ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟು ದಂಡ ತೆತ್ತ ಬೈಕ್ ಚಾಲಕ

By Suvarna News  |  First Published Dec 29, 2019, 7:35 PM IST

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಬೈಕ್​ನಲ್ಲಿ ಕರೆದುಕೊಂಡು ಹೋದ ಕಾಂಗ್ರೆಸ್​ ಮುಖಂಡ ಈಗ ದಂಡ ತೆತ್ತಬೇಕಾಗಿದೆ.  ಕಾರಣವೇನು..?


ಲಖನೌ, [ಡಿ.29]: ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಶನಿವಾರ ನಿವೃತ್ತ ಐಪಿಎಸ್​ ಅಧಿಕಾರಿ ಎಸ್.ಆರ್. ದರಾಪುರಿ ಕುಟುಂಬದ ಭೇಟಿಗೆ ಹೆಲ್ಮೆಟ್​ ಧರಿಸದೇ ಬೈಕ್​ನಲ್ಲಿ ಕರೆದುಕೊಂಡು ಹೋದ ಕಾಂಗ್ರೆಸ್​ ಮುಖಂಡಗೆ 6,100 ರೂಪಾಯಿ ದಂಡ ವಿಧಿಸಲಾಗಿದೆ.

ಸಿಎಎ ಪ್ರತಿಭಟನೆಯಲ್ಲಿ ಬಂಧಿತರಾಗಿರುವ ನಿವೃತ್ತ ಅಧಿಕಾರಿ ಎಸ್.ಆರ್. ದರಾಪುರಿ ಕುಟುಂಬದ ಭೇಟಿಗೆ ಶನಿವಾರ ಪ್ರಿಯಾಂಕಾ ಹೊರಟಿದ್ದಾಗ ಪೊಲೀಸರು ಅವರನ್ನು ತಡೆದಿದ್ದರು.  ಬಳಿಕ ಪ್ರಿಯಾಂಕಾ ಗಾಂಧಿ ಪಕ್ಷದ ಕಾರ್ಯಕರ್ತನ ಬೈಕ್​ನಲ್ಲಿ ನಿವೃತ್ತ ಐಪಿಎಸ್​ ಅಧಿಕಾರಿ ಎಸ್.ಆರ್. ದರಾಪುರಿ ಅವರ ಮನೆಗೆ ತೆರಳಿದ್ದರು.

Latest Videos

undefined

ಕತ್ತು ಹಿಡಿದು ನೂಕಿದರು ಎನ್ನುತ್ತಾರೆ ಪ್ರಿಯಾಂಕಾ, ಕರ್ತವ್ಯ ಮಾಡಿದೆ ಎನ್ನುತ್ತಾರೆ ಅಧಿಕಾರಿ!

ಆದ್ರೆ ಸ್ಕೂಟಿಯಲ್ಲಿ ಹೋಗುವಾಗ ಪ್ರಿಯಾಂಕ ಹೆಲ್ಮೆಟ್​ ಧರಿಸದೇ ರಸ್ತೆ ಸಂಚಾರ ನಿಯಮ [ಟ್ರಾಫಿಕ್ ರೂಲ್ಸ್] ಉಲ್ಲಂಘಿಸಿದ್ದಾರೆ. ಇದರಿಂದ ಬೈಕ್ ಚಾಲಕನಿಗೆ [ಕಾಂಗ್ರೆಸ್ ಮುಖಂಡ] ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.

Lucknow: The Congress party worker on whose two wheeler Priyanka Gandhi Vadra travelled while going to meet family members of Former IPS officer SR Darapuri yesterday, has been challaned with a penalty of Rs 6100 for not wearing helmets. (File pic) pic.twitter.com/LArpmx31UJ

— ANI UP (@ANINewsUP)

ಕುಟುಂಬದ ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ, ನಾನು ಆವರ ಮನೆಗೆ ತೆರಳದಂತೆ ಪೊಲೀಸರು ತಡೆದರು. ಈ ವೇಳೆ ನನ್ನ ಕುತ್ತಿಗೆ ಹಿಸುಕಿದರು ಎಂದು ಗಂಭೀರ ಆರೋಪ ಮಾಡಿದ್ದರು. ಆದ್ರ, ಇದನ್ನು ಉತ್ತರ ಪ್ರದೇಶ ಪೊಲೀಸರು ತಳ್ಳಿಹಾಕಿದ್ದಾರೆ. 

click me!