ನಿಯಂತ್ರಣಕ್ಕೆ ಬಾರದ ಕೊರೋನಾ/ ಹತ್ತು ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಿದ ಛತ್ತೀಸ್‌ಘಡ/ ರಾಜಧಾನಿಯ ಪರಿಸ್ಥಿತಿ ತುಂಬಾ ಕಠಿಣ/ ಒಂದು ವಾರ ಲಾಕ್ ಡೌನ್ ಜಾರಿ
ಛತ್ತೀಸ್‌ಘಡ(ಸೆ. 22) ಕೊರೋನಾ ನಿಯಂತ್ರಣಕ್ಕಾಗಿ ಛತ್ತೀಸ್‌ಘಡದ ಹತ್ತು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಒಂದು ವಾರದ ಲಾಕ್ ಡೌನ್ ಜಾರಿ ಮಾಡಲಾಗಿದೆ. ರಾಜಧಾನಿ ರಾಯ್ಪುರವನ್ನು ಕಂಟೈನ್‌ಮೆಂಟ್ ಝೋನ್ ಆಗಿ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಅನ್ ಲಾಕ್ ಜಾರಿ ಮಾಡಿದ್ದರೂ ಛತ್ತೀಸ್‌ಘಡ ಅನಿವಾರ್ಯವಾಗಿ ತೀರ್ಮಾನ ತೆಗೆದುಕೊಂಡಿದೆ.
ಕೊರೋನಾ ನಿಯಂತ್ರಣದಲ್ಲಿ ಛತ್ತೀಸ್‌ಘಡ ಮುಂದೆ ಇತ್ತು. ಆದರೆ ಲಾಕ್ ಡೌನ್ ವಿನಾಯಿತಿ ನಂತರ ಕೇಸುಗಳು ಹೆಚ್ಚಲು ಆರಂಭಿಸಿದವು. ಸೆ. 21ಕ್ಕೆ ರಾಜ್ಯದಲ್ಲಿ 88,181 ಕೊರೋನಾ ಸೋಂಕಿನ ಪ್ರಕರಣ ಇವೆ. ಕಳೆದ ಮೂರು ವಾರಗಳಲ್ಲಿ ಸೋಂಕಿನ ಪ್ರಮಾಣ ಗಣನೀಯ ಏರಿಕೆ ಕಂಡಿದ್ದು ರಾಜ್ಯ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ.
undefined
ರಾಯ್ಪುರ, ಬಿಸ್ಲಾಪುರ್, ದುರ್ಗ್, ಜಶ್ಪುರ್, ಬಲೋಡಾ ಬಝಾರ್, ಜನ್ ಜ್ಗೀರ್, ಚಂಪಾ, ದರ್ಮಾತಿ ಮತ್ತು ರಾಯಘಢದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ.
ರಾಯ್ಪುರದಲ್ಲಿಯೇ 29,000 ಸಾವಿರ ಕೇಸುಗಳು ಕಂಡುಬಂದಿದ್ದು ಆತಂಕ ಹೆಚ್ಚಿಸಿದೆ. ದಿನಬಳಕೆ ಮತ್ತು ತರಕಾರಿ ಅಂಗಡಿಗಳು ತೆರೆದಿರುವುದಿಲ್ಲ. ಹಾಲು ದಿನಕ್ಕೆ ಕೇವಲ ಎರಡು ಗಂಟೆಗಳ ಕಾಲ ಮಾತ್ರ ಲಭ್ಯವಿರುತ್ತದೆ ಮತ್ತು ಸರ್ಕಾರಿ ವಾಹನಗಳಿಗೆ ಅಥವಾ ತುರ್ತು ಕರ್ತವ್ಯದಲ್ಲಿರುವವರಿಗೆ ಮಾತ್ರ ಇಂಧನವನ್ನು ನೀಡಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶ ಹೊರಡಿಸಲಾಗಿದೆ.