Covid Cases ಭಾರತಕ್ಕೆ ಲಗ್ಗೆ ಇಟ್ಟಿತಾ ಹೊಸ ಕೋವಿಡ್ ತಳಿ, 5 ರಾಜ್ಯಕ್ಕೆ ಕೇಂದ್ರ ಪತ್ರ!

Published : Apr 20, 2022, 04:24 AM IST
Covid Cases ಭಾರತಕ್ಕೆ ಲಗ್ಗೆ ಇಟ್ಟಿತಾ ಹೊಸ ಕೋವಿಡ್ ತಳಿ, 5 ರಾಜ್ಯಕ್ಕೆ ಕೇಂದ್ರ ಪತ್ರ!

ಸಾರಾಂಶ

ದಿಲ್ಲಿ ಸೋಂಕು ಏರಿಕೆ, ದೇಶಕ್ಕೆ ಮುನ್ನೆಚ್ಚರಿಕೆ ಹೊಸ ತಳಿ ಕಾರಣವೇ ಎಂಬುದರ ಪತ್ತೆಗೆ ಟೆಸ್ಟ್‌ ರಾಜ್ಯದಲ್ಲೂ ಸೋಂಕು,ಪಾಸಿಟಿವಿಟಿ ದರ ಹೆಚ್ಚಳ

ನವದೆಹಲಿ(ಏ.20): ದಿಲ್ಲಿ ಹಾಗೂ ಸುತ್ತಲಿನ ರಾಜಧಾನಿ ವಲಯದಲ್ಲಿ ಏಕಾಏಕಿ ಕೋವಿಡ್‌ ಸಂಖ್ಯೆ ಏರಿಕೆ ಆಗತೊಡಗಿದೆ. ಇದು ದೇಶಕ್ಕೆ ಮುನ್ನೆಚ್ಚರಿಕೆಯಂತಿದೆ. ಸೋಂಕು ಏರಿಕೆಗೆ ಹೆಚ್ಚು ಸೋಂಕುಕಾರಕವಾಗಿರುವ ಇತ್ತೀಚಿನ ಕೋವಿಡ್‌ ತಳಿಯಾದ ‘ಎಕ್ಸ್‌ಇ’ ಕಾರಣವೆ ಅಥವಾ ಇನ್ನಾವುದೋ ಹೊಸ ಕೋವಿಡ್‌ ತಳಿ ಕಾರಣವೇ ಎಂಬುದರ ಪತ್ತೆಗೆ ಸರ್ಕಾರ ಮುಂದಾಗಿದೆ.

ಹೀಗಾಗಿ ಕೋವಿಡ್‌ ಸೋಂಕಿತರ ಸ್ಯಾಂಪಲ್‌ಗಳನ್ನು ಜೀನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಕಳಿಸಲಾಗಿದೆ. ಇನ್ನೊಂದು ವಾರದಲ್ಲಿ ಇದರ ವರದಿ ಬರುವ ನಿರೀಕ್ಷೆಯಿದೆ.

ದಿಲ್ಲಿಯಲ್ಲಿ ಕಳೆದ 1 ವಾರದಿಂದ ಕೋವಿಡ್‌ ಏರುತ್ತಿದೆ. ಮಂಗಳವಾರ ಇತ್ತೀಚಿನ ತಿಂಗಳಲ್ಲೇ ಗರಿಷ್ಠ ಎನ್ನಬಹುದಾದ 642 ಪ್ರಕರಣ ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ.4.4ರಷ್ಟುದಾಖಲಾಗಿದೆ. ಈ ಹಿಂದೆ ಗುಜರಾತ್‌ನಲ್ಲಿ ‘ಎಕ್ಸ್‌ಇ’ ತಳಿ ಪತ್ತೆಯಾಗಿದ್ದರೂ ಅಲ್ಲಿ ಸೋಂಕು ವ್ಯಾಪಿಸಿರಲಿಲ್ಲ. ಆದರೆ ದಿಲ್ಲಿ ಹಾಗೂ ರಾಜಧಾನಿ ವಲಯದಲ್ಲಿ ಮಾತ್ರ ಸೋಂಕು ದಿಢೀರ್‌ ವ್ಯಾಪಿಸುತ್ತಿದೆ. ಹೀಗಾಗಿ ಇದು ಹೊಸ ತಳಿಯ ಕೊರೋನಾ ವೈರಾಣುವೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಸೀಕ್ವೆನ್ಸಿಂಗ್‌ ವರದಿ ಬಂದ ಬಳಿಕ ಈ ಅನುಮಾನಕ್ಕೆ ಪರಿಹಾರ ಸಿಗಲಿದೆ.

ಭಾರತದಲ್ಲಿ ನಿಜಕ್ಕೂ ಕೊರೋನಾ ನಿಯಂತ್ರಣದಲ್ಲಿದೆಯಾ? ಇಲ್ಲಿದೆ ಇನ್‌ಸೈಡ್ ಸ್ಟೋರಿ!

