ಅಮ್ಮ ಎಲ್ಲಿ? ಮದುವೆ ಮಂಟಪಕ್ಕೆ ಕಾಲಿಡುವ ಮೊದಲು ತಾಯಿ ಕಾಣದೆ ಕಂಗಲಾದ ವಧು!

By Chethan Kumar  |  First Published May 16, 2024, 6:01 PM IST

ಅಮ್ಮಾ, ಅಮ್ಮ ಎಲ್ಲಿ?...ಇನ್ನೇನು ಮದುವೆ ಮಂಟಪಕ್ಕೆ ಹತ್ತಬೇಕು ಅನ್ನುವಷ್ಟರಲ್ಲಿ ಮಧುಮಗಳು ತಾಯಿ ಕಾಣದೇ ಕಂಗಾಲಾಗಿದ್ದಾಳೆ. ತಾಯಿ ನೋಡದೆ ಮಂಟಪ ಹತ್ತಲು ನಿರಾಕರಿಸಿದ ವಿಡಿಯೋ ಒಂದು ವೈರಲ್ ಆಗಿದೆ.
 


ಮದುವೆ ದಿನ ಸಂಭ್ರಮ ಒಂದಡೆಯಾದರೆ ವಧು ಹಾಗೂ ವಧುವಿನ ಪೋಷಕರಿಗೆ ಸಂಭ್ರಮದ ಜೊತೆ ಭಾವುಕದ ಕ್ಷಣ. ಮಗಳನ್ನು ಪತಿ ಮನೆಗೆ ಕಳುಹಿಸುವ ಸಂದರ್ಭ ಪೋಷಕರ ಕಣ್ಣೀರಾಗದ ಘಟನೆಯೇ ಇಲ್ಲ. ಇಲ್ಲೊಬ್ಬ ಮಧುಮಗಳು ಮದುವೆ ಮಂಟಪಕ್ಕೆ ಹತ್ತಲು ನಿರಾಕರಿಸಿದ ಘಟನೆ ನಡೆದಿದೆ. ಮದುವೆ ಅಲಂಕಾರ, ಬ್ಯಾಂಡ್ ವಾದ್ಯಗಳೊಂದಿಗೆ ಮಂಟಪಕ್ಕೆ ಆಗಮಿಸಿದ ಮಧುಮಗಳು ಇನ್ನೇನು ಮದುವೆ ಮಂಟಪ ಪ್ರವೇಶಿಸಬೇಕು ಅನ್ನುವಷ್ಟರಲ್ಲೇ ತಾಯಿ ಕಂಡಿಲ್ಲ. ಅಮ್ಮಾ, ಅಮ್ಮಾ ಎಂದು ಕೂಗಿದ ಮಧುಮಗಳು, ಕಣ್ಣಿರಿಟ್ಟಿದ್ದಾರೆ. ಇಷ್ಟೇ ಅಲ್ಲ ತಾಯಿ ನೋಡದೆ ಮಂಟಪ ಪ್ರವೇಶಕ್ಕೆ ನಿರಾಕರಿಸಿದ ಘಟನೆ ವಿಡಿಯೋ ವೈರಲ್ ಆಗಿದೆ.

ಅದ್ಧೂರಿ ಮದುವೆ ಸಮಾರಂಭ. ಎಲ್ಲಾ ತಯಾರಿಯೊಂದಿಗೆ ಸಂಭ್ರಮ ಶುರುವಾಗಿದೆ. ವಧುವನ್ನು ಸಿಂಗರಿ ಮಂಟಪಕ್ಕೆ ಕರೆದುಕೊಂಡು ಬಂದಿದ್ದಾರೆ. ಅದ್ಧೂರಿ ಮೆರವಣಿಗೆ ಮೂಲಕ ಆಗಮನವಾಗಿದೆ. ಇನ್ನೇನು ಮಂಟಪ ಪ್ರವೇಶಿಸಬೇಕು ಅನ್ನುವಷ್ಟರಲ್ಲೇ ವಧು ಒಂದು ಕ್ಷಣ ಸುತ್ತು ಮುತ್ತ ನೋಡಿದ್ದಾಳೆ. ಎಲ್ಲಿಯೂ ತಾಯಿ ಕಾಣಲಿಲ್ಲ. ದೂರ ಕಣ್ಣು ಹಾಯಿಸಿದ್ದಾಳೆ. ಅಲ್ಲೂ ತಾಯಿ ಕಾಣಲಿಲ್ಲ. ಆತಂಕ ಹೆಚ್ಚಾಗಿದೆ. ಮಮ್ಮಿ, ಮಮ್ಮಿ ಎಂದು ಕೂಗಿದ್ದಾಳೆ. ತಾಯಿಯ ಪ್ರತಿಕ್ರಿಯೆ ಇಲ್ಲ.

