ಮಾತಾ ವೈಷ್ಣೋದೇವಿ ಮಂದಿರಕ್ಕೆ ಸುಪ್ರೀಂ ಕೋರ್ಟ್ ಸಿಜೆಐ ಡಿವೈ ಚಂದ್ರಚೂಡ್ ಭೇಟಿ!

By Suvarna NewsFirst Published Jul 1, 2023, 8:07 PM IST
Highlights

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮಾತಾ ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಮಾತಾ ವೈಷ್ಣೋದೇವಿ ಗುಹಾ ದೇಗುಲ ಭೇಟಿ ವೇಳೆ ಜಮ್ಮು ಕಾಶ್ಮೀರ ಮುಖ್ಯನ್ಯಾಯಮೂರ್ತಿ ಸಾಥ್ ನೀಡಿದ್ದಾರೆ.

ಜಮ್ಮು(ಜು.01)  ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ಪವಿತ್ರ ಮಾತಾ ವೈಷ್ಣೋದೇವಿ ಗುಹಾ ದೇಗುಲಕ್ಕೆ ಭೇಟಿ ನೀಡಿದ್ದಾರೆ. ದೇಗುಲಕ್ಕೆ ಆಗಮಿಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನು ದೇಗುಲದ ಆಡಳಿತ ಮಂಡಳಿ ಮುಖ್ಯಸ್ಥ ಅಂಶುಲ್ ಗರ್ಗ್ ಸ್ವಾಗತಿಸಿದರು. ಸುಪ್ರೀ ಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡ ಬಳಿಕ ಇದೇ ಮೊದಲ ಬಾರಿಗೆ ಸಿಜೆಐ ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಡಿವೈ ಚಂದ್ರಚೂಡ್ ದೇಗುಲ ಭೇಟಿ ವೇಳೆ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಮುಖ್ಯ ನ್ಯಾಯಮೂರ್ತಿ ಸಾಥ್ ನೀಡಿದರು. ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಡಿವೈ ಚಂದ್ರಚೂಡ್, ಕೆಲ ಹೊತ್ತು ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಕ್ ಕೆ ಸಿನ್ಹ ಮಾರ್ಗದರ್ಶನದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಭಕ್ತರಿಗೆ ಅನುಕೂಲ ಹೆಚ್ಚಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಿಜೆಐಗೆ ಮಾಹಿತಿ ನೀಡಿದರು.

ಕೋರ್ಟ್‌ನಲ್ಲಿ ಪಾರದರ್ಶಕತೆ ಹೆಚ್ಚಿಸಲು ಮುಚ್ಚಿದ ಲಕೋಟೆ ವ್ಯವಹಾರ ನಿಲ್ಲಿಸಿ: ಕೇಂದ್ರದ ವಿರುದ್ಧ ಸುಪ್ರೀಂ ಸಿಜೆಐ ಕಿಡಿ

ಭಕ್ತರಿಗೆ ತೀರ್ಥಯಾತ್ರೆಯನ್ನು ಯಾವುದೇ ಅಡೆ ತಡೆ ಇಲ್ಲದೆ ಮಾಡಲು, ದೇಗುಲದಲ್ಲಿ ಪೂಜೆ ಹಾಗೂ ದರ್ಶನ ಪಡೆಯಲು ವ್ಯವಸ್ಥೆ ಮಾಡಿರುವ ಮಾತಾ ವೈಷ್ಣೋದೇವಿ ದೇಗುಲ ಆಡಳಿತ ಮಂಡಳಿಯನ್ನು ಡಿವೈ ಚಂದ್ರಚೂಡ್ ಪ್ರಶಂಸಿಸಿದ್ದಾರೆ. ಪವಿತ್ರ ವೈಷ್ಣೋದೇವಿ ಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಿಜೆಐ ಚಂದ್ರಚೂಡ್ ಭೈಝೋನ್ ಬಾಬಾ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.  

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಡಿವೈ ಚಂದ್ರಚೂಡ್ ಹಲವು ಐತಿಹಾಸಿಕ ತೀರ್ಪ ಪ್ರಕಟಿಸಿದ್ದಾರೆ. ಇತ್ತೀಚೆಗೆ ಚಂದ್ರಚೂಡ್ ತಾವು ರಿಡಿಯೋ ಜಾಕಿಯಾಗಿ ಕೆಲಸ ಮಾಡಿದ್ದ ಕುರಿತು ಮಾಹಿತಿ ಬಹಿರಂಗಪಡಿಸಿದ್ದರು. ಸುಪ್ರೀಂ ಕೋರ್ಚ್‌ ಮುಖ್ಯ ನ್ಯಾ ಡಿ.ವೈ ಚಂದ್ರಚೂಡ್‌ ಅವರು ತಾವು ಈ ಹಿಂದೆ ರೇಡಿಯೋ ನಿರೂಪಕರಾಗಿ ಕೆಲಸ ಮಾಡಿದ್ದ ಕುತೂಹಲದ ವಿಷಯ ಬಹಿರಂಗಪಡಿಸಿದ್ದರು.

 

ಜಟಿಲ ಸ್ಥಿತಿ ಸೃಷ್ಟಿ ಆದಾಗ ಸಂವಿಧಾನದ ರಚನೆಯೇ ನಮಗೆ ದಿಕ್ಸೂಚಿ: ಸಿಜೆ ಚಂದ್ರಚೂಡ್‌ ಚಾಟಿ..!

ಸಮಾರಂಭವೊಂದರಲ್ಲಿ ಮಾತನಾಡಿದ ಅವರು ‘ನನ್ನ 20ನೇ ವಯಸ್ಸಿನಲ್ಲಿ ಆಲ್‌ ಇಂಡಿಯಾ ರೇಡಿಯೋ ಸ್ಟೇಷನ್‌ನಲ್ಲಿ ನಾನು ರೇಡಿಯೋ ಜಾಕಿ ಆಗಿ ಪಾರ್ಚ್‌ ಟೈಮ್‌ ಕೆಲಸ ಮಾಡಿದ್ದೆ. ‘ಪ್ಲೇ ಇಟ್‌ ಕೂಲ್‌’, ‘ಸಂಡೇ ರಿಕ್ವೆಸ್ಟ್‌’, ‘ಡೇಟ್‌ ವಿತ್‌ ಯೂ’ ಎಂಬ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೆ’ ಎಂದರು. ಅಲ್ಲದೇ ‘ಸಂಗೀತದ ಮೇಲಿನ ನನ್ನ ಪ್ರೀತಿ ಇಂದಿಗೂ ಮುಂದುವರಿದಿದೆ. ದಿನವೂ ವಕೀಲರ ಸಂಗೀತ ( ಕೋರ್ಚ್‌ನಲ್ಲಿ ವಕೀಲರ ವಾದ-ಪ್ರತಿವಾದ) ಮುಗಿದ ಬಳಿಕ ನಾನು ಪ್ರತಿ ನಿತ್ಯ ಸಂಗೀತ ಕೇಳುತ್ತೇನೆ’ ಎಂದು ಚಟಾಕಿ ಹಾರಿಸಿದರು.

click me!