ಭೂತ ಓಡಿಸೋಕೆ ತಾಯತ ಕೊಡ್ತಿದ್ದವನ ಮನೆ ಗೋಣಿಚೀಲದಲ್ಲಿತ್ತು ಇಷ್ಟೊಂದು ಹಣ!

By Roopa Hegde  |  First Published Oct 28, 2024, 10:57 AM IST

ಭೂತ- ಪ್ರೇತವನ್ನು ಜನ ಈಗ್ಲೂ ನಂಬುತ್ತಿದ್ದಾರೆ. ಜನರ ಈ ನಂಬಿಕೆಯಿಂದಾಗಿ ಅನೇಕರು ಅದನ್ನೇ ಉದ್ಯೋಗ ಮಾಡ್ಕೊಂಡಿದ್ದಾರೆ. ಈ ಕೆಲಸದಿಂದ ಬರ್ತಿರುವ ಹಣ ಕಡಿಮೆ ಏನಿಲ್ಲ. ಬರೀಲಿಯಲ್ಲಿ ತಾಂತ್ರಿಕನ ಮನೆಯಲ್ಲಿ ಸಿಕ್ಕ ಹಣ ನೋಡಿ ಪೊಲೀಸರು ದಂಗಾಗಿದ್ದಾರೆ. 
 


ಭೂತ (Ghost) – ಪ್ರೇತದ ಕಾಟ ಎನ್ನುತ್ತ, ಮನೆಗೆ ಬರುವವರಿಗೆ ಆತ ತಾಯತಗಳನ್ನು ನೀಡ್ತಿದ್ದ. ಭೂತೋಚ್ಛಾಟನೆ ಆತನ ಕೆಲಸವಾಗಿತ್ತು.  ಒಂದು ದಿನ ಅಚಾನಕ್ ಅನಾರೋಗ್ಯ (sickness) ಕ್ಕೆ ತುತ್ತಾಗ್ತಾನೆ. ಆ ವ್ಯಕ್ತಿಯನ್ನು ಆಸ್ಪತ್ರೆ (Hospital) ಗೆ ಸೇರಿಸಲಾಗುತ್ತೆ. ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ರೆ ಮನೆಯಲ್ಲಿ ಜೋರ್ ಗಲಾಟೆ. ಮನೆಯಲ್ಲಿದ್ದ ಇಬ್ಬರು ಮಹಿಳೆಯರು ಮತ್ತೆ ಮನೆ ಮಾಲೀಕನ ಮಧ್ಯೆ ಜಗಳವಾಗ್ತಿದೆ ಎಂಬ ವಿಷ್ಯ ತಿಳಿತಿದ್ದಂತೆ ಪೊಲೀಸರು ಸ್ಥಳಕ್ಕೆ ಬರ್ತಾರೆ. ಅಲ್ಲಿನ ಸ್ಥಿತಿ ನೋಡಿ ಪೊಲೀಸರು ದಂಗಾಗ್ತಾರೆ. ಈ ಜಗಳಕ್ಕೆ ಕಾರಣವಾಗಿದ್ದು ತಾಂತ್ರಿಕನ ಬಳಿ ಇದ್ದ ಹಣ. ಸಮಸ್ಯೆ ಇಟ್ಕೊಂಡು ಮನೆಗೆ ಬಂದ ಜನರಿಗೆ ತಾಯತ ಮಂತ್ರಿಸಿ ನೀಡುವ ವ್ಯಕ್ತಿ ಬಳಿ ಎಷ್ಟು ಹಣ ಇರಲು ಸಾಧ್ಯ? ಹೊಟ್ಟೆಗೆ ಬಟ್ಟೆಗೆ ಸಾಕಾಗುವಷ್ಟಾದ್ರೂ ಹಣ ಇರೋದು ಅನುಮಾನ ಅಂತ ನಾವಂದುಕೊಂಡಿದ್ದೇವೆ. ಆದ್ರೆ ಅಲ್ಲಿ ಸಿಕ್ಕ ಹಣ ಎಲ್ಲರನ್ನು ಅಚ್ಚರಿಗೊಳಿಸಿದೆ. ಮೂಲವೊಂದರ ಪ್ರಕಾರ, ತಾಯತ ನೀಡ್ತಿದ್ದ ವ್ಯಕ್ತಿ ಬಳಿ ಸಾವಿರದಲ್ಲಿ ಅಲ್ಲ ಲಕ್ಷದಲ್ಲಿ ಹಣವಿತ್ತು. 25 ಲಕ್ಷ ರೂಪಾಯಿ ನಗದು ಹಾಗೂ ಬಂಗಾರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗ್ತಿದೆ.

ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಬರೇಲಿ (Bareli)ಯ ಭೂತೋಚ್ಚಾಟಕ ತಾಂತ್ರಿಕರೊಬ್ಬರ ಮನೆಯಲ್ಲಿ. ಸಂಭಾಲ್ ನಿವಾಸಿ ಸೈಯದ್ ಅಥರ್ ಮಿಯಾನ್ ಅವರು ಗುರ್ಸೌಲಿ ಗ್ರಾಮದಲ್ಲಿ ಬಾಡಿಗೆ ಮನೆಪಡೆದು ವಾಸ ಮಾಡ್ತಿದ್ದರು. ಜನರಿಗೆ ತಾಯತ ನೀಡುವುದು ಅವರ ಕೆಲಸವಾಗಿತ್ತು. ಅವರ ಮನೆಯಲ್ಲಿ ಸಹಾಯಕ್ಕೆಂದಿದ್ದ ಇಬ್ಬರು ಮಹಿಳೆಯರಿಗೆ ಮಿಯಾನ್ ಮನೆಯಲ್ಲಿದ್ದ ಹಣದ ವಿಚಾರ ತಿಳಿದಿತ್ತು. ಮಿಯಾನ್ ಉಳಿದಿದ್ದ ಮನೆಯ ಮಾಲಿಕ ಕೂಡ ಈ ಹಣ ನೀಡುವಂತೆ ಗಲಾಟೆ ಶುರು ಮಾಡಿದ್ದ. ಜಗಳ ತಾರಕಕ್ಕೇರಿದಾಗ ಪ್ರಕರಣ ಪೊಲೀಸ್ ಮೆಟ್ಟಿಲೇರಿತು. ಸ್ಥಳಕ್ಕೆ ಬಂದ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ.

