ಕಾಂಗ್ರೆಸ್ ನಾಯಕ ಹಾಗೂ ಆತನ ಕುಟುಂಬ ದುರಂತ ಅಂತ್ಯಕಂಡ ಘಟನೆ ಬೆಳಕಿಗೆ ಬಂದಿದೆ. ವಿಷ ಕುಡಿದಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಚಂಪಾ(ಸೆ.1)ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಜಿಲ್ಲಾ ಸದಸ್ಯನಾಗಿ ರಾಜಕೀಯ ಆರಂಭಿಸಿ ಕಾಂಗ್ರೆಸ್ ನಾಯಕನಾಗಿ ಹೊರಹೊಮ್ಮಿದ್ದ ಪಂಚ್ರಮ್ ಯಾದವ್ ಹಾಗೂ ಕುಟುಂಬ ದುರಂತ ಅಂತ್ಯಕಂಡಿದೆ. ಮನೆಗೆ ಬೀಗ ಹಾಕಿ ವಿಷ ಕುಡಿದಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಚತ್ತೀಸಘಡದ ಜಂಜೀರ್ ಚಂಪಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಬೀಗ ಒಡದು ಪ್ರವೇಶಿಸಿದ ಸ್ಥಳೀಯರು ಅಸ್ವಸ್ಥರಾಗಿದ್ದ ನಾಯಕ ಕುಟುಂಬವನ್ನು ಆಸ್ಪತ್ರೆ ದಾಖಲಿಸಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
66 ವರ್ಷದ ಕಾಂಗ್ರೆಸ್ ನಾಯಕ ಪಂಚ್ರಮ್ ಯಾದವ್, ಪತ್ನಿ 55 ವರ್ಷದ ದಿನೇಶ ನಂದಿನಿ, ಪುತ್ರರಾದ 27 ವರ್ಷದ ಸೂರಜ್ ಹಾಗೂ 32 ವರ್ಷದ ನೀರಜ್ ಮೃತ ದುರ್ದೈವಿಗಳು. ಆಗಸ್ಟ್ 30 ರಂದು ಬೋಧ ತಲಬ್ ಪ್ರದೇಶದಲ್ಲಿರುವ ಮನೆಯಲ್ಲಿ ಹೊರಗಿನಿಂದ ಲಾಕ್ ಮಾಡಿ ವಿಷ ಕುಡಿದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯಿಂದಲೂ ಗೇಟು, ಬಾಗಿಲು ಲಾಕ್ ಮಾಡಿರುವುದು ನೆರೆಮನೆಯವರಿಗೆ ಅನುಮಾನ ಮೂಡಿಸಿದೆ.
undefined
ವಯನಾಡು ರೀತಿ ದುರಂತ ತಪ್ಪಿಸಲು ಕ್ರಮ; ಬೀದಿಗೆ ಬಿದ್ದು ಬದುಕು ಅಂತ್ಯಗೊಳಿಸಿದ ಹಿರಿ ಜೀವ!
ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿ ಬೀಗ ಮುರಿದು ಒಳಪ್ರವೇಶಿಸಿದಾಗ ಇಡೀ ಕುಟುಂಬ ಅಸ್ವಸ್ಥರಾಗಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣವೇ ಎಲ್ಲರನ್ನೂ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಡೀ ಕುಟುಂಬ ದುರಂತ ಅಂತ್ಯಕಂಡಿದೆ. ಘಟನೆಗೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಆದರೆ ವಿಪರೀತ ಸಾಲ ಕುಟುಂಬದ ಅಂತ್ಯಕ್ಕೆ ಕಾರಣವಾಗಿದೆ ಅನ್ನೋ ಮಾತುಗಳು ಕೇಳಬರುತ್ತಿದೆ.
ಪಂಚ್ರಮ್ ಯಾದವ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಸರ್ಕಾರಿ ಕಾಮಾಗಾರಿಗಳ ಗುತ್ತಿಗೆದಾರನಾಗಿದ್ದ ಪಂಚ್ರಮ್ ಯಾದವ್ ಭಾರಿ ಸಾಲ ಮಾಡಿಕೊಂಡಿದ್ದಾರೆ. ಈ ಸಾಲ ತೀರಿಸಲು ಕಳೆದ ಹಲವು ತಿಂಗಳಿನಿಂದ ಹೆಣಗಾಡುತ್ತಿದ್ದಾರೆ. ಇತ್ತ ಪಂಚ್ರಮ್ ಪುತ್ರರು ಫ್ಯಾಬ್ರಿಕೇಟ್ಸ್ ಉದ್ಯಮ ಆರಂಭಿಸಿದ್ದರು. ಆದರೆ ಹೂಡಿದ ಬಂಡವಾಳವೂ ನಷ್ಟವಾಗಿತ್ತು. ಹೀಗಾಗಿ ಇಡೀ ಕುಟುಂಬ ಸಾಲದ ಸುಳಿಗೆ ಸಿಲುಕಿತ್ತು ಅನ್ನೋ ಮಾಹಿತಿಗಳು ಹೊರಬರುತ್ತಿದೆ.
ಸಾಲ ತೀರಿಸಲು ಇದ್ದ ಚಿನ್ನಾಭರಣ ಮಾರಿದ್ದಾರೆ. ಆದರೆ ಸಾಲಗಾರರ ಬಾಧೆ, ಬ್ಯಾಂಕ್ ಕರೆಗಳಿಂದ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದರ ಎನ್ನಲಾಗಿದೆ. ಘಟನೆ ಕುರಿತು ತನಿಖೆ ಆರಂಭಿಸಿರುವ ಪೊಲೀಸರು ಕೆಲ ದಾಖಲೆಗಳನ್ನು ವಶಪಡಿಸಿದ್ದಾರೆ. ಕುಟುಂಬ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಸ್ಥಳೀಯರ ಹೇಳಿಕೆ, ಉದ್ಯಮ ಕುರಿತು ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.
ಬಾಂಗ್ಲಾದೇಶದಲ್ಲಿ ಖ್ಯಾತ ಪತ್ರಕರ್ತೆ ಶವವಾಗಿ ಪತ್ತೆ