ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಥರ್ಡ್ ವೇವ್ ಕಾಫಿ ಶಾಪ್‌ನಲ್ಲಿ ಉದ್ಯೋಗಿಯೊಬ್ಬ ಮಹಿಳೆಯ ಬಾತ್‌ರೂಮ್‌ನಲ್ಲಿ ಕ್ಯಾಮರಾ ಇಟ್ಟು ಸಿಕ್ಕಿಬಿದ್ದಿದ್ದ. ಈ ಘಟನೆ ಮಾಸುವ ಮೊದಲೇ ಈಗ ತಮಿಳುನಾಡಿನ ಚೆನ್ನೈನಲ್ಲೂ ಇಂತಹದ್ದೇ ಘಟನೆಯೊಂದು ನಡೆದಿದೆ.
ಚೆನ್ನೈ: ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಥರ್ಡ್ ವೇವ್ ಕಾಫಿ ಶಾಪ್‌ನಲ್ಲಿ ಉದ್ಯೋಗಿಯೊಬ್ಬ ಮಹಿಳೆಯ ಬಾತ್‌ರೂಮ್‌ನಲ್ಲಿ ಕ್ಯಾಮರಾ ಇಟ್ಟು ಸಿಕ್ಕಿಬಿದ್ದಿದ್ದ. ಈ ಘಟನೆ ಮಾಸುವ ಮೊದಲೇ ಈಗ ತಮಿಳುನಾಡಿನ ಚೆನ್ನೈನಲ್ಲೂ ಇಂತಹದ್ದೇ ಘಟನೆಯೊಂದು ನಡೆದಿದೆ. ಟಿ ನಗರದ ಪೊಂಡಿ ಬಜಾರ್ ಎಂಬಲ್ಲಿದ್ದ ಫ್ಯಾನ್ಸಿ ಸ್ಟೋರ್‌ನಲ್ಲಿದ್ದ ಮಹಿಳೆಯರ ವಾಶ್‌ರೂಮ್‌ನಲ್ಲಿ ಕಾಮುಕನೋರ್ವ ಕ್ಯಾಮರಾ ಇಟ್ಟಿದ್ದಾನೆ. ಈ ವಿಚಾರ ಅದೇ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯ ಕಣ್ಣಿಗೆ ಬಿದ್ದಿದೆ. ಕೂಡಲೇ ಫೋನ್ ಹಿಡಿದುಕೊಂಡು ಹೊರಗೆ ಬಂದ ಆಕೆಯ ಕೈನಿಂದ ಆರೋಪಿ ಫೋನ್ ಕಿತ್ತುಕೊಳ್ಳಲು ಯತ್ನಿಸಿದ್ದಲ್ಲದೇ ಆಕೆಗೆ ಜೀವ ಬೆದರಿಕೆಯೊಡ್ಡಿದ್ದಾನೆ.
ಇದಾದ ನಂತರ ಮಹಿಳಾ ಉದ್ಯೋಗಿ ಅಲ್ಲಿದ್ದ ಇತರ ಮಹಿಳಾ ಕೆಲಸಗಾರರಿಗೆ ವಿಚಾರ ತಿಳಿಸಿದ್ದಾಳೆ. ಕೂಡಲೇ ಆ ಹೆಣ್ಣು ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರುಫ್ಯಾನ್ಸಿ ಸ್ಟೋರ್‌ನ ಮಹಿಳೆಯರ ವಾಶ್‌ರೂಮ್‌ನಲ್ಲಿ ಸ್ಮಾರ್ಟ್‌ಫೋನ್ ಕ್ಯಾಮರಾ ಆನ್‌ನಲ್ಲಿಟ್ಟಿದ್ದ ಕಾಮುಕನನ್ನು ಬಂಧಿಸಿದ್ದಾರೆ. ಬಂಧಿತನನ್ನು 33 ವರ್ಷದ ಯು ಮಣಿಕಂಠನ್ ಎಂದು ಗುರುತಿಸಲಾಗಿದೆ. ತನಿಖೆ ವೇಳೆ ಆರೋಪಿ ಅದೇ ಪ್ರದೇಶದಲ್ಲಿರುವ ಮತ್ತೊಂದು ಶಾಪ್‌ನಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದು, ಆತ ಮಹಿಳೆಯರ ವಾಶ್‌ರೂಮ್‌ನಲ್ಲಿ ಕ್ಯಾಮರಾ ಇಟ್ಟಿದ್ದ. ಮಹಿಳೆಯರ ದೂರಿನ ನಂತರ ಆತನನ್ನು ಬಂಧಿಸಿದ ಪೊಲೀಸರು ಮ್ಯಾಜಿಸ್ಟೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಿದ್ದಾರೆ.
ಅಯ್ಯಯ್ಯೋ... OYO ರೂಮ್‌ಲ್ಲಿ ಕಳ್ಳ ಕ್ಯಾಮರಾ: ಜೋಡಿಯ ಸಲ್ಲಾಸ ಸೆರೆ ಹಿಡಿದ ನಾಲ್ವರ ಬಂಧನ
ಕೆಲ ದಿನಗಳ ಹಿಂದೆ ಬೆಂಗಳೂರಿನ ಥರ್ಡ್ ವೇವ್ ಕಾಫಿ ಶಾಪ್‌ನಲ್ಲಿ ಈ ರೀತಿಯ ಘಟನೆ ನಡೆದಿತ್ತು. ವಾಶ್‌ರೂಮ್‌ಗೆ ಹೋದ ಮಹಿಳಾ ಗ್ರಾಹಕರಿಗೆ ಅಲ್ಲಿನ ಡೆಸ್ಟ್‌ಬಿನ್ ಒಳಗೆ ಆನ್ ಆಗಿರುವ ಸ್ಥಿತಿಯಲ್ಲಿ ಕ್ಯಾಮರಾ ಕಂಡು ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಅವರು ಈ ವಿಚಾರವನ್ನ ಹಂಚಿಕೊಂಡು ಇತರ ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದರು. ಸಾರ್ವಜನಿಕ ಸ್ಥಳದಲ್ಲಿ ಶೌಚಾಲಯ ಬಳಸುವ ವೇಳೆ ಜಾಗರೂಕರಾಗಿರುವಂತೆ ಸೂಚಿಸಿದ್ದರು. ಇದಾದ ನಂತರ ಕೃತ್ಯವೆಸಗಿದ ಉದ್ಯೋಗಿಯನ್ನು ಥರ್ಡ್ ವೆವ್ ಕಾಫಿ ಶಾಪ್ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದ್ದಲ್ಲದೇ ಘಟನೆ ಬಗ್ಗೆ ಕ್ಷಮೆ ಕೇಳಿತ್ತು.
ಕ್ಯಾಮೆರಾದಲ್ಲಿ ಸೆರೆಯಾಯ್ತು ಜಗತ್ತಿನೊಂದಿಗೆ ಸಂಪರ್ಕವೇ ಇಲ್ಲದ ಅತೀ ದೊಡ್ಡ ಬುಡಕಟ್ಟು ಸಮುದಾಯ!