OYO ಹೋಟೆಲ್‌ಗಳಲ್ಲಿ ಚೆಕ್-ಇನ್ ನಿಯಮಗಳು ಬದಲಾಗಿವೆ. ಈ ಹೊಸ ನಿಯಮ ಮೀರತ್‌ನಿಂದ ಆರಂಭವಾಗಿದ್ದು, ಶೀಘ್ರದಲ್ಲೇ ದೇಶಾದ್ಯಂತ ಜಾರಿಯಾಗಲಿದೆ.
ನವದೆಹಲಿ: OYO ಮೂಲಕ ಭಾರತದ ಯಾವುದೇ ಭಾಗದಲ್ಲಿನ ಕಡಿಮೆ ಬೆಲೆಯ ಹೋಟೆಲ್ ಹುಡುಕಬಹುದು. ಭಾರತದಾದ್ಯಂತ ಓಯೋ ಹೋಟೆಲ್ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅದರಲ್ಲಿಯೂ ಧಾರ್ಮಿಕ ಪ್ರದೇಶಗಳಲ್ಲಿ ಓಯೋ ರೂಮ್‌ಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆ ನೀಡುವದರಿಂದ ಓಯೋ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯವಾಯ್ತು. ಇದೀಗ ಚೆಕ್-ಇನ್ ನಿಯಮಗಳಲ್ಲಿ ಬದಲಾವಣೆ ಆಗಿದೆ. ಈ ಹೊಸ ನಿಯಮಗಳನ್ನು ಉತ್ತರ ಪ್ರದೇಶದ ಮೀರತ್ ನಗರದಿಂದ ಆರಂಭಿಸಿದೆ.
ಮುಂದಿನ ದಿನಗಳಲ್ಲಿ ಶೀಘ್ರವೇ ಎಲ್ಲಾ ರಾಜ್ಯಗಳಲ್ಲಿಯೂ ಈ ನಿಯಮ ಜಾರಿಗೆ ತರಲು ಓಯೋ ಉದ್ದೇಶಿಸಿದೆ ಎಂದು ವರದಿಯಾಗಿದೆ. ಏನಿದು ಹೊಸ ರೂಲ್ಸ್ ಎಂಬುದನ್ನು ನೋಡೋಣ ಬನ್ನಿ.
ಇದೀಗ ಓಯೋ ಹೋಟೆಲ್ ರೂಮ್ ಬುಕ್ ಮಾಡುವ ಮುನ್ನ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಓಯೋ ಹೊಸ ನಿಯಮದ ಪ್ರಕಾರ, ಗ್ರಾಹಕರು ಚೆಕ್-ಇನ್ ಸಮಯದಲ್ಲಿ ಅಧಿಕೃತ ಗುರುತಿನ ಚೀಟಿ ಮತ್ತು ನಿಮ್ಮೊಂದಿಗೆ ಬರೋವರರ ಸಂಬಂಧ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ನೀವು ಬುಕ್ಕಿಂಗ್ ಆನ್‌ಲೈನ್ ಅಥವಾ ಆಫ್‌ಲೈನ್ ಮಾಡಿದ್ರೂ ಎಲ್ಲಾ ದಾಖಲೆಗಳನ್ನು ನೀಡಬೇಕಾಗುತ್ತದೆ. ಸ್ಥಳೀಯ ಸಾಮಾಜಿಕ ನಂಬಿಕೆಗಳ ಆಧಾರದ ಮೇಲೆ ದಂಪತಿಗಳ ಬುಕಿಂಗ್ ಅನ್ನು ತಿರಸ್ಕರಿಸಬಹುದು ಎಂಬ ಸ್ವಾತಂತ್ರ್ಯವನ್ನು OYO ತನ್ನ ಪಾಲುದಾರ ಹೋಟೆಲ್‌ಗಳಿಗೆ ನೀಡಿದೆ.
ಇದನ್ನೂ ಓದಿ: ಮಾಡಿದ ತಪ್ಪನ್ನೇ ಮತ್ತೆ ಮಾಡ್ಬೇಡಿ;ಸ್ಟಾರ್ಟ್ ಅಪ್ ಪ್ರಾರಂಭಿಸಿರೋ ಯುವಜನರಿಗೆ ರಿತೇಶ್ ಅಗರ್ವಾಲ್ ಕಿವಿಮಾತು
ಖಾಸಗಿ ಸಮಯ ಕಳೆಯಲು ಓಯೋ ರೂಮ್ ಬುಕ್ ಮಾಡುತ್ತಿದ್ದ ಪ್ರೇಮಿಗಳಿಗೆ ಇದು ಬ್ಯಾಡ್ ನ್ಯೂಸ್ ಆಗಿದೆ. ಓಯೋ ಮೊದಲು ಈ ನಿಯಮವನ್ನು ಮೀರತ್ ನಗರದಲ್ಲಿ ಜಾರಿಗೆ ತಂದಿದೆ. ಒಂದು ವೇಳೆ ಹೊಸ ನಿಯಮ ಯಶಸ್ವಿಯಾದ್ರೆ ಹಂತ ಹಂತವಾಗಿ ದೇಶದ ಎಲ್ಲಾ ಭಾಗದಲ್ಲಿಯೂ ಜಾರಿಗೆ ತರಲು ಓಯೋ ಯೋಚಿಸಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಓಯೋ ರೂಮ್ ಬುಕ್ ಮಾಡುತ್ತಿದ್ದ, ಭಕ್ತಾದಿಗಳು ಹೊಸ ನಿಯಮವನ್ನು ಸ್ವಾಗತಿಸಿದ್ದಾರೆ.
ಇದನ್ನೂ ಓದಿ:ಓಯೋದಲ್ಲಿ ರೂಮ್ ಬುಕ್ ಮಾಡೋಕೆ ಹೈದರಾಬಾದ್ ನಂ.1, ಬೆಂಗಳೂರು ಕಡಿಮೆಯೇನಿಲ್ಲ!