ಜಮ್ಮು ಕಾಶ್ಮೀರ ಅಭಿವೃದ್ಧಿಗೆ 1,350 ಕೋಟಿ ರೂಪಾಯಿ ಪ್ಯಾಕೇಜ್!

By Suvarna NewsFirst Published Sep 19, 2020, 3:19 PM IST
Highlights

 ಜಮ್ಮ ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ಕೇಂದ್ರ ಸರ್ಕಾರ ವಿಶೇಷ ಪ್ರಾತಿನಿದ್ಯ ನೀಡಿದೆ. ಕಣಿವೆ ರಾಜ್ಯದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದೆ. ಇದೀಗ ಕೊರೋನಾ ವೈರಸ್ ಕಾರಣ ಕುಂಠಿತಗೊಂಡಿದ್ದ ಜಮ್ಮ ಮತ್ತು ಕಾಶ್ಮೀರದ ಉದ್ಯಮ ಹಾಗೂ ಆರ್ಥಿಕತೆ ಮೇಲೆತ್ತಲು ಕೇಂದ್ರ ಸರ್ಕಾರ ದಾಖಲೆ ಪ್ಯಾಕೇಜ್ ಘೋಷಿಸಿದೆ.

ಜಮ್ಮ ಮತ್ತು ಕಾಶ್ಮೀರ(ಸೆ.19): ಕೊರೋನಾ ವೈರಸ್ ಕಾರಣ ಪ್ರತಿ ರಾಜ್ಯಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಉದ್ದಿಮೆಗಳು ನೆಲಕಚ್ಚಿದೆ. ಇದೀಗ ಕೇಂದ್ರ ಸರ್ಕಾರದ ಆತ್ಮಿರ್ಭರ್ ಯೋಜನೆಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಜಮ್ಮ ಮತ್ತು ಕಾಶ್ಮೀರದ ಆರ್ಥಿಕತೆ ಹಾಗೂ ಉದ್ದಿಮೆ ಮೇಲೆತ್ತಲು ಕೇಂದ್ರ ಸರ್ಕಾರ 1,350 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ.

ಕುತಂತ್ರಿ ಪಾಕ್‌ ಉದ್ಧಟತನ; ದೇಶಕ್ಕಾಗಿ ಪ್ರಾಣಕೊಟ್ಟ ಇಬ್ಬರು ಯೋಧರು.

ಜಮ್ಮ ಮತ್ತು ಕಾಶ್ಮೀರಕ್ಕೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಈ ಮೂಲಕ ಕೇಂದ್ರಾಡಳಿಕ ಪ್ರದೇಶದ ಸರ್ವಾಂಗ ಅಭಿವೃದ್ದಿ ಮಾಡಲಾಗುತ್ತಿದೆ. ಇಲ್ಲಿನ ಜನ ಅಭಿವೃದ್ದಿ ಫಥದಲ್ಲಿ ಸಾಗುತ್ತಿದ್ದಾರೆ. ಇಷ್ಟೇ ಅಲ್ಲ ನೆರೆ ರಾಷ್ಟ್ರದ ಭಯೋತ್ಪಾದನೆ ಕುಮ್ಮಕ್ಕಿನಿಂದ ಬೇಸತ್ತಿದ್ದಾರೆ. ಕೊರೋನಾ ವೈರಸ್ ಕಾರಣ ಜಮ್ಮ ಕಾಶ್ಮೀರದ ಆರ್ಥಿಕತೆ ಮೇಲೆ ಹೊಡೆತ ಬಿದ್ದಿದೆ. ಆದರೆ ಈ ಪ್ಯಾಕೇಜ್ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡಲಿದೆ ಎಂದು ಮನೋಜ್ ಸಿನ್ಹ ಹೇಳಿದ್ದಾರೆ.

ಕೊರೋನಾ ಕಾರಣ ಪ್ರವಾಸೋದ್ಯಮ ಸೇರಿದಂತೆ ಬಹುತೇಕ ಕ್ಷೇತ್ರಗಳು ನೆಲಕಚ್ಚಿದೆ. ಹೀಗಾಗಿ ಜಮ್ಮ ಮತ್ತು ಕಾಶ್ಮೀರದ ಆಟೋ ಚಾಲಕರು, ಬೋಟ್ ಚಾಲಕರು, ಬಸ್ ಹಾಗೂ ಟ್ಯಾಕ್ಸಿ ಚಾಲಕರು, ಟೂರಿಸ್ಟ್ ಗೈಡ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ದುಡಿಯುತ್ತಿದ್ದ ಜನರಿಗೆ ಸರ್ಕಾರ ನೆರವಾಗಲಿದೆ ಎಂದು ಮನೋಜ್ ಸಿನ್ಹ ಹೇಳಿದ್ದಾರೆ.

ಜಮ್ಮ ಮತ್ತು ಕಾಶ್ಮೀರದ ನೂತನ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.  ಈ ಪ್ಯಾಕೇಜ್ ಜೊತೆ ಕೇಂದ್ರ ಸರ್ಕಾರ ಒಂದು ವರ್ಷದ ವಿದ್ಯುತ್ ಹಾಗೂ ನೀರಿನ ಬಿಲ್   ಶೇಕಡಾ 50 ರಷ್ಟು ಕಡಿತಗೊಳಿಸಲಿದೆ. 

click me!