ಫೋನ್‌ಗಾಗಿ ಡ್ಯಾಮ್‍ನ 41 ಲಕ್ಷ ಲೀಟರ್ ನೀರು ಖಾಲಿ ಮಾಡಿಸಿದ ಅಧಿಕಾರಿಗೆ ಕೇವಲ 50,000 ರೂ ದಂಡ!

By Suvarna NewsFirst Published May 30, 2023, 7:47 PM IST
Highlights

ಸೆಲ್ಫಿ ತೆಗೆಯುವ ವೇಳೆ ಅಧಿಕಾರಿಯ ಫೋನ್ ಜಲಾಶಯಕ್ಕೆ ಬಿದ್ದಿದೆ. ತಮ್ಮ ಫೋನ್ ತೆಗೆಯಲು ಬರೋಬ್ಬರಿ 41 ಲಕ್ಷ ಲೀಟರ್ ಖಾಲಿ ಮಾಡಿಸಿದ ಘಟನೆ ಭಾರಿ ಸಂಚಲನ ಸೃಷ್ಟಿಸಿತ್ತು. ಲಕ್ಷ ಲಕ್ಷ ರೂಪಾಯಿ, ಅತ್ಯಮೂಲ್ಯ ನೀರು ವ್ಯರ್ಥ ಮಾಡಿದ ಅಧಿಕಾರಿಗೆ ಕೇವಲ 53 ಸಾವಿರ ರೂ ದಂಡ ಹಾಕಲಾಗಿದೆ. 

ಚತ್ತಿಸಘಡ(ಮೇ.30): ಆಹಾರ ಇಲಾಖೆ ಅಧಿಕಾರಿ ಸೆಲ್ಫಿ ತೆಗೆಯುವ ವೇಳೆ ತನ್ನ ಫೋನ್ ಜಲಾಶಯಕ್ಕೆ ಬಿದ್ದಿದೆ. ಫೋನ್ ಮರಳಿ ಪಡೆಯಲು ಸತತ 3 ದಿನ ಜಲಾಶಯದಲ್ಲಿದ್ದ 41 ಲಕ್ಷ ಲೀಟರ್ ನೀರು ಪಂಪ್ ಮೂಲಕ ಖಾಲಿ ಮಾಡಿಸಿದ್ದಾರೆ.ಲಕ್ಷ ಲಕ್ಷ ರೂಪಾಯಿ, ಅಮೂಲ್ಯ ನೀರನ್ನು ಪೋಲು ಮಾಡಿದ ಘಟನೆ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಚತ್ತೀಸಘಡದ ಕಾಂಕೇರ್‌ ಜಿಲ್ಲೆಯ ಕೊಯ್ಲಿಬೆಡಾ ಆಹಾರ ಅಧಿಕಾರಿಯ ನಡೆ ಭಾರಿ ಆಕ್ರೋಶಕ್ಕೂ ಕಾರಣವಾಗಿತ್ತು.  ಈ ಘಟನೆ ಬೆಳಕಿಗೆ ಬಂದ ಬಳಿಕ ಅಧಿಕಾರಿಗೆ ಕೇವಲ 53,092 ರೂಪಾಯಿ ದಂಡ ವಿಧಿಸಲಾಗಿದೆ.

 ಆಹಾರ ಅಧಿಕಾರಿಯಾಗಿರುವ ರಾಜೇಶ್‌ 41 ಲಕ್ಷ ಲೀಟರ್ ನೀರು ಅಂದರೆ 4,104 ಕ್ಯುಬಿಕ್ ಮೀಟರ್ ನೀರು ಖಾಲಿ ಮಾಡಿಸಿ ತಮ್ಮ 1.5 ಲಕ್ಷ ರೂಪಾಯಿ ಫೋನ್ ಮರಳಿ ತೆಗೆದಿದ್ದರು. ಪ್ರತಿ ಕ್ಯುಬಿಕ್ ಮೀಟರ್ ನೀರಿಗೆ 10.50 ರೂಪಾಯಿಯಂತೆ 43,092 ರೂಪಾಯಿ ದಂಡ ವಿಧಿಸಲಾಗಿದೆ. ಇನ್ನು ಅನುಮತಿ ಇಲ್ಲದೆ ನೀರು ಖಾಲಿಮಾಡಿಸಿದ ಕಾರಣಕ್ಕೆ 10,000 ರೂಪಾಯಿ ಒಟ್ಟು 53,092 ರೂಪಾಯಿ ದಂಡ ವಿಧಿಸಲಾಗಿದೆ. 10 ದಿನದೊಳಗೆ ದಂಡ ಪಾವತಿಸುವಂತೆ ಸೂಚಿಸಲಾಗಿದೆ.

