ವಿದೇಶದಿಂದ ಬಂದವರಿಗೆ ಏರ್‌ಪೋರ್ಟ್‌ಗಳಲ್ಲಿ ತಪಾಸಣೆ ವ್ಯವಸ್ಥೆ ಗೋಳು!

Published : Dec 24, 2020, 01:11 PM IST
ವಿದೇಶದಿಂದ ಬಂದವರಿಗೆ ಏರ್‌ಪೋರ್ಟ್‌ಗಳಲ್ಲಿ ತಪಾಸಣೆ ವ್ಯವಸ್ಥೆ ಗೋಳು!

ಸಾರಾಂಶ

ಬ್ರಿಟನ್‌ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ಉದಯಿಸಿರುವ ಹೊಸ ರೂಪದ ಕೊರೋನಾ| ವಿದೇಶದಿಂದ ಬಂದವರಿಗೆ ಏರ್‌ಪೋರ್ಟ್‌ಗಳಲ್ಲಿ ತಪಾಸಣೆ ವ್ಯವಸ್ಥೆ ಗೋಳು!

 

ಮುಂಬೈ(ಡಿ.24): ಬ್ರಿಟನ್‌ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ಉದಯಿಸಿರುವ ಹೊಸ ರೂಪದ ಕೊರೋನಾ ಪ್ರಭೇದ ತಡೆಗೆ ದೇಶದಲ್ಲಿ ಹೇರಲಾಗಿರುವ ನಿರ್ಬಂಧಗಳು ವಿದೇಶಗಳಿಂದ ತಾಯ್ನಾಡಿಗೆ ಮರಳುತ್ತಿರುವವರ ಗೊಂದಲ, ದ್ವಂದ್ವ ಮತ್ತು ಅಸಮಾಧಾನಗಳಿಗೆ ಕಾರಣವಾಗಿದೆ.

ಬ್ರಿಟನ್‌ ಸೇರಿದಂತೆ ಇನ್ನಿತರ ರಾಷ್ಟ್ರಗಳಿಂದ ವಾಪಸ್ಸಾಗುತ್ತಿರುವವರಿಗೆ ಕೊರೋನಾ ಪರೀಕ್ಷೆಗೊಳಪಡಿಸಿ, ಅವರನ್ನು ಸಾಮುದಾಯಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಆದರೆ ಕೊರೋನಾ ಪರೀಕ್ಷೆಗೆ ಮುಂಚಿತವಾಗಿಯೇ ಬುಕ್‌ ಮಾಡಿದ್ದರೂ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗಾಗಿ ಉದ್ದದ ಸಾಲುಗಳಲ್ಲಿ 7-8 ಗಂಟೆಗಳ ದೀರ್ಘಕಾಲ ಕಾಯುವ ದುಃಸ್ಥಿತಿ ಏರ್ಪಟ್ಟಿದೆ. ಜೊತೆಗೆ ಅಧಿಕಾರಿಗಳ ಮಧ್ಯೆ ಸಮನ್ವಯತೆಯೇ ಇಲ್ಲ ಎಂದು ಬ್ರಿಟನ್‌ ಮತ್ತು ಮಧ್ಯಪೂರ್ವ ರಾಷ್ಟ್ರಗಳಿಂದ ಭಾರತದ ಮುಂಬೈ ಮತ್ತು ದಿಲ್ಲಿ ಏರ್‌ಪೋರ್ಟ್‌ಗಳಿಗೆ ಮಂಗಳವಾರ ಮಧ್ಯರಾತ್ರಿ ಬಂದಿಳಿದ ಪ್ರಯಾಣಿಕರು ದೂರಿದ್ದಾರೆ.

ವಿದೇಶಗಳಿಂದ ಬರುವವರಿಂದ ಸೋಂಕು ಹಬ್ಬದಿರಲಿ ಎಂಬ ಉದ್ದೇಶ ಸರಿಯೇ. ಆದರೆ ವ್ಯವಸ್ಥೆಯೇ ಇಲ್ಲದಿದ್ದರೆ ಹೇಗೆ ಎಂದು ಅನಿವಾಸಿ ಭಾರತೀಯರು ಗೋಳಾಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ಅವಾಂತರದ ಬಳಿಕ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಫೋಟೋ ಭಾರಿ ವೈರಲ್
Viral Classroom Video: ಬಾಲಕಿಯ ಮುಗ್ದ ನಗುವಿಗೆ ಫಿದಾ, ಸರ್ಕಾರಿ ಶಾಲಾ ಟೀಚರ್ ಹಂಚಿಕೊಂಡ ವಿಡಿಯೋ ವೈರಲ್