ಕೇದಾರನಾಥ ಯಾತ್ರಿಕರ ಮೇಲೆ ಕುದುರೆ ಸೇವೆ ಸಿಬ್ಬಂದಿಗಳಿಂದಲೇ ಹಲ್ಲೆ, ವಿಡಿಯೋ ವೈರಲ್!

By Suvarna News  |  First Published Jun 13, 2023, 7:24 PM IST

ಕೇದಾರನಾಥ ಪವಿತ್ರ ಕ್ಷೇತ್ರಕ್ಕೆ ತೆರಳಿದ ಯಾತ್ರಿಕರ ಮೇಲೆ ಹಲ್ಲೆ ಮಾಡಲಾಗಿದೆ. ಯಾತ್ರಿಕರಿಗೆ ಸೇವೆ ನೀಡುವ ಸಿಬ್ಬಂಧಿಗಳಿಂದಲೇ ದಾಳಿ ನಡೆದಿದೆ. ಈ ಕುರಿತು ವಿಡಿಯೋ ವೈರಲ್ ಆಗಿದೆ.


ಕೇದಾರನಾಥ್(ಜೂ.13): ಕೇದಾರನಾಥ ಯಾತ್ರೆಗೆ ಆಗಮಿಸುವ ಯಾತ್ರಿಕರ ಸಂಖ್ಯೆ ವರ್ಷದಿಂದ ವರ್ಷ ಹೆಚ್ಚಾಗುತ್ತಿದೆ. ಪವಿತ್ರ ದರ್ಶನಕ್ಕಾಗಿ ಭಕ್ತರು ಕಠಿಣ ಹಾದಿ ಸವೆಸಿ ಸಾಗುತ್ತಾರೆ. ಇದೇ ರೀತಿ ಕೇದಾರನಾಥ ಯಾತ್ರೆಗೆ ಬಂದಿದ್ದ ಜೋಡಿ ಮೇಲೆ, ಯಾತ್ರಿಕರಿಗೆ ಸೇವೆ ನೀಡುವ ಕುದರೆ ಸವಾರಿ ಸಿಬ್ಬಂದಿಗಳೇ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ಹಲ್ಲೆಕೋರರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಯುವತಿ ಸೇರಿ ಕೆಲ ಯಾತ್ರಿಕರ ಮೇಲೆ ತೀವ್ರ ದಾಳಿ ನಡೆಸಲಾಗಿದೆ. ಬಡಿಗೆ, ಕೋಲುಗಳಿಂದ ದಾಳಿ ನಡೆದಿತ್ತು ಯಾತ್ರಿಕರು ಗಾಯಗೊಂಡಿದ್ದಾರೆ.

ಎಪ್ರಿಲ್ 15 ರಿಂದ ಕೇದಾರನಾಥ ಯಾತ್ರೆ ಆರಂಭಗೊಂಡಿದೆ. ರುದ್ರಪ್ರಯಾಗ ಜಿಲ್ಲೆಯಿಂದ 82 ಕಿಲೋಮೀಟರ್ ದೂರದಲ್ಲಿರುವ ಚಾರ್ ಧಾಮ್ ಯಾತ್ರೆಗೆ ಉತ್ತರಖಂಡ ಸರ್ಕಾರ ಎಲ್ಲಾ ಸಿದ್ದತೆ ಮಾಡಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕೇದಾರನಾಥ ಯಾತ್ರೆಗೆ ನಿಯೋಜಿಸಿರುವ ಪೊಲೀಸರು ಹಾಗೂ ಇತರ ಭದ್ರತಾ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವಿಡಿಯೋದಲ್ಲಿ ಯುವತಿ ಹಾಗೂ ಆಕೆಯ ಜೊತೆಗಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ.

Tap to resize

Latest Videos

ಕಾಶಿ, ಪುರಿ,ಆಯೋಧ್ಯೆ ಸೇರಿ 6 ಪುಣ್ಯಕ್ಷೇತ್ರ ಯಾತ್ರೆಗೆ ಕೈಗೆಟುಕುವ ದರದ ಪ್ಯಾಕೇಜ್ ಘೋಷಿಸಿದ ರೈಲ್ವೇ !

ಕುದುರೆ ಸವಾರಿ ಸೇವೆ ನೀಡುವ ಸಿಬ್ಬಂಧಿಗಳು ತಮ್ಮ ಕೈಯಲ್ಲಿದ್ದ ಕೋಲಿನ ಮೂಲಕ ಹಲ್ಲೆ ನಡೆಸಲಾಗಿದೆ. ಯುವತಿ ಪರಿಪರಿಯಾಗಿ ಬೇಡಿಕೊಂಡರು ಜೊತೆಗಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದೆ. ಕೆಲ ಹೊತ್ತು ಈ ದಾಳಿ ನಡೆದಿದೆ. ಯಾತ್ರಿಕರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆಗೆ ಕಾರಣವೇನು ಅನ್ನೋದು ತಿಳಿದುಬಂದಿಲ್ಲ. ಇಷ್ಟೇ ಅಲ್ಲ  ಈ ಹಲ್ಲೆ ನಡೆದಿರುವ ದಿನಾಂಕ ಕುರಿತು ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಈ ಬಾರಿಯ ಯಾತ್ರೆ ವೇಳೆ ನಡೆದಿದೆ ಎನ್ನಲಾಗುತ್ತಿದೆ.

