
ಲುಧಿಯಾನ(ಏ.21): ಅವಧಿ ಮೀರಿದ ಚಾಕೋಲೆಟ್ ಸೇವಿಸಿ ಒಂದೂವರೆ ವರ್ಷದ ಹೆಣ್ಣು ಮಗು ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಪಂಜಾಬ್‌ನ ಲುಧಿಯಾನದಲ್ಲಿ ನಡೆದಿದೆ. ಬಾಲಕಿ ತನ್ನ ಕುಟುಂಬದ ಜೊತೆಗೆ ಪಟಿಯಾಲದ ಸಂಬಂಧಿಕರ ಮನೆಗೆ ತೆರಳಿದ್ದಳು. ಅಲ್ಲಿಂದ ಹಿಂದಿರುಗುವ ಸಂದರ್ಭದಲ್ಲಿ ಸಂಬಂಧಿಕರು ಆಕೆಗೆ ಚಾಕೋಲೆಟ್ ಸೇರಿದಂತೆ ಇತರ ತಿನಿಸುಗಳನ್ನು ನೀಡಿದ್ದಾರೆ.
ಅದನ್ನು ಸೇವಿಸುತ್ತಿದ್ದಂತೆ ಬಾಲಕಿ ರಕ್ತವಾಂತಿ ಮಾಡಿಕೊಂಡಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಅವಧಿ ಮೀರಿದ ಚಾಕೋಲೆಟ್ ಸೇವನೆಯೇ ಇದಕ್ಕೆ ಕಾರಣವೆಂದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ.
ಬಂಧನಕ್ಕೂ ಮುನ್ನವೇ ಇನ್ಸುಲಿನ್ ಪಡೆಯುವುದು ನಿಲ್ಲಿಸಿದ್ದ ದೆಹಲಿ ಸಿಎಂ ಕೇಜ್ರಿವಾಲ್
ಘಟನೆ ಸಂಬಂಧ ಅಂಗಡಿ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಳೆದಮಾರ್ಚ್‌ನಲ್ಲಿ ಪಂಜಾಬ್‌ನಲ್ಲಿ ಇಂತಹಘಟನೆಯೊಂದು ನಡೆದಿತ್ತು. 10 ವರ್ಷದ ಬಾಲಕಿ ತನ್ನ ಹುಟ್ಟುಹಬ್ಬದ ದಿನವೇ ಹಳಸಿದ ಕೇಕ್ ತಿಂದು ತೀವ್ರ ಅಸ್ವಸ್ಥಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