ಮಳೆಯಲ್ಲಿ ಜೋಳ ಮಾರುತ್ತಿದ್ದ ತಾಯಿ ಮತ್ತು ಮಕ್ಕಳಿಗೆ ಕಾರ್‌ನಲ್ಲಿ ಬಂದ ವ್ಯಕ್ತಿ ಸಹಾಯ ಮಾಡಿದ ಘಟನೆ ವೈರಲ್ ಆಗಿದೆ. ಮಕ್ಕಳ ಮುಖದಲ್ಲಿ ನಗು ತರಿಸಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಬಡತನ ವಯಸ್ಸು, ಯಾರು ಎಂಬುದನ್ನು ನೋಡಲ್ಲ. ಗಾಳಿ-ಮಳೆ, ಬಿಸಿಲು ಏನೇ ಇರಲಿ ಗೇಣುದ್ದದ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಪ್ರತಿನಿತ್ಯವೂ ದುಡಿಯಲೇಬೇಕು. ಮಳೆ ಬರುತ್ತಿದ್ದರೆ ಬಿಸಿಯಾದ ಆಹಾರ ಕಾಫೀ-ಟೀಗೆ ಬೇಡಿಕೆ ಹೆಚ್ಚಾಗುತ್ತದೆ. ಈ ವ್ಯಾಪಾರಿಗಳು ಮಳೆ ಬರುತ್ತಿದ್ದರೂ ವ್ಯಾಪಾರ ಮಾಡುತ್ತಿರುತ್ತಾರೆ. ಒಂದು ಆಯಕಟ್ಟಿನ ಪ್ರದೇಶದಲ್ಲಿ ಕುಳಿತು ವ್ಯವಹಾರ ನಡೆಸಿದರೆ ಯಾರಿಗೂ ಏನು ಅನ್ನಿಸಿಲ್ಲ. ಆದ್ರೆ ಕೆಲವರು ಮಳೆ ಸುರಿಯುತ್ತಿದ್ರೂ ರಸ್ತೆಬದಿಯೇ ನಿಂತ್ಕೊಂಡು ವ್ಯಾಪಾರ ಮಾಡುತ್ತಿರುತ್ತಾರೆ. ಇವರಿಗೆ ಆ ದಿನದ ಹೊಟ್ಟೆ ತುಂಬಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಇಂದು ನಾವು ನಿಮಗೆ ದಿನನಿತ್ಯದ ಹೊಟ್ಟೆ ತುಂಬಿಸಿಕೊಳ್ಳುವ ಒಂದು ಕುಟುಂಬದ ಮಾಹಿತಿ ನೀಡುತ್ತಿದ್ದೇವೆ.
ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ತಾಯಿ ಜೊತೆ ಇಬ್ಬರು ಮಕ್ಕಳು ಮೆಕ್ಕೆಜೋಳ ಮಾರಾಟ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. @swagsedoctorofficial ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿಕೊಳ್ಳಲಾಗಿದೆ. ಈ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಯಾವಾಗಲೂ ಪಾಸಿಟಿವ್ ವಿಡಿಯೋಗಳನ್ನು ಪೋಸ್ಟ್ ಮಾಡಲಾಗುತ್ತದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕರಿಬ್ಬರು ತಾಯಿಗೆ ಮೆಕ್ಕೆಜೋಳ ಮಾರಾಟದಲ್ಲಿ ಸಹಾಯ ಮಾಡುತ್ತಿರೋದನ್ನು ಗಮನಿಸಬಹುದು.
ರಸ್ತೆಬದಿ ಸಣ್ಣದಾದ ಅಂಗಡಿ ಮಾಡ್ಕೊಂಡು ಮಹಿಳೆ ಮೆಕ್ಕೆಜೋಳ ಸುಡುತ್ತಿರುತ್ತಾರೆ. ಸಣ್ಣ ಮಳೆ ಬರುತ್ತಿದ್ದರೂ ರಸ್ತೆಬದಿ ನಿಂತು ಮೆಕ್ಕೆಜೋಳ ಮಾರಾಟ ಮಾಡುತ್ತಿರುತ್ತಾರೆ. ಈ ಸಮಯದಲ್ಲಿ ರಸ್ತೆ ಬದಿ ಕಾರ್ ನಿಲ್ಲುತ್ತದೆ. ಕಾರ್ ನಿಲ್ಲುತ್ತಿದ್ದಂತೆ ಓಡಿ ಬರುವ ಮಕ್ಕಳು ಬಿಸಿಯಾದ ಜೋಳ ಇದೆ ಬೇಕಾ ಎಂದು ಕೇಳುತ್ತಾರೆ.
