Covid Threat: ಕೇಂದ್ರ ಸರ್ಕಾರದ ಸಿಬ್ಬಂದಿಗೆ ವಿನಾಯ್ತಿ!

By Kannadaprabha NewsFirst Published Jan 4, 2022, 6:16 AM IST
Highlights

* ಗರ್ಭಿಣಿ, ಅಂಗವಿಕಲರು ಕಚೇರಿಗೆ ಬರದಿರಲು ವಿನಾಯ್ತಿ

* ಕೋವಿಡ್‌ ಕಾರಣ ಕೇಂದ್ರ ಸರ್ಕಾರದ ಹೊಸ ಆದೇಶ

* ಕೇಂದ್ರ ಸರ್ಕಾರದ ಶೇ.50 ಸಿಬ್ಬಂದಿಗೆ ‘ವರ್ಕ್ ಫ್ರಂ ಹೋಂ’

ನವದೆಹಲಿ(ಜ.04): ಕೊರೋನಾ ಪ್ರಕರಣಗಳು ಗಂಭೀರ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯದರ್ಶಿ ರಾರ‍ಯಂಕ್‌ಗಿಂತ ಕೆಳಗಿನ ಸಿಬ್ಬಂದಿಯ ಶೇ.50ರಷ್ಟುಮಂದಿಗೆ ‘ಮನೆಯಿಂದಲೇ ಕೆಲಸ’ಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಈ ಪ್ರಕಾರ ದಿವ್ಯಾಂಗರು ಮತ್ತು ಗರ್ಭಿಣಿ ಮಹಿಳೆಯರು ಕಚೇರಿಗೆ ಹಾಜರಾಗುವುದರಿಂದ ವಿನಾಯ್ತಿ ನೀಡಲಾಗಿದೆ.

ಅಲ್ಲದೆ ಕೋವಿಡ್‌ ಕಂಟೇನ್ಮೆಂಟ್‌ ವಲಯದಲ್ಲಿರುವ ಕಚೇರಿಗಳ ಸಿಬ್ಬಂದಿ ಆ ವಲಯಗಳನ್ನು ಕೋವಿಡ್‌ ಕಂಟೇನ್ಮೆಂಟ್‌ ಮುಕ್ತವಾಗಿಸುವವರೆಗೆ ಸಿಬ್ಬಂದಿ ಕಚೇರಿಗೆ ಬರುವಂತಿಲ್ಲ ಎಂಬ ಆದೇಶವನ್ನು ಕೇಂದ್ರದ ಎಲ್ಲಾ ಇಲಾಖೆಗಳಿಗೆ ರವಾನಿಸಲಾಗಿದೆ. ಜತೆಗೆ ಕಚೇರಿಗಳಲ್ಲಿ ಹೆಚ್ಚಿನ ಜನದಟ್ಟಣೆ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕಚೇರಿಯ ಒಟ್ಟಾರೆ ಸಂಖ್ಯೆಯ ಶೇ.50 ಮಂದಿ ಮಾತ್ರವೇ ಕಚೇರಿಯಲ್ಲಿರಬೇಕೆಂಬ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಬಯೋಮೆಟ್ರಿಕ್‌ ಹಾಜರಾತಿಗೂ ಬ್ರೇಕ್‌:

ಕೋವಿಡ್‌ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೋಮವಾರದಿಂದ ತನ್ನ ಎಲ್ಲ ಉದ್ಯೋಗಿಗಳು ಬಯೋಮೆಟ್ರಿಕ್‌ ಹಾಜರಾತಿ ಹಾಕುವುದನ್ನು ಜ.31 ರವರೆಗೆ ಸ್ಥಗಿತಗೊಳಿಸಿದೆ.

ಸರ್ಕಾರಿ ಉದ್ಯೋಗಿಗಳ ಆರೋಗ್ಯ ಹಾಗೂ ಸುರಕ್ಷತೆಗಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಮುಂದಿನ ಆದೇಶದವರೆಗೆ ಸರ್ಕಾರಿ ಉದ್ಯೋಗಿಗಳು ಹಾಜರಾತಿಯನ್ನು ಹಾಜರಾತಿ ರೆಜಿಸ್ಟರ್‌ನಲ್ಲಿ ದಾಖಲಿಸಬೇಕು. ಅಲ್ಲದೆ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಮಾಸ್ಕ್‌ ಸೇರಿದಂತೆ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬ ಆದೇಶ ಹೊರಡಿಸಲಾಗಿದೆ.

