2 ಡೋಸ್‌ ಲಸಿಕೆ ಪಡೆದರಷ್ಟೇ ಮದ್ಯ ಖರೀದಿಗೆ ಅವಕಾಶ!

By Suvarna NewsFirst Published Sep 4, 2021, 11:28 AM IST
Highlights

* ಜನರು ಲಸಿಕೆ ಪಡೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ನೂತನ ಕ್ರಮ

* ನೀಲಗಿರಿ ಜಿಲ್ಲಾಡಳಿತ ವಿನೂತನ ಕ್ರಮದ್ದೇ ಚರ್ಚೆ

* ಮದ್ಯವನ್ನು ಖರೀದಿಸಬೇಕೆಂದರೆ ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಪ್ರಮಾಣ ಪತ್ರ ಖಡ್ಡಾಯ

ಚೆನ್ನೈ(ಸೆ.04): ಜನರು ಲಸಿಕೆ ಪಡೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ತಮಿಳುನಾಡಿನ ನೀಲಗಿರಿ ಜಿಲ್ಲಾಡಳಿತ ವಿನೂತನ ಕ್ರಮವೊಂದನ್ನು ಕೈಗೊಂಡಿದೆ. ಅದೇನೆಂದರೆ ಜನರು ಸರ್ಕಾರಿ ಸ್ವಾಮ್ಯದ ಮದ್ಯದ ಅಂಗಡಿಗಳಿಂದ ಮದ್ಯವನ್ನು ಖರೀದಿಸಬೇಕೆಂದರೆ ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಪ್ರಮಾಣ ಪತ್ರವನ್ನು ತೋರಿಸುವುದು ಕಡ್ಡಾವಾಗಿದೆ.

ಲಸಿಕೆ ಪಡೆಯದೇ ಇದ್ದವರಿಗೆ ಮದ್ಯ ಖರೀದಿಸಲು ಅವಕಾಶ ಇಲ್ಲ! ಎಲ್ಲರಿಗೂ ಜನರಿಗೆ ಲಸಿಕೆಯನ್ನು ಹಾಕಿಸುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಇನ್ನೊಸೆಂಟ್‌ ದಿವ್ಯಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಶೇ.97ರಷ್ಟು ಜನರಿಗೆ ಮೊದಲ ಡೋಸ್‌ ನೀಡಲಾಗಿದೆ. ಎಲ್ಲರಿಗೂ 2ನೇ ಡೋಸ್‌ ಲಸಿಕೆ ನೀಡುವುದು ಜಿಲ್ಲಾಡಳಿತದ ಗುರಿಯಾಗಿದೆ. ಹೀಗಾಗಿ ಮದ್ಯ ಖರೀದಿಗೆ ಲಸಿಕೆ ಪ್ರಮಾಣಪತ್ರವನ್ನು ಕಡ್ಡಾಯ ಮಾಡಲಾಗಿದೆ. ಜೊತೆ ಆಧಾರ್‌ ನಂಬರ್‌ ಅನ್ನು ಕೂಡ ಒದಗಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

click me!