
ಸಾರ್ವಜನಿಕ (Public) ಪ್ರದೇಶದಲ್ಲಿ ರಾಜಕಾರಣಿ (politician) ಗಳು ಡಬಲ್ ಆಕ್ಟಿವ್ ಆಗಿರ್ತಾರೆ. ಮನೆಯಲ್ಲಿ ಮಾಡದ ಕೆಲಸವನ್ನು ಸಾರ್ವಜನಿಕರ ಮುಂದೆ ಮಾಡ್ಲೇಬೇಕು. ಅದನ್ನು ವೋಟಿಗಾಗಿ ಅಂದ್ಕೊಳ್ಳಿ ಇಲ್ಲ ಅವರ ಆಸಕ್ತಿ ಅಂದ್ಕೊಳ್ಳಿ ಅದು ನಿಮಗೆ ಬಿಟ್ಟಿದ್ದು. ಪಬ್ಲಿಕ್ ಪ್ಲೇಸ್ ನಲ್ಲಿ ಸಿಎಂ ಆದಿಯಾಗಿ ರಾಜಕಾರಣಿಗಳು ಪೊರಕೆ ಹಿಡಿಯೋದ್ರಿಂದ ಹಿಡಿದು ಅಡುಗೆಯವರೆಗೆ ಎಲ್ಲ ಕೆಲಸವನ್ನು ಮಾಡ್ತಾರೆ. ಮಧ್ಯಪ್ರದೇಶದ ಸಿಎಂ ಈಗ ಟೀ ಮಾಡಿ ಸುದ್ದಿಯಲ್ಲಿದ್ದಾರೆ. ಸತ್ನಾದ ಚಿತ್ರಕೂಟಕ್ಕೆ ಭೇಟಿ ನೀಡಿದ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ (Madhya Pradesh Chief Minister Mohan Yadav) ವಿಡಿಯೋ ವೈರಲ್ ಆಗಿದೆ. ಮೋಹನ್ ಯಾದವ್, ಬೀದಿ ಬದಿ ಸ್ಟಾಲ್ ನಲ್ಲಿ ಟೀ ಮಾಡಿದ್ದಲ್ಲದೆ ಎಲ್ಲರಿಗೂ ತಮ್ಮ ಟೀ ರುಚಿ ತೋರಿಸಿದ್ದಾರೆ.
ಕಾಮದ್‌ಗಿರಿ ಪರ್ವತದ ಮೇಲೆ ಕಾಮ್ತಾನಾಥ (Kamtanath) ದೇವರಿಗೆ ಪ್ರದಕ್ಷಿಣೆ ಹಾಕಿದ ಮುಖ್ಯಮಂತ್ರಿ, ರಸ್ತೆ ಬದಿಯಲ್ಲಿದ್ದ ಟೀ ಅಂಗಡಿಯೊಂದಕ್ಕೆ ಏಕಾಏಕಿ ಬಂದು ಚಹಾ ಮಾಡಲು ಆರಂಭಿಸಿದ್ದರು. ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಅವರ ಪತ್ನಿ ಸೀಮಾ ಯಾದವ್ ಅವರು ದೇವಾಲಯಕ್ಕೆ ಭೇಟಿ ನೀಡಿ ಬರ್ತಿದ್ದ ಸಮಯದಲ್ಲಿ ರಸ್ತೆಬದಿಯ ರೇಲಿಂಗ್‌ಗೆ ಅಡ್ಡಲಾಗಿ ಟೀ ಸ್ಟಾಲ್ (Tea Stall) ಇರೋದನ್ನು ನೋಡಿದ್ರು. ರೇಲಿಂಗ್ ದಾಟಿ ಟೀ ಸ್ಟಾಲ್ ಗೆ ಹೋದ ಅವರು ಟೀ ಮಾಡಲು ಶುರು ಮಾಡಿದ್ರು.
ಭೂತ ಓಡಿಸೋಕೆ ತಾಯತ ಕೊಡ್ತಿದ್ದವನ ಮನೆ ಗೋಣಿಚೀಲದಲ್ಲಿತ್ತು ಇಷ್ಟೊಂದು ಹಣ!