ಮನೆಯಿಂದ ಕೆಲಸ ಮಾಡುತ್ತಿರುವವರಿಗೆ ಗುಡ್ ನ್ಯೂಸ್, ಕೇಂದ್ರದಿಂದ ಹೊಸ ಕಾನೂನು

 

ಕೊರೊನಾ ನಂತರ ವರ್ಕ್ ಫ್ರಂ ಹೋಮ್ (work from home) ಪಾಲಿಸಿ ಜಾರಿಗೆ ಬಂದಿತ್ತು. ಆದರೆ ಕಚೇರಿಗಿಂತ ಮನೆಯಲ್ಲಿರುವ ಉದ್ಯೋಗಿಗಳು (employees) ಹೆಚ್ಚು ಕೆಲಸ ಮಾಡ್ತಿದ್ದಾರೆ. ಇದು ಅವರ ಒತ್ತಡವನ್ನು ಹೆಚ್ಚಿಸಿದೆ.  ಮನೆಯಲ್ಲಿಯೇ ಕೆಲಸ ಮಾಡುವುದು ನಿಂದ ಹಿಂಸೆಯಾಗ್ತಿದೆ ಎನ್ನುವವರಿಗೆ ಖುಷಿ ಸುದ್ದಿಯೊಂದಿದೆ. ಕೇಂದ್ರ ಸರಕಾರ (Cental government) ಶೀಘ್ರದಲ್ಲೇ ಮನೆಯಿಂದಲೇ ಕಛೇರಿ ಕೆಲಸ ಮಾಡುತ್ತಿರುವ ವಿಚಾರವಾಗಿ  ಕಾನೂನು (law) ಒಂದನ್ನು ರಚಿಸಲಿದೆ. ಇದರಲ್ಲಿ ಕಂಪನಿಯು (Company) ತನ್ನ ಉದ್ಯೋಗಿ ಮನೆಯಿಂದ ಕೆಲಸ ಮಾಡುವಾಗ (WFH)  ಯಾವ ರೀತಿಯಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬುದನ್ನು ಇದರಲ್ಲಿ ಉಲ್ಲೇಖಿಸಲಾಗುವುದು. ಕೋವಿಡ್ -19 (Covid 19) ಹಿನ್ನೆಲೆ  ಏಕಾಏಕಿ ಅನೇಕ ಕಂಪನಿಗಳು ಇನ್ನೂ ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿಸುತ್ತಿವೆ. ಕಂಪೆನಿಗಳು ಇದಕ್ಕೆ ಯಾವುದೇ ಸ್ಥಿರ ಚೌಕಟ್ಟನನು ರಚಿಸಿಲ್ಲ. ಸಾಮಾನ್ಯವಾಗಿ ಅನೇಕ ಉದ್ಯೋಗಿಗಳಿಂದ ಕಚೇರಿಗಿಂತ  ಹೆಚ್ಚಿನ ಕೆಲಸವನ್ನು ಕಂಪೆನಿ ಪಡೆಯುತ್ತಿದೆ. ಈ ಬಗ್ಗೆ ಆರೋಪಗಳು ಕೂಡ ಇದೆ. ಇದನ್ನು ವಿರೋಧಿಸಲು ಅಥವಾ ಈ ಶೋಷಣೆಯಿಂದ ಪಾರಾಗಲು ಭಾರತದಲ್ಲಿ ಇದುವರೆಗೆ ಯಾವುದೇ ಕಾನೂನು ಇಲ್ಲ.

INDIAN ARMY: ಭಾರತೀಯ ಸೇನೆಯ 1 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ!