ಇಂದು ಸಭೆ:
ಈ ನಡುವೆ, ಬುಧವಾರ ದಿಲ್ಲಿ ವಿಕೋಪ ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಲಿದೆ. ಸಭೆಯಲ್ಲಿ ಕೋವಿಡ್‌ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯಲ್ಲಿ ಉಪರಾಜ್ಯಪಾಲ ಅನಿಲ್‌ ಬೈಜಲ್‌, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪಾಲ್ಗೊಳ್ಳಲಿದ್ದಾರೆ.

ಏತನ್ಮಧ್ಯೆ, ದಿಲ್ಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಪ್ರತಿಕ್ರಿಯಿಸಿ, ‘ಕೋವಿಡ್‌ ಇನ್ನು ಒಂದಿಲ್ಲೊಂದು ರೂಪದಲ್ಲಿ ಇದ್ದೇ ಇರುತ್ತದೆ ಎನ್ನಿಸುತ್ತಿದೆ. ಹೀಗಾಗಿ, ಸುರಕ್ಷಿತ ಕ್ರಮಗಳನ್ನು ಕೈಗೊಂಡು ಅದರ ಜತೆ ಜೀವನ ನಡೆಸುವುದನ್ನು ಕಲಿಯಬೇಕು. ಆದರೆ ಆತಂಕ ಪಡಬಾರದು’ ಎಂದಿದ್ದಾರೆ.

ರಾಜ್ಯದಲ್ಲೂ ಸೋಂಕು,ಪಾಸಿಟಿವಿಟಿ ದರ ಹೆಚ್ಚಳ
ದೇಶದ ಇತರೆಡೆಯಂತೆ ರಾಜ್ಯದಲ್ಲೂ ನಿಧಾನವಾಗಿ ಕೋವಿಡ್‌ ಹೆಚ್ಚಾಗುತ್ತಿದೆ. ಏಪ್ರಿಲ್‌ ಮೊದಲ ವಾರಕ್ಕೆ ಹೋಲಿಸಿದರೆ ಪಾಸಿಟಿವಿಟಿ ದರ 2 ಪಟ್ಟು ದರ ಏರಿದೆ. ವಾರದ ಸೋಂಕು ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ.

ಕೋವಿಡ್‌ ಹರಡುವಿಕೆ ಪ್ರಮಾಣ ಶೇ.500ರಷ್ಟು ಏರಿಕೆ!

ಮಕ್ಕಳಲ್ಲಿ ಸೋಂಕು ಹೆಚ್ಚಳ: ತೀವ್ರ ಭೀತಿ
ದೆಹಲಿಗೆ ಸಮೀಪದ ಉತ್ತರಪ್ರದೇಶದ ಗೌತಮ ಬುದ್ಧನಗರ ಜಿಲ್ಲೆಯಲ್ಲಿ ಮಂಗಳವಾರ 107 ಜನರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದ್ದಾರೆ. ಆ ಪೈಕಿ 33 ಮಂದಿ ಮಕ್ಕಳಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ

ಕೋವಿಡ್‌ ಹೆಚ್ಚಳ ಕಾರಣ 5 ರಾಜ್ಯಗಳಿಗೆ ಕೇಂದ್ರ ಪತ್ರ!
ಇತ್ತೀಚಿನ ದಿನಗಳಲ್ಲಿ 5 ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಆಯಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ.

ದಿಲ್ಲಿ, ಉತ್ತರ ಪ್ರದೇಶ, ಹರಾರ‍ಯಣ, ಮಹಾರಾಷ್ಟ್ರ ಹಾಗೂ ಮಿಜೋರಂಗಳಲ್ಲಿ ಪಾಸಿಟಿವಿಟಿ ದರ ಹಾಗೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬಂದಿದೆ. ಹೀಗಾಗಿ ಇಲ್ಲಿ ಕೋವಿಡ್‌ ಸನ್ನಡತೆ ಪಾಲನೆ, ಪರೀಕ್ಷೆ, ಚಿಕಿತ್ಸೆ, ಸೂಕ್ತ ಚಿಕಿತ್ಸೆ- ಇತ್ಯಾದಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪತ್ರದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ತಿಳಿಸಿದ್ದಾರೆ.

ದಿಲ್ಲಿ ಪಕ್ಕದ ಗೌತಮ ಬುದ್ಧ ಜಿಲ್ಲೇಲಿ 107 ಹೊಸ ಕೇಸು, ಇದರಲ್ಲಿ 33 ಮಕ್ಕಳು!
ರಾಜಧಾನಿ ನವದೆಹಲಿಗೆ ಹೊಂದಿಕೊಂಡಂತೆ ಇರುವ ಉತ್ತರಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿ ಮಂಗಳವಾರ 107 ಜನರಲ್ಲಿ ಹೊಸದಾಗಿ ಕೋವಿಡ್‌ ಸೋಂಕು ಪತ್ತೆಯಾಗಿದೆ. ಇದರಲ್ಲಿ 33 ಮಕ್ಕಳೇ ಇದ್ದಾರೆ. ಹೀಗಾಗಿ ಸ್ಥಳೀಯ ಪೋಷಕರಲ್ಲಿ ಆತಂಕ ಉಂಟಾಗಿದೆ. ಆದರೆ ಕೇಸು ಹೆಚ್ಚಳದ ಬಗ್ಗೆ ಆತಂಕದ ಬದಲು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?