Tap to resize

Latest Videos

ವಿಮಾನ ಹಾರುತ್ತಿರುವಾಗಲೇ ಎಂಜಿನ್ ಆಫ್ ಮಾಡ್ತಿದ್ದ ಟಾಟಾ!

ಶನಿವಾರ ಅಚಾನಕ್ ಮಿಯಾನ್ ಆರೋಗ್ಯ ಹದಗೆಟ್ಟಿತ್ತು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಮಯದಲ್ಲಿ ಮಹಿಳೆಯರು ಮಿಯಾನ್ ಬಚ್ಚಿಟ್ಟಿದ್ದ ಹಣ ತೆಗೆದ್ರು. ಅದು ಮನೆ ಮಾಲೀಕನಿಗೆ ಹೇಗೋ ತಿಳಿದಿದೆ. ಅಲ್ಲಿಗೆ ಬಂದ ಆತ ಗಲಾಟೆ ಶುರು ಮಾಡಿದ್ದಾನೆ.  ಇಬ್ಬರ ಕಿತ್ತಾಟದ ನಂತ್ರ ಪೊಲೀಸರು ಕೋಟ್ಯಾಂತರ ರೂಪಾಯಿ ಮೌಲ್ಯದ ಬಂಗಾರ, ಬೆಳ್ಳಿಯ ಆಭರಣ ಹಾಗೂ 25 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. 500 -500 ರೂಪಾಯಿ ನೋಟುಗಳು ತುಂಬಿದ್ದ ಗೋಣಿ ಚೀಲವನ್ನು ಪೊಲೀಸರು ಕೊಂಡೊಯ್ದಿದ್ದಾರೆ. ಹಬ್ಬದ ಸಮಯದಲ್ಲಿ ಪರಿಸ್ಥಿತಿ ಹದಗೆಡದಿರಲಿ ಎನ್ನುವ ಕಾರಣಕ್ಕೆ ಪೊಲೀಸರು ಹಣ, ಆಭರಣವನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಮಿಯಾನ್ ಆರೋಗ್ಯದಲ್ಲಿ ಸುಧಾರಣೆಯಾಗಿ, ಅವರು ಆಸ್ಪತ್ರೆಯಿಂದ ಮನೆಗೆ ಬಂದ್ಮೇಲೆ ಇದನ್ನು ವಾಪಸ್ ನೀಡೋದಾಗಿ ಪೊಲೀಸರು ಹೇಳಿದ್ದಾರೆ. ಆದ್ರೆ ಗೋಣಿಚೀಲದಲ್ಲಿ ಎಷ್ಟು ಹಣವಿತ್ತು ಎನ್ನುವ ಮಾಹಿತಿಯನ್ನು ಪೊಲೀಸರು ಸ್ಪಷ್ಟಪಡಿಸಿಲ್ಲ. ಮಿಯಾನ್ ಮನೆಯಲ್ಲಿ ಇಷ್ಟೊಂದು ಹಣ ಸಿಗ್ತಿದ್ದಂತೆ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ. 

ಭಾರತದಲ್ಲಿ ಇನ್ಮುಂದೆ ಇರಲ್ಲ ನಗದು ಹಣ, ಮಹತ್ವದ ಸುಳಿವು ಕೊಟ್ಟ ಆರ್‌ಬಿಐ ಗವರ್ನರ್!

ಈಗಿನ ಕಾಲದಲ್ಲೂ ಜನರು ಭೂತಕಾಟವನ್ನು ನಂಬುತ್ತಿದ್ದಾರೆ. ಅನಾರೋಗ್ಯಕ್ಕೆ ಒಳಗಾದಾಗ ಅಥವಾ ಯಾವುದೋ ಸಮಸ್ಯೆ ಬಂದಾಗ ವೈದ್ಯರ ಬಳಿ ಮಾತ್ರವಲ್ಲ ತಾಂತ್ರಿಕರ ಬಳಿಗೂ ಹೋಗ್ತಿದ್ದಾರೆ ಎಂಬುದು ಇಂಥ ಅನೇಕ ಪ್ರಕರಣಗಳಿಂದ ಸ್ಪಷ್ಟವಾಗ್ತಿದೆ. ಇತ್ತೀಚಿನ ದಿನಗಳಲ್ಲಿ ನಂಬಲು ಸಾಧ್ಯವಾಗದವರ ಮನೆಗಳಲ್ಲಿ ಕಂತೆ ಕಂತೆ ಹಣ ಸಿಗ್ತಿದೆ. ಭಿಕ್ಷುಕರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಸಿಕ್ಕ ಪ್ರಕರಣಗಳು ವರದಿಯಾಗ್ತಿವೆ. ಭೋಪಾಲ್ ಸೇರಿದಂತೆ ಅನೇಕ ಕಡೆ ಐಟಿ ಕಂಪನಿ ಉದ್ಯೋಗಿಗಳಿಗಿಂತ ಹೆಚ್ಚು ಹಣವನ್ನು ಭಿಕ್ಷುಕರು ಸಂಪಾದನೆ ಮಾಡ್ತಿದ್ದಾರೆ.

click me!