Tap to resize

Latest Videos

ಮದ್ವೆಗಾಗಿ ಸಂಬಂಧಿಕರು ಕಾಯ್ತಿದ್ದರೆ, ಮದುಮಕ್ಕಳು ಹನಿಮೂನಿಗೆ ಹೋಗಾಗಿತ್ತು!

ಭಾವುಕಳಾದ ವಧು, ಕಣ್ಣೀರಿಟ್ಟಿದ್ದಾಳೆ. ಅಮ್ಮಾ ಎಲ್ಲಿ ಎಂದು ಕೂಗಿದ್ದಾಳೆ. ಆತಿಥಿಗಳನ್ನು ಸತ್ಕರಿಸುತ್ತಾ, ಸ್ವಾಗತ ನೀಡುತ್ತಿದ್ದ ತಾಯಿ, ಮಗಳ ಕೂಗಿನಿಂದ ಓಡೋಡಿ ಬಂದಿದ್ದಾರೆ. ಮಗಳನ್ನು ಬಿಗಿದಪ್ಪಿ ಸಿಹಿ ಮುತ್ತು ನೀಡಿದ್ದಾರೆ. ಇಬ್ಬರ ಕಣ್ಣಲ್ಲಿ ನೀರು, ನಿಂತವರು ಕೂಡ ಭಾವುಕರಾದ ಕ್ಷಣ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 

 
 
 
 
 
 
 
 
 
 
 
 
 
 
 

A post shared by Annushkka (@anushhkka_12)

 

anushhkka_12 ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಪೋಸ್ಟ್ ಮಾಡಲು ಬಂದು, ಕೊನೆಗೆ ಬೇಡ ಎಂದುಕೊಂಡೆ. ಆದರೆ ದಿನವಿಡಿ ಹಲವು ಬಾರಿ ಯೋಚನೆ ಮಾಡಿದೆ. ಸಾಮಾನ್ಯವಾಗಿ ತೀರಾ ವೈಯುಕ್ತಿಕ, ನನ್ನ ಹೃದಯಕ್ಕೆ ಆಪ್ತವಾದ ವಿಡಿಯೋಗಳನ್ನು ಪೋಸ್ಟ್ ಮಾಡುವುದಿಲ್ಲ. ಆದರೆ ಕೊನೆಗೆ ನಾನು ಈ ವಿಡಿಯೋ ಪೋಸ್ಟ್ ಮಾಡಲೇಬೇಕು ಎಂದು ಮಾಡಿದ್ದೇನೆ. ನಾವೆಷ್ಟೇ ದೊಡ್ಡವರಾಗಲಿ, ಮದುವೆ ದಿನ ನಾನು ಕೂಡ ತಾಯಿ ನನ್ನ ಸುತ್ತಲೇ ಇರಬೇಕು ಎಂದು ಬಯಸಿದ್ದೆ. ತಾಯಿ ಉಪಸ್ಥಿತಿ ಇಲ್ಲಾ ಎಂದಾಗ ಚಡಪಡಿಕೆ ಶುರುವಾಗುತ್ತದೆ. ಲವ್ ಯು ಅಮ್ಮಾ ಎಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

Video Viral ಚಿಪ್ಸ್ ಪ್ಯಾಕೆಟ್‌ನಲ್ಲಿ ಅಲಂಕರಿಸಿದ ಕಾರಿನಲ್ಲಿ ಮಂಟಪಕ್ಕೆ ಆಗಮಿಸಿದ ಮಧುಮಗ!

ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಯಿ ಉಪಸ್ಥಿತಿ ಎಲ್ಲಾ ಕಡೆ ಇರಬೇಕು. ತಾಯಿ ಶಕ್ತಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.ಮತ್ತೆ ಕೆಲವರು ಅಳುವುದು ಚಿಕ್ಕವರಿದ್ದಾಗ, ಭಾವುಕರಾಗುವುದು ನಿಜ. ಆದರೆ ಈ ವಿಡಿಯೋದಲ್ಲಿ ಅರ್ಥವಿಲ್ಲದ ಅಳು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
 

click me!