ಬರೀ 1.5 ಲಕ್ಷ ರೂಪಾಯಿ ಮೊಬೈಲ್‌ಗಾಗಿ ಡ್ಯಾಮ್‌ನ 21 ಲಕ್ಷ ಲೀಟರ್‌ ನೀರು ಖಾಲಿ ಮಾಡಿಸಿದ ಅಧಿಕಾರಿ!

ಘಟನೆ ಬಳಿಕ ಈ ಕೃತ್ಯ ಎಸಗಿದ ಆಹಾರ ಇಲಾಖೆ ಅಧಿಕಾರಿ ರಾಜೇಶ್‌ ವಿಶ್ವಾಸ್‌ನನ್ನು ಅಮಾನತುಗೊಳಿಸಲಾಗಿದೆ. ಕಾಂಕೇರ್‌ ಜಿಲ್ಲೆಯ ಕೊಯ್ಲಿಬೆಡಾ ಘಟಕದ ಆಹಾರ ಅಧಿಕಾರಿಯಾಗಿರುವ ರಾಜೇಶ್‌, ಭಾನುವಾರ ತನ್ನ ರಜಾ ದಿನದಂದು ಕೇರ್‌ಕಟ್ಟಾಅಣೆಕಟ್ಟಿಗೆ ಸ್ನೇಹಿತರೊಂದಿಗೆ ಬಂದಿದ್ದ. ಈ ವೇಳೆ ಆಕಸ್ಮಿಕವಾಗಿ ಆತನ ದುಬಾರಿ ಸ್ಮಾರ್ಚ್‌ಫೋನ್‌ 15 ಅಡಿ ಆಳದ ಜಲಾಶಯದಲ್ಲಿ ಬಿದ್ದಿದೆ. ಬಳಿಕ ಸ್ಥಳೀಯರು ನೀರಿಗಿಳಿದು ಮೊಬೈಲ್‌ ಹುಡುಕುವ ಪ್ರಯತ್ನ ಮಾಡಿದ್ದರೂ ಅದು ವಿಫಲವಾಗಿದೆ. ಕಡಿಮೆ ಪ್ರಮಾಣದಲ್ಲಿ ನೀರಿದ್ದರೆ ಫೋನ್‌ ದೊರೆಯುತ್ತದೆಂದು ರಾಜೇಶ್‌ ಎರಡು 30ಎಚ್‌ಪಿ ಡೀಸೆಲ್‌ ಪಂಪ್‌ಗಳನ್ನು ತಂದು ಸೋಮವಾರದಿಂದ ಗುರುವಾರದವರೆಗೆ 3 ದಿನಗಳ ಕಾಲ ನಿರಂತರವಾಗಿ 25 ಲಕ್ಷ ಲೀಟರ್‌ ಖಾಲಿ ಮಾಡಿಸಿದ್ದಾನೆ. ಈ ನೀರು ಬರೋಬ್ಬರಿ 1,500 ಎಕರೆ ಜಮೀನಿಗೆ ನೀರಾವರಿಗೆ ಸಹಾಯವಾಗುತ್ತಿತ್ತು ಎನ್ನಲಾಗಿದೆ.

ಮುಂಗಾರುಪೂರ್ವ ಮಳೆ ಕೊರತೆ; 79 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ!

ಆದರೆ ಕೊನೆಗೆ ಫೋನ್‌ ಸಿಕ್ಕರೂ ಅದ ಕೆಟ್ಟು ಹೋಗಿತ್ತು. ಬಳಕೆಗೆ ಅಯೋಗ್ಯವಾಗಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ರಾಜೇಶ್‌, ‘ಮೇಲಧಿಕಾರಿಗಳು 5 ಅಡಿ ನೀರು ಹೊರತೆಗೆಯಲು ಅನುಮತಿ ನೀಡಿದ್ದರು. ಇಲಾಖೆಯ ದತ್ತಾಂಶಗಳು ಮೊಬೈಲ್‌ನಲ್ಲಿದ್ದರಿಂದ ಹೀಗೆ ಮಾಡಬೇಕಾಯಿತು. ಈಗ ಮೊಬೈಲ್‌ ಸಿಕ್ಕಿದೆ ಹಾಗೂ ಅದು ಕಾರ್ಯನಿರ್ವಹಿಸುತ್ತಿಲ್ಲ. ಹಾಗಂತ ಕೆರೆಯ ನೀರು ವ್ಯರ್ಥವಾಗಿದೆ ಎನ್ನಲಾಗದು. ಏಕೆಂದರೆ ಅದು ಬಳಕೆಗೆ ಯೋಗ್ಯವಲ್ಲದ ನಿರಾಗಿತ್ತು’ ಎಂದಿದ್ದಾನೆ.

click me!