ಇದನ್ನೂ ಓದಿ: ಹರಕಲು-ಮುರುಕು ಸಲೂನ್‌ಗೆ ದೇವರಾಗಿ ಬಂದ ಯುವಕ; ಕಣ್ಣೀರಿಟ್ಟು ಭೂತಾಯಿಗೆ ನಮಸ್ಕರಿಸಿ ಕುಣಿದಾಡಿದ ಕ್ಷೌರಿಕ
ಕಾರ್‌ನಲ್ಲಿ ಕುಳಿತಿದ್ದ ವ್ಯಕ್ತಿ ಒಂದು ಮೆಕ್ಕೆಜೋಳಕ್ಕೆ ಎಷ್ಟು ಬೆಲೆ ಎಂದು ಕೇಳುತ್ತಾನೆ. ಮಕ್ಕಳು 20 ರೂ ಮತ್ತು 30 ರೂ.ಯದ್ದು ಇದೆ. ನಿಮಗೆ ಯಾವುದನ್ನು ತಂದು ಕೊಡಲಿ ಎಂದು ಕೇಳಿದಾಗ ಕಾರ್‌ನಲ್ಲಿದ್ದ ವ್ಯಕ್ತಿ 30 ರೂಪಾಯಿದ್ದು ಎಂದು ಹೇಳಿದಾಗ ಮಕ್ಕಳು ಅಮ್ಮನ ಬಳಿಯಲ್ಲಿ ಹೋಗಿ ಸುಟ್ಟ ಮೆಕ್ಕೆಜೋಳದ ತೆನೆ ತಂದು ಕೊಡುತ್ತಾರೆ. ಮೆಕ್ಕೆಜೋಳ ತೆಗೆದುಕೊಳ್ಳುತ್ತಿದ್ದಂತೆ ನನ್ನ ಬಳಿ ಹಣ ಇಲ್ಲವಲ್ಲಾ ಎಂದು ತಮಾಷೆ ಮಾಡುತ್ತಾರೆ. ಇದಕ್ಕೆ ಮಕ್ಕಳು ನಗುತ್ತಲೇ ಕೊಡಿ ಎಂದು ಹೇಳುತ್ತವೆ. ನಂತರ ವ್ಯಕ್ತಿ 100 ರೂ. ಕೊಡುತ್ತಾರೆ. 100 ರೂಪಾಯಿ ಸಿಗುತ್ತಿದ್ದಂತೆ ಅಮ್ಮನ ಬಳಿ ಹೋಗುತ್ತಾರೆ. ಕಾರ್‌ನಲ್ಲಿದ್ದ ವ್ಯಕ್ತಿ ಚಿಲ್ಲರೆ ಕೇಳಿದಾಗ ಅಮ್ಮನ ಬಳಿಯಲ್ಲಿದೆ ಎಂದು ಹೇಳಿದಾಗ ವ್ಯಕ್ತಿ ನನಗೇನೂ ಬೇಡ ಎಂದು ಮಕ್ಕಳತ್ತ ಕೈ ಬೀಸಿ ಹೋಗುತ್ತಾರೆ.
ಈ ವಿಡಿಯೋಗೆ 5 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದ್ದು, ಸಾವಿರಾರು ಕಮೆಂಟ್‌ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು, ಹೀಗೆ ಒಬ್ರು ಮತ್ತೊಬ್ಬರ ಮುಖದ ಮೇಲೆ ನಗು ತರುವ ಕೆಲಸ ಮಾಡುತ್ತಿರಬೇಕು. ಹೀಗಿದ್ರೆ ಮಾತ್ರ ಸಮಾಜ ಸಂತೋಷವಾಗಿರುತ್ತದೆ ಎಂದು ಹೇಳಿದ್ದಾರೆ. ಮಕ್ಕಳ ನಗು ನೋಡಿ ಮನಸ್ಸಿನಲ್ಲಿ ಉಲ್ಲಾಸ ಉಂಟಾಗುತ್ತದೆ. ಇದೊಂದು ಪಾಸಿಟಿವ್ ವಿಡಿಯೋ ಎಂದು ನೆಟ್ಟಿಗರು ಹೇಳುತ್ತಾರೆ.
ಇದನ್ನೂ ಓದಿ: ಓ ದೇವ್ರೇ, ಇಂಥಾ ಕಷ್ಟ ಯಾರಿಗೂ ಬೇಡ; ಪಾನಿಪುರಿ ವ್ಯಾಪಾರಿ ಕಷ್ಟಕ್ಕೆ ಮರುಗಿದ ಜನರು