ನೂತನ ಕಾನೂನಿನಂತೆ ವರ್ಕ್ ಫ್ರಮ್ ಹೋಮ್ ನಲ್ಲಿ ಇಷ್ಟೇ ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಸಮಯ ನಿಗದಿಯಾಗುವ ಸಾಧ್ಯತೆ ಇದೆ. ಇದಲ್ಲದೇ ಮನೆಯಿಂದ ಕೆಲಸ ಮಾಡುವಾಗ ವಿದ್ಯುತ್ ಮತ್ತು ಇಂಟರ್‌ನೆಟ್‌ನಂತಹ ವೆಚ್ಚಗಳಿಗೆ ಕಂಪನಿಯು ಎಷ್ಟು ಹಣವನ್ನು ಪಾವತಿಸಬೇಕು ಎಂಬುದನ್ನೂ ಕಾನೂನಿನಲ್ಲಿ ನಿರ್ಧರಿಸಲಾಗುತ್ತದೆ.  ನಿಯಮಗಳು ಯಾವುದೆಲ್ಲ ಇರಬೇಕು ಎಂಬುದರ ಬಗ್ಗೆ ಕೂಡ ಸರಕಾರ ಶೀಘ್ರದಲ್ಲೇ ಕ್ರಮ ಕೈಗೊಳ್ಳಬಹುದು ಎಂದು ಕೇಂದ್ರ ಸರ್ಕಾರದ  ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. 

IIT Bombay alumni: ಟಿಟ್ಟರ್ ಸಿಇಓನಿಂದ ಹಿಡಿದು ಇಸ್ರೋ ಅಧ್ಯಕ್ಷರ ತನಕ, ಐಐಟಿ ಹೆಮ್ಮೆಯ 11

ಕೇಂದ್ರ ಸರ್ಕಾರವು ಈಗ ಎಲ್ಲಾ ಕ್ಷೇತ್ರಗಳಿಗೆ ಸಮಗ್ರ ಔಪಚಾರಿಕ ನೀತಿ ನಿಯಮಗಳನ್ನು ರಚಿಸಲು ಮುಂದಾಗಿದೆ. ಪೋರ್ಚುಗಲ್‌ನಲ್ಲಿ ಇತ್ತೀಚೆಗೆ ಜಾರಿಗೆ ಬಂದ ಕಾನೂನು ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ಹೆಚ್ಚಿನ ರಕ್ಷಣೆ ಕೊಟ್ಟಿದೆ. ಪೋರ್ಚುಗಲ್‌ನಲ್ಲಿ ಕಾರ್ಮಿಕ ನಿಯಮಗಳ ಚೌಕಟ್ಟನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ನೌಕರರ ಶೋಷಣೆ ತಡೆಯಲು ಈ ಕಾನೂನು ಅಹಾಯವಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Naukri JobSpeak Index : ನೇಮಕಾತಿ ವಿಷಯದಲ್ಲಿ ಬೆಂಗಳೂರು ನಗರವೇ ಟಾಪ್

2021ರ ಜನವರಿಯಲ್ಲಿ , ಕೇಂದ್ರ ಸರಕಾರವು ಸ್ಥಾಯಿ ಆದೇಶದ ಮೂಲಕ ಸೇವಾ ವಲಯಕ್ಕೆ ಮನೆಯಿಂದ ಕೆಲಸ ಮಾಡಲು ಒಪ್ಪಿಗೆ ನೀಡಿತು. ಕಂಪನಿ ಮತ್ತು ಉದ್ಯೋಗಿಗಳು ಕೆಲಸದ ಸಮಯ ಮತ್ತು ಇತರ ಷರತ್ತುಗಳ ಬಗ್ಗೆ ಪರಸ್ಪರ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಆದರೂ ಕೂಡ ಐಟಿ ಮತ್ತು ಐಟಿಇಎಸ್ ಅನ್ನು ಹೆಚ್ಚಾಗಿ ಒಳಗೊಂಡಿರುವ ಸೇವಾ ವಲಯವು ಈಗಾಗಲೇ ವಿಶೇಷ ಸಂದರ್ಭಗಳಲ್ಲಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಿರುವುದರಿಂದ ಕೇಂದ್ರದ ಈ ಕ್ರಮವು ಕೇವಲ ಸಾಂಕೇತಿಕ ಎಂಬಂತಿದೆ.

click me!