ಚಾರ್‌ಧಾಮ್ ಯಾತ್ರಾರ್ಥಿಗಳೇ ಗಮನಿಸಿ, ದೇವಸ್ಥಾನದ 200 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಬ್ಯಾನ್

By Mahmad Rafik  |  First Published May 16, 2024, 6:10 PM IST

ಚಾರ್‌ಧಾಮ್ ಯಾತ್ರೆಗೆ ಸಂಬಂಧಿಸಿದಂತೆ ಉತ್ತರಾಖಂಡ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ. ದೇವಸ್ಥಾನದ 200 ವ್ಯಾಪ್ತಿಯಲ್ಲಿ ಮೊಬೈಲ್ ನಿಷೇಧಿಸಲಾಗಿದೆ.


ಡೆಹರಾಡೂನ್: ಚಾರ್‌ದಾಮ್ ಯಾತ್ರೆಗೆ ಸಂಬಂಧಿಸಿದ ಮಹತ್ವದ ಮಾಹಿತಿಯೊಂದು ಹೊರ ಬಂದಿದೆ. ದೇವಸ್ಥಾನದ 200 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಬಳಕೆ ಮೇಲೆ ನಿಷೇಧ ವಿಧಿಸಲಾಗಿದೆ. ಈ ಕುರಿತು ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಆದೇಶ ಹೊರಡಿಸಿದ್ದಾರೆ. ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುಲಾಗುವುದಯ ಎಂದು ರಾಧಾ ರಾತುರಿ ಎಚ್ಚರಿಕೆಯನ್ನು ನೀಡಿದ್ದಾರೆ.

ಇತ್ತೀಚೆಗೆ ನಾಲ್ಕು ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಭಕ್ತರು, ಪ್ರವಾಸಿಗರು, ವಿಡಿಯೋ ವ್ಲಾಗರ್ ಸಂಖ್ಯೆಯೂ ಏರಿಕೆಯಾಗಿದೆ. ಈ ಹಿನ್ನೆಲೆ ಮೊಬೈಲ್ ಬ್ಯಾನ್ ಆದೇಶ ಪ್ರಕಟಿಸಲಾಗಿದೆ ಎಂದು ವರದಿಯಾಗಿದೆ.

Tap to resize

Latest Videos

ಮೊಬೈಲ್ ಬಳಕೆಗೆ ನಿಷೇಧ ಯಾಕೆ?

ಈ ಆದೇಶದ ಕುರಿತು ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ರಾಧಾ ರಾತುರಿ, ಚಾರ್‌ಧಾಮ್ ಯಾತ್ರೆಗೆ ಬಹುಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಭಕ್ತರು ಮಾತ್ರವಲ್ಲದೇ ಪ್ರೇಕ್ಷಣಿಯ ಸ್ಥಳ ಅಂತ ವೀಕ್ಷಣೆಗೆ ಬರೋ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದು ಭಕ್ತಾಧಿಗಳ ಭಕ್ತಿ ಮತ್ತು ನಂಬಿಕೆಗೆ ಧಕ್ಕೆ ಉಂಟು ಮಾಡುತ್ತಿದೆ. ಭಕ್ತಾದಿಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾದಂತೆ ತಡೆಯಲು ದೇವಸ್ಥಾನದ 200 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹಾಕಲಾಗಿದೆ ಎಂದು ಹೇಳಿದ್ದಾರೆ.

ಬೆಳಗ್ಗೆ ಕಾರ್ಪೋರೇಟ್‌ ಜಾಬ್‌, ಸಂಜೆಯಾದ್ರೆ ಟೀ-ಆಮ್ಲೆಟ್ ಮಾರಾಟ ಮಾಡೋ ಕೆಲ್ಸ!

ಕೆಲವರಿಂದ ಭಕ್ತರ ನಂಬಿಕೆ ಧಕ್ಕೆ

ಇಲ್ಲಿಗೆ ಬರೋ ಕೆಲ ಪ್ರವಾಸಿಗರ ನಡವಳಿಕೆಯಿಂದ ಭಕ್ತರ ನಂಬಿಕೆಗೆ ಧಕ್ಕೆ ಉಂಟಾಗುತ್ತಿತ್ತು. ಧಾರ್ಮಿಕ ನಂಬಿಕೆಗಳನ್ನು ಕಾಪಾಡೋ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ. ಇಲ್ಲಿಗೆ ಬರೋ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿ ರಾಧಾ ತಿಳಿಸಿದ್ದಾರೆ.

ವಿಶ್ರಾಂತಿ ವೇಳೆ ಮರಿಯಾನೆಗೆ ಆನೆ ಕುಟುಂಬದ Z ಪ್ಲಸ್ ಭದ್ರತೆ, ಅಣ್ಣಾಮಲೈ ಅರಣ್ಯದ ವಿಡಿಯೋ ವೈರಲ್!

ಇದೇ ವೇಳೆ ತೀರ್ಥಯಾತ್ರೆ ಬರೋ ಎಲ್ಲಾ ಯಾತ್ರಾರ್ಥಿಗಳಿಗೆ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಯಾತ್ರಾರ್ಥಿಗಳು ನೋಂದಣಿಯಾಗದ ಅಥವಾ ಅನಧಿಕೃತ ವಾಹನಗಳಲ್ಲಿ ಬರಬಾರದು. ಪ್ರತಿ ವಾಹನಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ನಿಯಮಗಳ ಉಲ್ಲಂಘನೆಯಾದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.

ಯಾತ್ರಾರ್ಥಿಗಳಿಗೆ ಊಟದ ವ್ಯವಸ್ಥೆ

ಯಾತ್ರಾರ್ಥಿಗಳಿಗೆ ಪ್ರತಿ ನಿಲ್ದಾಣದಲ್ಲಿಯೂ ಕುಡಿಯುವ ನೀರು ಸೇರಿದಂತೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದುವರೆಗೂ ಯಾವುದೇ ಕಾಲ್ತುಳಿತ ಪ್ರಕರಣಗಳು ಸಂಭವಿಸಿಲ್ಲ. ಒಂದು ವೇಳೆ ಯಾರಾದ್ರೂ ಸುಳ್ಳು ವದಂತಿ ಹಬ್ಬಿಸಿದ್ರೆ ಅಂತಹವರ ವಿರುದ್ ಕಠಿಣ ಕ್ರಮ ಜರುಗಿಸಲಾಗುವುದು ಎಂದು ರಾಧಾ ರಾತುರಿ ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್

ದೇವಸ್ಥಾನದ ಆವರಣದಲ್ಲಿ ನೂರಾರು ಜನರು ಮೊಬೈಲ್ ಹಿಡಿದು ನಿಂತಿರುವ ಜನರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದು ಪ್ರವಾಸಿತಾಣ ಅಲ್ಲ, ಇದೊಂದು ಪುಣ್ಯಕ್ಷೇತ್ರ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದರು.

click me!