ಇದು ಅತ್ಯಂತ ಸವಾಲಿನ ಸಮಯ; ಬುದ್ಧನ ಬೋಧನೆಗಳು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ: ಪ್ರಧಾನಿ ಮೋದಿ

Published : Apr 20, 2023, 05:49 PM ISTUpdated : Apr 20, 2023, 06:02 PM IST
ಇದು ಅತ್ಯಂತ ಸವಾಲಿನ ಸಮಯ; ಬುದ್ಧನ ಬೋಧನೆಗಳು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ: ಪ್ರಧಾನಿ ಮೋದಿ

ಸಾರಾಂಶ

ಭಗವಾನ್ ಬುದ್ಧನ ಬೋಧನೆಗಳಿಂದ ಪ್ರೇರಿತವಾಗಿರುವ ಭಾರತವು ಜಾಗತಿಕ ಕಲ್ಯಾಣಕ್ಕಾಗಿ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಾರತವು ಬುದ್ಧ ತೋರಿಸಿದ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಮೋದಿ ಪ್ರತಿಪಾದಿಸಿದರು. 

ಹೊಸದೆಹಲಿ (ಏಪ್ರಿಲ್ 20, 2023): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ  ಜಾಗತಿಕ ಬೌದ್ಧ ಶೃಂಗಸಭೆಯ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಈ ವೇಳೆ ಯುದ್ಧ, ಆರ್ಥಿಕ ಅಸ್ಥಿರತೆ, ಭಯೋತ್ಪಾದನೆ, ಧಾರ್ಮಿಕ ಉಗ್ರವಾದ ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳ ಮೂಲಕ ಜಗತ್ತು ಹಾದುಹೋಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಅಲ್ಲದೆ, ಭಗವಾನ್ ಬುದ್ಧನ ಆಲೋಚನೆಗಳು ಈ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ ಎಂದು ಪ್ರತಿಪಾದಿಸಿದರು.

ಇನ್ನು, ಹವಾಮಾನ ಬದಲಾವಣೆಯನ್ನು ಬುದ್ಧ ತೋರಿಸಿದ ಮಾರ್ಗಕ್ಕೆ ಮೋದಿ ಹೋಲಿಸಿ ಶ್ರೀಮಂತ ರಾಷ್ಟ್ರಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ಶತಮಾನದಲ್ಲಿ "ಕೆಲವು ದೇಶಗಳು ಇತರ ಮತ್ತು ಮುಂಬರುವ ಪೀಳಿಗೆಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿದ ಕಾರಣ ಜಗತ್ತು ಈಗ ಹವಾಮಾನ ಬದಲಾವಣೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ" ಎಂದು ಹೇಳಿದರು. ಹಾಗೆ, ಭಗವಾನ್ ಬುದ್ಧ ತೋರಿಸಿದ ಮಾರ್ಗವು "ಭವಿಷ್ಯ ಮತ್ತು ಸುಸ್ಥಿರತೆಯ ಹಾದಿ" ಎಂದು ಹೇಳಿದ ಪ್ರಧಾನಿ, "ಜಗತ್ತು ಅವರ ಬೋಧನೆಗಳನ್ನು ಅನುಸರಿಸಿದ್ದರೆ, ಹವಾಮಾನ ಬದಲಾವಣೆಯ ಬಿಕ್ಕಟ್ಟನ್ನು ಎದುರಿಸುತ್ತಿರಲಿಲ್ಲ" ಎಂದೂ ಹೇಳಿದರು.

ಇದನ್ನು ಓದಿ: ಏಪ್ರಿಲ್ 20 ರಂದು ಜಾಗತಿಕ ಬೌದ್ಧ ಶೃಂಗಸಭೆ: ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಅಲ್ಲದೆ, ಬುದ್ಧನ ತತ್ತ್ವಶಾಸ್ತ್ರದಿಂದ ಸ್ಫೂರ್ತಿ ಪಡೆಯುವ ಮೂಲಕ ಜನರು ಮತ್ತು ರಾಷ್ಟ್ರಗಳು ತಮ್ಮದೇ ಆದ ಜಾಗತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ. ಬಡವರು ಮತ್ತು ಸಂಪನ್ಮೂಲಗಳ ಕೊರತೆಯಿರುವ ದೇಶಗಳ ಬಗ್ಗೆ ಜಗತ್ತು ಯೋಚಿಸಬೇಕಾಗುತ್ತದೆ ಎಂದು ಪ್ರಧಾನಿ ಹೇಳಿದರು.

