
ಪ್ರಯಾಗ್‌ರಾಜ್ (ಜೂ.30): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಪ್ರಯಾಗ್‌ರಾಜ್‌ನಲ್ಲಿ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಋಏ. ಈ ವೇಳೆ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನಿಂದ ವಶಪಡಿಸಿಕೊಂಡಿದ್ದ ಭೂಮಿಯಲ್ಲಿ ಉತ್ತರ ಪ್ರದೇಶ ಸರ್ಕಾರ, ಪಿಎಂ ಆವಾಸ್ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ಫ್ಲ್ಯಾಟ್‌ಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಗ್ಯಾಂಗ್‌ಸ್ಟರ್ ಈ ಜಮೀನುಗಳನ್ನು ಸಾಮಾನ್ಯ ನಾಗರಿಕರಿಂದ ಬೆದರಿಸಿ ಅಕ್ರಮವಾಗಿ ತನ್ನ ಹೆಸರಿಗೆ ಮಾಡಿಕೊಂಡಿದ್ದ. ಮಾಫಿಯಾ ಹತ್ತಿಕ್ಕುವ ಯೋಜನೆಯ ಭಾಗವಾಗಿ ಉತ್ತರ ಪ್ರದೇಶ ಸರ್ಕಾರ, ಪ್ರಯಾಗ್‌ರಾಜ್‌ನಲ್ಲಿದ್ದ ಈ ಭೂಮಿಯನ್ನು ವಶಪಡಿಸಿಕೊಂಡಿತ್ತು. ಅತೀಕ್ ಅಹ್ಮದ್‌ನನ್ನು ಅಪರಿಚಿತ ವ್ಯಕ್ತಿಗಳು ಪೊಲೀಸ್ ಕಸ್ಟಡಿಯಲ್ಲಿದ್ದ ಸಮಯದಲ್ಲಿಯೇ ಶೂಟ್ ಮಾಡಿ ಕೊಂದಿದ್ದರು. ಪ್ರಯಾಗ್‌ರಾಜ್‌ಗೆ ಹೆಲಿಪ್ಯಾಡ್‌ನಲ್ಲಿ ಬಂದಿದ್ದ ಯೋಗಿ ಆದಿತ್ಯನಾಥ್ ಅಲ್ಲಿಂದ ಕಾರ್ಯಕ್ರಮ ನಡೆಯುವ ಸ್ಥಳವಾದ ಲೂಕರ್‌ಗಂಜ್‌ಗೆ ಕಾರ್‌ನಲ್ಲಿ ಆಗಮಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಈ ಹೌಸಿಂಗ್ ಸೊಸೈಟಿಯನ್ನು ಉದ್ಘಾಟನೆ ಮಾಡಬೇಕಿತ್ತಾದರೂ, ಕೊನೆಗೆ ಸ್ವತಃ ಯೋಗಿ ಅನಾವರಣ ಮಾಡಿದರು.
ಯೋಗಿ ಆದಿತ್ಯನಾಥ್ ಅವರು ಪ್ರಯಾಗ್‌ರಾಜ್‌ನ ಲುಕರ್‌ಗಂಜ್‌ನಲ್ಲಿ ಅತೀಕ್ ಅಹ್ಮದ್ ಅವರ ಸ್ವಾಧೀನದಿಂದ ಮುಕ್ತವಾದ ಭೂಮಿಯಲ್ಲಿ ನಿರ್ಮಿಸಲಾದ ಪ್ರಧಾನ ಮಂತ್ರಿ ಆವಾಸ್‌ನ 76 ಫಲಾನುಭವಿಗಳಿಗೆ ಅವರ ಮನೆಗಳ ಕೀಗಳನ್ನು ಹಸ್ತಾಂತರಿಸಲಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸುಮಾರು 1000 ಕೋಟಿ ರೂ.ಗಳ 250 ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ಮಾಫಿಯಾ ಡಾನ್ ಅತೀಕ್ ಅಹ್ಮದ್‌ನಿಂದ ಭೂಮಿಯನ್ನು ವಶಪಡಿಸಿಕೊಂಡ 2021ರಲ್ಲಿಯೇ ಇಲ್ಲಿ ಬಡವರಿಗಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಫ್ಲ್ಯಾಟ್ ನಿರ್ಮಾಣ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು. ಅದರೊಂದಿಗೆ 2021ರ ಡಿಸೆಂಬರ್‌ನಲ್ಲಿ ಇದರ ಭೂಮಿ ಪೂಜೆ ಕೂಡ ನೆರವೇರಿದ್ದರು. ಕೇವಲ ಒಂದೂವರೆ ವರ್ಷದಲ್ಲಿಯೇ ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರ ಈ ಸ್ಥಳದಲ್ಲಿ 76 ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಿದ್ದು, ಲಾಟರಿ ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ.
ರೇಪ್ ಆರೋಪಿ ಮನೆ ಮೇಲೆ ಬುಲ್ಡೋಜರ್, ಕ್ರಿಮಿನಲ್ ಎನ್‌ಕೌಂಟರ್; ಮತ್ತೆ ಸದ್ದು ಮಾಡಿದ ಯೋಗಿ!
ಫ್ಲ್ಯಾಟ್‌ಗಳಿಗೆ ಕೇಸರಿ ಬಣ್ಣ: ಲುಕರ್‌ಗಂಜ್‌ನಲ್ಲಿ ನಿರ್ಮಾಣವಾಗಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗಳಿಗೆ ಕೇಸರಿ ಬಣ್ಣಗಳನ್ನು ಬಳಿಯಲಾಗಿದೆ. ಇಲ್ಲಿ 76 ಫ್ಲ್ಯಾಟ್‌ಗಳಿಗೆ ಒಟ್ಟು 6071 ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇಲ್ಲಿನ ಪ್ರತಿ ಫ್ಲ್ಯಾಟ್ 1731 ಚದರಅಡಿ ವಿಸ್ತೀರ್ಣ ಹೊಂದಿದೆ ಎಂದು ಪ್ರಯಾಗ್ ರಾಜ್ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.ಸುಮಾರು ಒಂದೂವರೆ ವರ್ಷದಲ್ಲಿ ಫ್ಲಾಟ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಪಿಡಿಎ ವಿಸಿ ಅರವಿಂದ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಒಂದು ಫ್ಲ್ಯಾಟ್‌ಗಾಗಿ 80 ಬಡವರು ಅರ್ಜಿ ಸಲ್ಲಿಸಿದ್ದಾರೆ. ಲಕ್ಕಿ ಡ್ರಾ ಮೂಲಕ ಅರ್ಹರಿಗೆ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ.
ಬುಲ್ಡೋಜರ್ ಬಾಬಾ ಯೋಗಿಗೆ ಟ್ವಿಟ್ಟರ್‌ನಲ್ಲಿ 2.5 ಕೋಟಿ ಹಿಂಬಾಲಕರು: ಈ ದಾಖಲೆ ಬರೆದ ದೇಶದ ಮೊದಲ ಸಿಎಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