ದೆಹಲಿ(ಮೇ.16): ದೇಶದಲ್ಲಿನ ಕೊರೋನಾ ಪರಿಸ್ಥಿತಿ ಹಾಗೂ ದೆಹಲಿಯಲ್ಲಿ ಆಕ್ಸಿಜನ್ ಕೊರತೆ , ಕೊರೋನಾ ಪ್ರಕರಣ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಟೀಕಿಸಿ ದೆಹಲಿಯ ಪ್ರಮುಖ ಕಡೆಗಳಲ್ಲಿ ಪೋಸ್ಟರ್ ಹಾಕಲಾಗಿತ್ತು. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕಾರಣ ಈ ಪ್ರಕರಣದ ಹಿಂದೆ ಆಮ್ ಆದ್ಮಿ ಪಕ್ಷದ ನೇರ ಕೈವಾಡವಿರುದು ತನಿಖೆಯಲ್ಲಿ ಬಯಲಾಗಿದೆ.
ಸಭೆಗೆ ಬಾರದೆ 2ನೇ ಅಲೆಗೆ ಕೇಂದ್ರವೇ ಕಾರಣ ಅನ್ನುವರಿಗೆ ಬಿಜೆಪಿ ದಾಖಲೆ ಉತ್ತರ
undefined
ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಗೌತಮ್ , ಮೋದಿ ಟೀಕಿಸಿ ಪೋಸ್ಟರ್ ಹಾಕಲು 9,000 ರೂಪಾಯಿ ನೀಡಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ದೆಹಲಿ ಪೊಲೀಸರು ಒಬ್ಬೊಬ್ಬರನ್ನೇ ಅರೆಸ್ಟ್ ಮಾಡುತ್ತಿದ್ದಂತೆ, ಅರವಿಂದ್ ಗೌತಮ್ ಎಸ್ಕೇಪ್ ಆಗಿದ್ದಾನೆ.
Police while patrolling to enforce Lockdown announced by DDMA, created by GNCTD, noticed walls in several areas being defaced by pasting posters. Accused persons on questioning told an AAP member & President of Ward 47, Arvind Gautam was behind it in Mangolpuri. He is absconding. pic.twitter.com/ACmTHQryZc
— #DilKiPolice Delhi Police (@DelhiPolice)ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 25 ಮಂದಿಯನ್ನು ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಮೂಲಕ ಆಮ್ ಆದ್ಮಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವ್ಯವಸ್ಥಿತಿ ಪಿತೂರಿ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪುಷ್ಠಿ ಸಿಕ್ಕಿದೆ.
ಪೊಲೀಸರು ಪ್ರಕರಣ ಹಿಂದಿನ ರೂವಾರಿಗಳನ್ನು ಬಂಧಿಸುತ್ತಿದ್ದಂತೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖರು ಮೋದಿ ಟೀಕಿಸುವ ಪಕ್ಷದಲ್ಲಿ ನಾನು ಇದ್ದೇನೆ. ನನ್ನನ್ನೂ ಅರೆಸ್ಟ್ ಮಾಡಿ ಎಂದು ಟ್ವೀಟ್ ಮಾಡಿದ್ದರು. ವಿರೋಧ ಪಕ್ಷದ ಪ್ರಮುಖ ನಾಯಕರು ಬಂಧನ ವಿರುದ್ಧ ಕಿಡಿ ಕಾರಿದ್ದರು.
सवाल: मोदी जी,हमारे बच्चों की VACCINE विदेश क्यों भेज दिया?
जवाब: 👇👇 pic.twitter.com/bUzfQOTRLC
ಅಸಲಿಯತ್ತು ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್ ಪೇಚಿಗೆ ಸಿಲುಕಿದೆ. ಇದೀಗ ಈ ಪ್ರಕರಣದಲ್ಲಿ ಕಾಂಗ್ರೆಸ್ ರೋಷಾವೇಶ ನೋಡಿದರೆ ಕಾಂಗ್ರೆಸ್ ನಾಯಕರೂ ಇದರ ಹಿಂದೆ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.