ಭಗವಾನ್ ಬುದ್ಧನ ಬೋಧನೆಗಳಿಂದ ಪ್ರೇರಿತವಾಗಿರುವ ಭಾರತವು ಜಾಗತಿಕ ಕಲ್ಯಾಣಕ್ಕಾಗಿ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಾರತವು ಬುದ್ಧ ತೋರಿಸಿದ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಪ್ರತಿಪಾದಿಸಿದ ಮೋದಿ, ಭೂಕಂಪದ ನಂತರ ಟರ್ಕಿ, ಸಿರಿಯಾಗೆ ಸಹಾಯ ಮಾಡಿದ್ದನ್ನು ಉಲ್ಲೇಖಿಸಿದರು.  

ಇದನ್ನೂ ಓದಿ: ಪ್ರಧಾನಿ ಮೋದಿ ನಾಯಕತ್ವಕ್ಕೆ ಬ್ರಿಟನ್‌ ಸಂಸದ ಸ್ಟರ್ನ್‌ ಮುಕ್ತಕಂಠದ ಶ್ಲಾಘನೆ

ಹಾಗೆ, ಇಂದಿನ ಸಮಯವು ಶತಮಾನದ ಅತ್ಯಂತ ಸವಾಲಿನ ಸಮಯ ಎಂದು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ ಎಂದೂ ಮೋದಿ ಹೇಳಿದರು. "ಎರಡು ದೇಶಗಳು ಯುದ್ಧದಲ್ಲಿವೆ, ಪ್ರಪಂಚವು ಆರ್ಥಿಕ ಅಸ್ಥಿರತೆಯ ಮೂಲಕ ಸಾಗುತ್ತಿದೆ, ಭಯೋತ್ಪಾದನೆ ಮತ್ತು ಧಾರ್ಮಿಕ ಉಗ್ರವಾದವು ಮಾನವೀಯತೆಯ ಆತ್ಮದ ಮೇಲೆ ಆಕ್ರಮಣ ಮಾಡುತ್ತಿದೆ, ಹವಾಮಾನ ಬದಲಾವಣೆಯ ಬಿಕ್ಕಟ್ಟು ಮಾನವೀಯತೆಯ ಮೇಲೆ ಸುಳಿದಾಡುತ್ತಿದೆ, ಹಿಮನದಿಗಳು ಕರಗುತ್ತಿವೆ, ಪರಿಸರ ವಿಜ್ಞಾನವು ನಾಶವಾಗುತ್ತಿದೆ, ಜಾತಿಗಳು ನಾಶವಾಗುತ್ತಿವೆ. ಇನ್ನೂ ಇವೆ. ಕೋಟಿಗಟ್ಟಲೆ ಜನರು, ಇಲ್ಲಿ ಕುಳಿತವರಂತೆ, ಬುದ್ಧನಲ್ಲಿ ನಂಬಿಕೆ ಹೊಂದಿದ್ದಾರೆ, ಈ ನಂಬಿಕೆಯು ಶಕ್ತಿಯನ್ನು ನೀಡುತ್ತದೆ’’ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.

ಜಾಗತಿಕ ಬೌದ್ಧ ಶೃಂಗಸಭೆಯ ಪ್ರೇಕ್ಷಕರಲ್ಲಿ ಭಾರತವಲ್ಲದೆ 30 ದೇಶಗಳ ಪ್ರತಿನಿಧಿಗಳು ಇದ್ದರು. ಏಪ್ರಿಲ್ 20 ಮತ್ತು 21 ರಂದು ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟದ (ಐಬಿಸಿ) ಸಹಯೋಗದೊಂದಿಗೆ ಸಂಸ್ಕೃತಿ ಸಚಿವಾಲಯವು ಆಯೋಜಿಸುತ್ತಿರುವ ಶೃಂಗಸಭೆಯಲ್ಲಿ ಪ್ರಖ್ಯಾತ ಬೌದ್ಧ ಸನ್ಯಾಸಿಗಳು, ವಿದ್ವಾಂಸರು, ರಾಯಭಾರಿಗಳು ಮತ್ತು ರಾಜತಾಂತ್ರಿಕರು ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ: ಮೋದಿಜೀ ನೀವು ನಮ್ಮ ಸ್ಕೂಲ್‌ಗೆ ಬನ್ನಿ ಎಂದಿದ್ದ ಬಾಲಕಿ ವಿಡಿಯೋ ವೈರಲ್: ಸರ್ಕಾರಿ ಶಾಲೆಗೆ ಸಿಕ್ತು ಹೊಸ ರೂಪ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