ಲೋಕಸಭಾ ಚುನಾವಣೆ 2024: ಹರ್ಯಾಣದ 118 ವರ್ಷದ ಧರಂವೀರ್‌ ವಿಶ್ವದ ಅತಿ ಹಿರಿಯ ಮತದಾರ

Published : Apr 21, 2024, 10:40 AM IST
ಲೋಕಸಭಾ ಚುನಾವಣೆ 2024: ಹರ್ಯಾಣದ 118 ವರ್ಷದ ಧರಂವೀರ್‌ ವಿಶ್ವದ ಅತಿ ಹಿರಿಯ ಮತದಾರ

ಸಾರಾಂಶ

118 ವರ್ಷ ವಯಸ್ಸಿನ ಪಲ್ವಾಲ್ ಜಿಲ್ಲೆಯ ಧರಂವೀರ್ ಹರಿಯಾಣದ ಅತ್ಯಂತ ಹಿರಿಯ ಪುರುಷ ಮತದಾರರಾಗಿದ್ದರೆ, 117 ವರ್ಷ ವಯಸ್ಸಿನ ಸಿರ್ಸಾದ ಬಲ್ಬೀರ್ ಕೌರ್ ಅತ್ಯಂತ ಹಿರಿಯ ಮಹಿಳಾ ಮತದಾರರಾಗಿದ್ದಾರೆ: ಮುಖ್ಯ ಚುನಾವಣಾಧಿಕಾರಿ ಅನುರಾಗ್ ಅಗರ್ವಾಲ್ 

ಚಂಡೀಗಢ(ಏ.21): ದೇಶದ ಅನೇಕ ಕಡೆ ಶತಾಯುಷಿ ಮತದಾರರು ಲೋಕಸಭೆ ಚುನಾವಣೆಯಲ್ಲಿ ಉತ್ಸಾಹದಿಂದ ಮತ ಹಾಕುತ್ತಿದ್ದಾರೆ. ಈ ನಡುವೆ ಬ್ರಿಟನ್‌ನ 114 ವರ್ಷದ ಮತದಾರರೊಬ್ಬರು ವಿಶ್ವದ ಅತಿ ಹಿರಿಯ ಮತದಾರ ಎಂಬ ಗಿನ್ನೆಸ್‌ ದಾಖಲೆಗೆ ಪಾತ್ರರಾಗಿದ್ದರು. ಆದರೆ ಗಿನ್ನೆಸ್‌ ದಾಖಲೆ ಬರೆಯದೇ ಇದ್ದರೂ 118 ವರ್ಷದ ಮತದಾರರೊಬ್ಬರು ಭಾರತದ ಹರ್ಯಾಣದಲ್ಲಿ ಇದ್ದಾರೆ ಎಂಬುದು ವಿಶೇಷ.

118 ವರ್ಷ ವಯಸ್ಸಿನ ಪಲ್ವಾಲ್ ಜಿಲ್ಲೆಯ ಧರಂವೀರ್ ಹರಿಯಾಣದ ಅತ್ಯಂತ ಹಿರಿಯ ಪುರುಷ ಮತದಾರರಾಗಿದ್ದರೆ, 117 ವರ್ಷ ವಯಸ್ಸಿನ ಸಿರ್ಸಾದ ಬಲ್ಬೀರ್ ಕೌರ್ ಅತ್ಯಂತ ಹಿರಿಯ ಮಹಿಳಾ ಮತದಾರರಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಅನುರಾಗ್ ಅಗರ್ವಾಲ್ ತಿಳಿಸಿದ್ದಾರೆ.

ಮೋದಿ ಭ್ರಷ್ಟಾಚಾರದ ಶಾಲೆ ನಡೆಸುತ್ತಿದ್ದಾರೆ: ರಾಹುಲ್‌ ಗಾಂಧಿ ಕಿಡಿ

ಅದೇ ರೀತಿ ಸಿರ್ಸಾ ಜಿಲ್ಲೆಯ ಬಲ್ಬೀರ್ ಕೌರ್ 117 ವರ್ಷ, ಸೋನಿಪತ್ ಜಿಲ್ಲೆಯ ಭಗವಾನಿ 116 ವರ್ಷ, ಪಾಣಿಪತ್ ಜಿಲ್ಲೆಯ ಲಕ್ಷಿಷೇಕ್ 115 ವರ್ಷ ವಯಸ್ಸಿನವರು ಎಂದು ಅಗರ್ವಾಲ್ ಹೇಳಿದ್ದಾರೆ.

ರೋಹ್ಟಕ್ ಜಿಲ್ಲೆಯ ಚಂದ್ರೋ ಕೌರ್ ಮತ್ತು ಫತೇಹಾಬಾದ್ ಜಿಲ್ಲೆಯ ರಾಣಿ- ಇಬ್ಬರೂ 112 ವರ್ಷ ವಯಸ್ಸಿನವರಾಗಿದ್ದರೆ, ಕುರುಕ್ಷೇತ್ರ ಜಿಲ್ಲೆಯ ಆಂಟಿದೇವಿ, ಸರ್ಜಿತ್ ಕೌರ್ ಮತ್ತು ಚೋಬಿ ದೇವಿ ಅವರೆಲ್ಲರೂ 111 ವರ್ಷ ವಯಸ್ಸಿನವರು.
‘ಅಂತೆಯೇ ರೇವಾರಿ ಜಿಲ್ಲೆಯ ನಾರಾಯಣಿ 110 ವರ್ಷ, ಕೈತಾಲ್ ಜಿಲ್ಲೆಯ ಫುಲ್ಲಾ 109 ವರ್ಷ, ಫರೀದಾಬಾದ್ ಜಿಲ್ಲೆಯ ಚಂದೇರಿ ದೇವಿ 109 ವರ್ಷ, ಜಿಂದ್ ಜಿಲ್ಲೆಯ ರಾಮದೇವಿ 108 ವರ್ಷ, ನೂಹ್ ಜಿಲ್ಲೆಯ ಹರಿ 108 ವರ್ಷ, ಮೇವಾ. ಜಜ್ಜರ್ ಜಿಲ್ಲೆಯ ದೇವಿ 106 ಮತ್ತು ಕರ್ನಾಲ್ ಜಿಲ್ಲೆಯ ಗುಲ್ಜಾರ್ ಸಿಂಗ್, ಹಿಸಾರ್ ಜಿಲ್ಲೆಯ ಶಾಡ್ಕಿನ್ ಮತ್ತು ಶ್ರೀರಾಮ್ ಮತ್ತು ಚಾರ್ಕಿ ದಾದ್ರಿ ಜಿಲ್ಲೆಯ ಗೀನಾ ದೇವಿ 106 ವರ್ಷ ವಯಸ್ಸಿನ ಮತದಾರರು, ಭಿವಾನಿ ಜಿಲ್ಲೆಯ ಹರದೇವಿ 103 ಹಾಗೂ ಯಮುನಾನಗರದ ಫೂಲ್‌ವತಿ 110 ವರ್ಷ ವಯಸ್ಸಿನವರು’ ಎಂದು ಅವರು ಹೇಳಿದರು.

ಹರಿಯಾಣವು 1.99 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿದ್ದು, ಅವರು ಮೇ 25 ರಂದು 6ನೇ ಹಂತದ ಸಾರ್ವತ್ರಿಕ ಚುನಾವಣೆಯಲ್ಲಿ 10 ಲೋಕಸಭಾ ಸ್ಥಾನಗಳಿಗೆ ಮತ ಚಲಾಯಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!