ್ ಕಿಟ್!

ಒಮಿಕ್ರೋನ್‌ ಸೋಂಕಿತರ ಆರೋಗ್ಯ ಸ್ಥಿರ
ಒಮಿಕ್ರೋನ್‌ ರೂಪಾಂತರಿ ದೃಢಪಟ್ಟಮೂವರ ಪೈಕಿ ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಸೋಂಕಿತರ ಆರೋಗ್ಯ ಸ್ಥಿರವಾಗಿದೆ ಎಂದು ಬೌರಿಂಗ್‌ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಸೋಂಕಿತರು ಆರೋಗ್ಯವಾಗಿದ್ದಾರೆ. ಮೊದಲ ಸೋಂಕಿತ ವೈದ್ಯ ಸಂಪೂರ್ಣ ಗುಣಮುಖರಾಗಿದ್ದಾರೆ. ಇವರ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ಮಾರ್ಗಸೂಚಿಯಂತೆ ಎರಡು ಬಾರಿ ಕೊರೋನಾ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಪರೀಕ್ಷಾ ವರದಿ ಸೋಮವಾರ ನೆಗೆಟಿವ್‌ ಬಂದಿದ್ದು, ಮತ್ತೊಂದು ಪರೀಕ್ಷೆ ನಡೆಸಲಾಗಿದೆ. ವರದಿ ಮಂಗಳವಾರ ಬರಲಿದೆ.

ಮೂರನೇ ಸೊಂಕಿತರ ಕೊರೋನಾ ದೃಢಪಟ್ಟಕೂಡಲೇ (ಡಿ.3ಕ್ಕೆ) ಆಸ್ಪತ್ರೆ ದಾಖಲಾಗಿದ್ದು, ಸೊಂಕಿನ ಲಕ್ಷಣಗಳಿಲ್ಲ. ಸದ್ಯ ಗುಣಮುಖರಾಗಿದ್ದು, ಮಂಗಳವಾರ ಅಂತಿಮ ತಪಾಸಣೆ ನಡೆಸಿ ಬಿಡುಗಡೆ ನಿರ್ಧರಿಸಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದರು.

ಮತ್ತೊಬ್ಬ ಸೋಂಕಿತ ನಕಲಿ ಸೋಂಕು ವರದಿ ಸಲ್ಲಿಸಿ ವಿದೇಶಕ್ಕೆ ತೆರಳಿದ್ದು, ಆತನಿಗೆ ನಕಲಿ ವರದಿ ನೀಡಿದ ಲ್ಯಾಬ್‌ ಸಿಬ್ಬಂದಿಯನ್ನು ಬಂಧಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ಇದಲ್ಲದೆ, ವಿದೇಶದಿಂದ ಬಂದು ಕೊರೋನಾ ಸೋಂಕು ದೃಢಪಟ್ಟಒಂಬತ್ತು ಪ್ರಯಾಣಿಕರ ಪೈಕಿ ಐದು ಮಂದಿ ಬೌರಿಂಗ್‌ನಲ್ಲಿ, ನಾಲ್ವರು ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರೊಬ್ಬರಿಗೂ ಸೋಂಕಿನ ಲಕ್ಷಣಗಳಿಲ್ಲ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

12 ಸೋಂಕಿತರ ವರದಿ ಇಂದು?
ವಿದೇಶದಿಂದ ಬಂದು ವಿಮಾನ ನಿಲ್ದಾಣದಲ್ಲೇ ಸೋಂಕು ದೃಢಪಟ್ಟವರು, ಹೋಂ ಕ್ವಾರಂಟೈನ್‌ನಲ್ಲಿದ್ದು ಸೋಂಕು ದೃಢಪಟ್ಟವರ ಸೇರಿ 12 ಮಂದಿಯ ವಂಶವಾಹಿ ಪರೀಕ್ಷಾ ವರದಿ ಮಂಗಳವಾರ ಬರುವ ಸಾಧ್ಯತೆಗಳಿವೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ ಬಾಲಸುಂದರ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