ಬೆಂಗಳೂರು- ಚೆನ್ನೈ, ರಿಂಗ್‌ ರೋಡ್‌ಗೆ 2024ರ ಗಡುವು

Kannadaprabha News   | Asianet News
Published : Aug 14, 2020, 11:36 AM IST
ಬೆಂಗಳೂರು- ಚೆನ್ನೈ, ರಿಂಗ್‌ ರೋಡ್‌ಗೆ 2024ರ ಗಡುವು

ಸಾರಾಂಶ

ರಸ್ತೆ ಕಾಮಗಾರಿಗಳಿಗೆ ಚುರುಕು ನೀಡುವ ನಿಟ್ಟಿನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು- ಚೆನ್ನೈ ಸೇರಿದಂತೆ 23 ನೂತನ ಹೆದ್ದಾರಿಗಳ ಪೂರ್ಣಕ್ಕೆ ಗಡುವು ನಿಗದಿಪಡಿದ್ದು, 2025ರ ಮಾರ್ಚ್ ವೇಳೆಗೆ ಎಲ್ಲಾ ರಸ್ತೆಗಳು ಮುಗಿದು ಸಂಚಾರಕ್ಕೆ ಲಭ್ಯವಾಗಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಆ.14): ರಸ್ತೆ ಕಾಮಗಾರಿಗಳು ಆರಂಭವಾಗಿ ಎಷ್ಟೋ ವರ್ಷಗಳು ಆದರೂ ಅವು ಪೂರ್ಣಗೊಳ್ಳುವುದೇ ಇಲ್ಲ. ಹೀಗಾಗಿ ರಸ್ತೆ ಕಾಮಗಾರಿಗಳಿಗೆ ಚುರುಕು ನೀಡುವ ನಿಟ್ಟಿನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು- ಚೆನ್ನೈ ಸೇರಿದಂತೆ 23 ನೂತನ ಹೆದ್ದಾರಿಗಳ ಪೂರ್ಣಕ್ಕೆ ಗಡುವು ನಿಗದಿಪಡಿದ್ದು, 2025ರ ಮಾರ್ಚ್ ವೇಳೆಗೆ ಎಲ್ಲಾ ರಸ್ತೆಗಳು ಮುಗಿದು ಸಂಚಾರಕ್ಕೆ ಲಭ್ಯವಾಗಲಿವೆ.

272 ಕಿ.ಮೀ. ಉದ್ದದ ಬೆಂಗಳೂರು- ಚೆನ್ನೈ ಹೆದ್ದಾರಿಯನ್ನು 2024ರ ಮಾರ್ಚ್ ಒಳಗಾಗಿ ಪೂರ್ಣಗೊಳಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಅದೇ ರೀತಿ 281 ಕಿ.ಮೀ. ಉದ್ದದ ಬೆಂಗಳೂರು ಸ್ಯಾಟಲೈಟ್‌ ಟೌನ್‌ ವರ್ತುಲ ರಸ್ತೆ 2024ರ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದೆ.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ; ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟ ಸರ್ಕಾರ

ಈ ಎಲ್ಲಾ ರಸ್ತೆಗಳ ಒಟ್ಟೂಉದ್ದ 7,800 ಕಿ.ಮೀ. ಆಗಲಿದ್ದು, ಮುಂದಿನ 5 ವರ್ಷಗಳಲ್ಲಿ ಅಂದಾಜು 3.3 ಲಕ್ಷ ಕೋಟಿ ರು. ವೆಚ್ಚವಾಗಲಿದೆ. ಎಕ್ಸ್‌ಪ್ರೆಸ್‌ ಹೆದ್ದಾರಿಗಳ ಜಾಲ ದೇಶದೆಲ್ಲೆಡೆ ಹರಡಿಕೊಂಡಿದ್ದು, ಸೂರತ್‌, ಲಖನೌ, ವಿಶಾಖಪಟ್ಟಣ, ಚೆನ್ನೈ, ಬೆಂಗಳೂರು, ವಿಜಯವಾಡ, ರಾಯ್‌ಪುರ, ಕೋಟಾ, ಖರಗ್‌ಪುರ, ಸಿಲಿಗುರಿಗಳಿಗೆ ಸಂಪರ್ಕ ಕಲ್ಪಿಸಲಿದೆ.

ರಾಜ್ಯದ 2 ಹೆದ್ದಾರಿಗೆ ಗಡುವು

- ಬೆಂಗಳೂರು- ಚೆನ್ನೈ: 272 ಕಿ.ಮೀ. ಉದ್ದ. 2024ರ ಮಾರ್ಚ್‌ಗೆ ಪೂರ್ಣ

- ಬೆಂಗಳೂರು ಸ್ಯಾಟಲೈಟ್‌ ಟೌನ್‌ ರಿಂಗ್‌ ರಸ್ತೆ: 281 ಕಿ.ಮೀ. ಉದ್ದ. 2024ರ ಮಾರ್ಚ್‌ಗೆ ಪೂರ್ಣ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕೋಕಾ ಕೋಲಾ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು
ದೇವಸ್ಥಾನದ ಕಾರ್ತಿಕ ದೀಪದ ಪರವಾಗಿ ತೀರ್ಪು ನೀಡಿದ ಜಡ್ಜ್‌, ಸೇಡು ತೀರಿಸಿಕೊಳ್ಳಲು ಮುಂದಾದ ತಮಿಳುನಾಡು ಸರ್ಕಾರ!