ಮುಖ್ಯಮಂತ್ರಿಗಳು ಟೀ ಮಾಡೋದನ್ನು ನೋಡಿದ ಅವರ ಪತ್ನಿ ಸೀಮಾ ಯಾದವ್, ನನಗೆ ಎಂದೂ ಟೀ ಮಾಡಿಕೊಟ್ಟಿಲ್ಲ ಎಂಬ ಆರೋಪ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾನು ನನ್ನ ಸಹೋದರಿಗೆ ಟೀ ಮಾಡ್ತಿದ್ದೇನೆ. ನೀವು ನನ್ನ ಸಹೋದರಿ ಅಲ್ಲ ಎನ್ನುತ್ತಲೇ ಟೀ ಪುಡಿ ಹಾಕಿದ್ರು. ಚಹಾ ರುಚಿಯನ್ನು ಹೆಚ್ಚಿಸಲು ಶುಂಠಿಯನ್ನು ಕುಟ್ಟಿದ ಸಿಎಂ, ಅದನ್ನು ಟೀಗೆ ಹಾಕಿದ್ರು. ಸಕ್ಕರೆ ಕಡಿಮೆ ಎನ್ನುತ್ತಲೇ ಪತಿಗೆ ಸೀಮಾ ಯಾದವ್ ಸಹಾಯ ಮಾಡಿದ್ರು. ಟೀ ಸ್ಟಾಲ್ ಅಂಗಡಿ ಮಾಲೀಕೆ ರಾಧಾ ಜೊತೆ ಮಾತನಾಡುತ್ಲೆ ಚಹಾ ಸಿದ್ಧಪಡಿಸಿದ ಮೋಹನ್ ಯಾದವ್ ಅದನ್ನು ಅಕ್ಕಪಕ್ಕದಲ್ಲಿದ್ದ ತಮ್ಮೆಲ್ಲ ಆಪ್ತರಿಗೆ ಹಂಚಿದ್ರು. ತಾವೂ ಟೀ ರುಚಿ ಸವಿದ್ರು.
ತಮ್ಮ ಈ ಟೆಂಪಲ್ ರನ್ ನಲ್ಲಿ ಮೋಹನ್ ಯಾದವ್, ಸಪತ್ನಿಕ್ ಶ್ರೀ ಕಮ್ತಾನಾಥ ದೇವಾಲಯಕ್ಕೆ ಭೇಟಿ ನೀಡುವ ಸಮಯದಲ್ಲಿ ಐದು ಕಿಲೋಮೀಟರ್ ನಡೆದಿದ್ದಾರೆ. ಮುಖ್ಯಮಂತ್ರಿಗಳ ಎಕ್ಸ್ ಖಾತೆಯಲ್ಲಿ ಇದ್ರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ದೇವಸ್ಥಾನ ಭೇಟಿ ವೇಳೆ ಮುಖ್ಯಮಂತ್ರಿಗಳು ಸಾರ್ವಜನಿಕರನ್ನು ಭೇಟಿಯಾಗಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ತಮ್ಮ ಸಹಜರರ ಜೊತೆ ಪ್ರಯಾಣವನ್ನು ಎಂಜಾಯ್ ಮಾಡಿದ್ದಾರೆ. ಇಂದೋರ್‌ನಲ್ಲಿ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಮೋಹನ್ ಯಾದವ್, ಶಾಪಿಂಗ್ ಮಾಡಿದ್ರು. ಬೆಚ್ಚಗಿನ ಬಟ್ಟೆಗಳನ್ನು ಖರೀದಿಸಿದ್ದಾರೆ. ಇವುಗಳನ್ನು ಭಿಲಾಲ ಸಮುದಾಯದವರು ತಯಾರಿಸಿದ್ದಾರೆ. ದೀಪಾವಳಿ ಸಮಯದಲ್ಲಿ ಸಿಎಂ ವೋಕಲ್ ಫಾರ್ ಪೀಪಲ್ ಗೆ ಬೆಂಬಲ ನೀಡಿದ್ದಾರೆ.
ಭವಿಷ್ಯದಲ್ಲಿ ಮತ್ತಷ್ಟು ಜೈಶಂಕರ್‌ಗಳ ಸೃಷ್ಟಿಸುವುದು ಹೇಗೆ: ವಿದೇಶಾಂಗ ಸಚಿವರ ಉತ್ತರ ಹೀಗಿದೆ
ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಸಿಎಂ ಮೋಹನ್ ಯಾದವ್, ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ನೀಡಿದ್ದಾರೆ. ರಾಜ್ಯದ ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ನೀಡಿದ್ದಾರೆ. ರಾಜ್ಯ ನೌಕರರಿಗೆ ತುಟ್ಟಿಭತ್ಯೆಯಲ್ಲಿ ಶೇಕಡಾ 4ರಷ್ಟು ಹೆಚ್ಚಳ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ. ಇಷ್ಟೇ ಅಲ್ಲ, ಮಧ್ಯಪ್ರದೇಶದಲ್ಲೂ ಹಾಲು ಉತ್ಪಾದಕ ರೈತರಿಗೆ ಸಹಕಾರಿ ಸಂಘಗಳ ಮೂಲಕ ಹಾಲು ಶೇಖರಣೆಗಾಗಿ ಬೋನಸ್ ನೀಡುವುದಾಗಿ ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