Diesel sale limits: ಇನ್ಮುಂದೆ ಪ್ರತಿ ವಾಹನಕ್ಕೆ ಇಷ್ಟೇ ಡೀಸೆಲ್ ಸಿಗೋದು; ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್!

Kannadaprabha News   | Kannada Prabha
Published : Jun 13, 2026, 07:23 AM IST
Central govt limits diesel sales to 200 litres per vehicle In a day

ಸಾರಾಂಶ

ಕೇಂದ್ರ ಸರ್ಕಾರವು ಪ್ರತಿ ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಖರೀದಿ ಮಿತಿಯನ್ನು ವಿಧಿಸಿದೆ. ಅಲ್ಲದೆ, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಪೆಟ್ರೋಲ್ ಬಂಕ್‌ಗಳಲ್ಲಿ ಸಗಟು ಇಂಧನ ಖರೀದಿಸುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಕಾರಣವೇನು ತಿಳಿಯಿರಿ.

ಬಂಕ್‌ಗಳಲ್ಲಿ ಸಗಟು ಖರೀದಿಗೂ ನಿಷೇಧ

ನವದೆಹಲಿ (ಜೂ.13): ಪ್ರತಿ ವಾಹನಕ್ಕೆ ಒಂದು ದಿನಕ್ಕೆ ಗರಿಷ್ಠ 200 ಲೀ ಡೀಸೆಲ್‌ ಖರೀದಿ ಮಿತಿ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಸಂಸ್ಥೆಗಳು ಪೆಟ್ರೋಲ್‌ ಬಂಕ್‌ಗಳಲ್ಲಿ ಸಗಟು ಪ್ರಮಾಣದಲ್ಲಿ ಪೆಟ್ರೋಲ್‌, ಡೀಸೆಲ್‌ ಖರೀದಿ ಮಾಡುವಂತಿಲ್ಲ ಎಂದು ನಿರ್ಬಂಧ ಹೇರಿದೆ.

ಕೃತಕ ಅಭಾವ ಸೃಷ್ಟಿಗೆ ತಡೆ

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಪೂರೈಕೆಯ ಸರಣಿಯಲ್ಲಿ ಉಂಟಾಗಿರುವ ವ್ಯತ್ಯಯವು ಸ್ಥಳೀಯವಾಗಿ ಕೊರತೆ ಸೃಷ್ಟಿಸದಂತೆ ತಡೆಯಲು ಈ ಕ್ರಮ ಕೈಗೊಂಡಿದ್ದಾಗಿ ಸರ್ಕಾರ ಹೇಳಿದೆ.

ಇದನ್ನೂ ಓದಿ: US-Iran war updates: 'ಇಂಧನ ಮಾರುಕಟ್ಟೆಯನ್ನೇ ಉಡೀಸ್ ಮಾಡ್ತೇವೆ' ಟ್ರಂಪ್ ಬೆದರಿಕೆಗೆ ಇರಾನ್ ತಿರುಗೇಟು

ಬಂಕ್‌ಗಳಲ್ಲಿ 95.20 ರು.ಗೆ ಸಿಗುವ ಡೀಸೆಲ್‌ ಅನ್ನು ಸಗಟಿನಲ್ಲಿ ತೆಗೆದುಕೊಂಡರೆ 134.50 ರು. ಪಾವತಿಸಬೇಕಾಗುವುದು. ಹೀಗಿರುವಾಗ ಸಗಟಿಗೆ ಹೆಚ್ಚು ಹಣ ಪಾವತಿಸುವುದನ್ನು ತಪ್ಪಿಸಲು ಕಾರ್ಖಾನೆಗಳು ಬಂಕ್‌ಗಳತ್ತ ಮುಖ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮಿತಿ ನಿಗದಿ ಮಾಡಲಾಗಿದೆ.

ಡೀಸೆಲ್‌ಗೆ ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೇಡಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಮುಂದಿನ 90 ದಿನಗಳವರೆಗೆ ಈ ನೀತಿ ಅನ್ವಯವಾಗುವಂತೆ ಆದೇಶಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಾನೇ ಕಟ್ಟಿದ ಟಿಎಂಸಿ ಕೋಟೆಯಿಂದ ಮಮತಾ ಬ್ಯಾನರ್ಜಿಗೆ ಗೇಟ್‌ಪಾಸ್? 4000 ಇವಿಎಂ ಕಟ್ಟಡಕ್ಕೆ ಬೆಂಕಿ
ಬೆಂಗಳೂರಿನಲ್ಲಿನ ಪ್ರತಿಭಟನೆಗೆ ತಮಿಳಿಗರನ್ನು ಆಹ್ವಾನಿಸಿದ ಕಾಕ್ರೋಚ್ ಜನತಾ ಪಾರ್ಟಿ