 

ಹಿಂದೂ ಯಾತ್ರಿಕರ ಮೇಲೆ ಹಲ್ಲೆ ಮಾಡಿದ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕುದುರಿ ಸವಾರಿ ನೀಡುವ ಸಿಬ್ಬಂದಿಗಳು ಮತ್ತೊಂದು ಸಮುದಾಯಕ್ಕೆ ಸೇರಿದವರು. ಹೀಗಾಗಿ ಕೋಮುಸಂಘರ್ಷ ನಡೆದಿದೆ. ತಕ್ಷಣವೇ ಉತ್ತರಖಂಡ ಸರ್ಕಾರ ಕುದುರೆ ಸೇವೆ ನೀಡುವ ಸಿಬ್ಬಂದಿಗಳ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಅನ್ಯ ಸಮುದಾಯಕ್ಕೆ ಹಿಂದೂ ಪವಿತ್ರಕ್ಷೇತ್ರದ ಗಾಂಭೀರ್ಯತೆ ಹಾಗೂ ಶ್ರದ್ಧೆ ಅರ್ಥವಾಗುವುದಿಲ್ಲ. ಹೀಗಾಗಿ ಕೆಲಸದಿಂದ ವಜಾಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

 

शर्मनाक/दुखद - केदारनाथ में चारधाम यात्रियों के साथ घोड़ा और खच्चर वालों ने की मारपीट घोड़ापड़ाव /भीमबली क्षेत्र की घटना यात्रियों को लाठी-डंडों से पीटा 😡 pic.twitter.com/2EihOj90KA

— Devendra Singh solanki (@Devendra964491)

 

ಅಮರನಾಥ ಯಾತ್ರೆ ಮೇಲೆ ದಾಳಿಗೆ ಉಗ್ರ ಸಂಚು: ಪಾಕ್‌​ನಿಂದ ಇಬ್ಬರು ಉಗ್ರರ ನಿಯೋ​ಜ​ನೆ

ಕಳೆದ ವರ್ಷದ ಚಾರ್‌ಧಾಮ್ ಯಾತ್ರೆಯಲ್ಲಿ ಅತ್ಯಂತ ದುರ್ಗಮ ಹಾದಿ ಹಾಗೂ ಪ್ರಕ್ಷುಬ್ದ ವಾತವಾರಣದಿಂದ ಹಲವು ಯಾತ್ರಿಗಳು ಅಸ್ವಸ್ಥಗೊಂಡಿದ್ದರು.  ಯಾತ್ರೆ ಆರಂಭವಾಗಿ 2 ತಿಂಗಳಿಗಿಂತ ಕಡಿಮೇ ಅವಧಿಯಲ್ಲೇ 203 ಯಾತ್ರಿಕರು ಸಾವಿಗೀಡಾಗಿದ್ದರು.. ಇವರಲ್ಲಿ ಬಹುತೇಕರು ಹೃದಯಾಘಾತದಿಂದ ಮರಣಹೊಂದಿದ್ದಾರೆ ಎಂದು ಉತ್ತರಾಖಂಡ ತುರ್ತು ಕಾರ್ಯಾಚರಣೆ ಕೇಂದ್ರ ಬಿಡುಗಡೆ ಮಾಡಿರುವ ದತ್ತಾಂಶದಿಂದ ತಿಳಿದುಬಂದಿದೆ. 97 ಯಾತ್ರಿಗಳು ಕೇದಾರನಾಥ ಯಾತ್ರೆ ದಾರಿಯಲ್ಲಿ, 51 ಮಂದಿ ಬದರೀನಾಥ ಧಾಮ, 13 ಮಂದಿ ಗಂಗೋತ್ರಿ ಮತ್ತು 42 ಮಂದಿ ಯಮುನೋತ್ರಿ ಯಾತ್ರೆಯ ವೇಳೆ ಸಾವಿಗೀಡಾಗಿದ್ದಾರೆ. ಮೇ 3ರಿಂದ ಆರಂಭವಾದ ಯಾತ್ರೆಯಲ್ಲಿ ಈವರೆಗೆ ಸುಮಾರು 25ಕ್ಕೂ ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.
 

H!ndu Pilgrims including one woman and two men were molested, beaten up with sticks, by group of "Khacchar Walas" during their Kedarnath Yatra.

It must be noted that most of the "Khacchar Walas" in Kedarnath are from 🅱️uslim community.pic.twitter.com/WwSSf2DCI8

— The Right Wing Guy (@rightwing_guy)
click me!