ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 31, 2022 ರವರೆಗೆ mygov.in ನಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಚೀತಾಗಳಿಗೆ ಹೊಸ ಹೆಸರುಗಳನ್ನು ಸೂಚಿಸುವ ಒಟ್ಟು 11,565 ನಮೂದುಗಳನ್ನು ಸ್ವೀಕರಿಸಲಾಗಿದೆ. ಇದರಂತೆ ಈಗ ಚೀತಾಗಳಿಗೆ ಮರು ನಾಮಕರಣ ಮಾಡಲಾಗಿದೆ.
ಹೊಸದಿಲ್ಲಿ (ಏಪ್ರಿಲ್ 20, 2023): ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆಯಾದ ನಮೀಬಿಯಾ ಚಿರತೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆಗಳನ್ನು ನೀಡಿದಂತೆ ಜನರಿಗೆ ಕರೆ ನೀಡಿದ್ದರು. ಬಳಿಕ ಹಲವರು ಚೀತಾಗಳಿಗೆ ಸಲಹೆ ನೀಡಿದ್ದು, ಈಗ ಮರುನಾಮಕರಣ ಮಾಡಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಸೆಪ್ಟೆಂಬರ್ 25, 2022 ರಂದು ಪ್ರಧಾನಿ ಮೋದಿಯವರು ತಮ್ಮ ಮನ್ ಕೀ ಬಾತ್‌ನಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಮರುಪರಿಚಯಿಸಲಾದ ಚೀತಾಗಳ ಕುರಿತು ಸಲಹೆಗಳನ್ನು ನೀಡುವಂತೆ ನಾಗರಿಕರನ್ನು ಮನವಿ ಮಾಡಿದ್ದರು.
ಈ ನಿಟ್ಟಿನಲ್ಲಿ, ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 31, 2022 ರವರೆಗೆ mygov.in ನಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಚೀತಾಗಳಿಗೆ ಹೊಸ ಹೆಸರುಗಳನ್ನು ಸೂಚಿಸುವ ಒಟ್ಟು 11,565 ನಮೂದುಗಳನ್ನು ಸ್ವೀಕರಿಸಲಾಗಿದೆ ಎಂದು ಗುರುವಾರ ಅಧಿಕೃತ ಹೇಳಿಕೆ ತಿಳಿಸಿದೆ.
ಇದನ್ನು ಓದಿ: ಕಾಡು ಬಿಟ್ಟು ನಾಡಿಗೆ ನುಗ್ಗಿದ ನಮೀಬಿಯಾ ಚೀತಾ: ಕುನೋ ಅಭಯಾರಣ್ಯಕ್ಕೆ ಕಳಿಸಲು ಕಾರ್ಯಾಚರಣೆ
ಆಶಾ (ಹೆಣ್ಣು) ಎಂಬ ಹೆಸರಿಟ್ಟಿದ್ದ ನಮೀಬಿಯಾ ಚೀತಾಗೆ ASHA ಬದಲು AASHA ಎಂದು ಮರುನಾಮಕರಣ ಮಾಡಲಾಗಿದೆ. ಮತ್ತು ಓಬನ್ (Oban) (ಗಂಡು) ಚೀತಾಗೆ ಪವನ್ (Pavan) ಎಂದು ಮರು ನಾಮಕರಣ ಮಾಡಲಾಗಿದೆ. ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಫಿಂಡಾ (Phinda) ಎಂಬ ಚೀತಾಗೆ ನಿರ್ವಾ (Nirva) ಎಂದು ಹೆಸರಿಡಲಾಗಿದೆ. ಇದೇ ರೀತಿ ಉಳಿದ ಚೀತಾ ಹೆಸರುಗಳೂ ಬದಲಾಗಿವೆ.
ಈ ನಮೂದುಗಳನ್ನು ಆಯ್ಕೆ ಸಮಿತಿ ಪರಿಶೀಲಿಸಿದ್ದು ಮತ್ತು ಅವುಗಳ ಸಂರಕ್ಷಣೆ ಹಾಗೂ ಸಾಂಸ್ಕೃತಿಕ ಮೌಲ್ಯಕ್ಕಾಗಿ ಸೂಚಿಸಲಾದ ಹೆಸರುಗಳ ಮಹತ್ವ ಮತ್ತು ಪ್ರಸ್ತುತತೆಯ ಆಧಾರದ ಮೇಲೆ ಹೊಸ ಹೆಸರುಗಳನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ಚೀತಾಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. ಇನ್ನು, ಈ ಚೀತಾಗಳಿಗೆ ಹೊಸ ಹೆಸರುಗಳನ್ನು ಸೂಚಿಸಿದ ಸ್ಪರ್ಧೆಯ ವಿಜೇತರನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅಭಿನಂದಿಸಿದೆ.
ಇದನ್ನೂ ಓದಿ: ಮತ್ತೆ ಭಾರತಕ್ಕೆ ಬಂದ 12 ಚೀತಾಗಳು: ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಅತಿಥಿಗಳು..!
1947 ರಲ್ಲಿ ಭಾರತೀಯ ಅರಣ್ಯದಲ್ಲಿ ಕೊನೆಯ ಬಾರಿಗೆ ಚೀತಾಗಳನ್ನು ದಾಖಲಿಸಲಾಗಿತ್ತು ಮತ್ತು 1952 ರಲ್ಲಿ ಚೀತಾಗಳು ನಿರ್ನಾಮವಾದವು ಎಂದು ಘೋಷಿಸಲಾಯಿತು. ನಂತರ, ಜಾಗತಿಕ ಸಂರಕ್ಷಣಾ ಪ್ರಯತ್ನಗಳಿಗೆ ಕೊಡುಗೆ ನೀಡಲು ಭಾರತದಲ್ಲಿ ಚೀತಾ ಪರಿಚಯ ಯೋಜನೆಯನ್ನು ಮಾಡಲಾಯ್ತು. ಪರಿಚಯ ಯೋಜನೆಯ ಪ್ರಮುಖ ಉದ್ದೇಶಗಳು ಅದರ ಐತಿಹಾಸಿಕ ವ್ಯಾಪ್ತಿಯಾದ್ಯಂತ ಸುರಕ್ಷಿತ ಆವಾಸಸ್ಥಾನಗಳಲ್ಲಿ ಸಂತಾನೋತ್ಪತ್ತಿ ಮಾಡುವ ಚೀತಾಗಳನ್ನು ಸ್ಥಾಪಿಸುವುದಾಗಿದೆ.
ಈ ಹಿನ್ನೆಲೆ ಭಾರತ ಸರ್ಕಾರವು ರಿಪಬ್ಲಿಕ್ ಆಫ್ ನಮೀಬಿಯಾದೊಂದಿಗೆ G2G ಸಮಾಲೋಚನಾ ಸಭೆಗಳನ್ನು ನಡೆಸಿ ಚೀತಾ ಸಂರಕ್ಷಣೆಗಾಗಿ ಜುಲೈ 20, 2022 ರಂದು ಉಭಯ ದೇಶಗಳ ನಡುವಿನ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿತ್ತು. ಎಂಒಯುಗೆ ಸಹಿ ಹಾಕಿದ ನಂತರ, ಎಂಟು ಚೀತಾಗಳನ್ನು ಸೆಪ್ಟೆಂಬರ್ 17, 2022 ರಂದು ನಮೀಬಿಯಾದಿಂದ ಭಾರತಕ್ಕೆ ಸಾಗಿಸಲಾಯಿತು ಮತ್ತು ಅವುಗಳನ್ನು ಪ್ರಧಾನಿ ಮೋದಿ ಅವರು ಬಿಡುಗಡೆ ಮಾಡಿದ್ದರು.
ಭಾರತದಲ್ಲಿ ಚೀತಾ ಪರಿಚಯಕ್ಕಾಗಿ ಕ್ರಿಯಾ ಯೋಜನೆಯ ಪ್ರಕಾರ, ಮುಂದಿನ 5 ವರ್ಷಗಳವರೆಗೆ ವಾರ್ಷಿಕವಾಗಿ 10-12 ಚೀತಾಗಳನ್ನು ಆಫ್ರಿಕಾ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆ, ಭಾರತ ಸರ್ಕಾರ ಚೀತಾ ಸಂರಕ್ಷಣಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ದಕ್ಷಿಣ ಆಫ್ರಿಕಾದೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸಿದೆ.
ಬಳಿಕ ಎಂಒಯು ನಿಬಂಧನೆಗಳ ಅಡಿಯಲ್ಲಿ, ಫೆಬ್ರವರಿ 17, 2023 ರಂದು 12 ಚೀತಾಗಳ (7 ಗಂಡು, 5 ಹೆಣ್ಣು) ಮೊದಲ ಬ್ಯಾಚ್ ಅನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಸ್ಥಳಾಂತರಿಸಲಾಯಿತು. ದಕ್ಷಿಣ ಆಫ್ರಿಕಾದಿಂದ ಗ್ವಾಲಿಯರ್‌ಗೆ ಮತ್ತು ನಂತರ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ 12 ಚೀತಾಗಳನ್ನು ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್‌ಗಳ ಮೂಲಕ ಸ್ಥಳಾಂತರ ಮಾಡಲಾಯ್ತು.