
ನವದೆಹಲಿ (ಫೆ.16): ಸಶಸ್ತ್ರ ಪಡೆಗಳ ಒಟ್ಟಾರೆ ಯುದ್ಧ ಸಾಮರ್ಥ್ಯಗಳನ್ನು ವರ್ಧಿಸಲು 84,560 ಕೋಟಿ ರೂಪಾಯಿ ಮೌಲ್ಯದ ಮಿಲಿಟರಿ ಉಪಕರಣಗಳ ಖರೀದಿಗೆ ರಕ್ಷಣಾ ಸಚಿವಾಲಯ ಶುಕ್ರವಾರ ಅನುಮತಿ ನೀಡಿದೆ. ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ (ಡಿಎಸಿ) ಅನುಮತಿ ನೀಡಿದ ಪ್ರಸ್ತಾವನೆಗಳಲ್ಲಿ ಆಧುನಿಕ ಕಾಲದ ಟ್ಯಾಂಕ್ ವಿರೋಧಿ ಮೈನ್ಸ್, ವಾಯು ರಕ್ಷಣಾ ಯುದ್ಧತಂತ್ರದ ನಿಯಂತ್ರಣ ರಾಡಾರ್, ಹೆವಿವೇಯ್ಟ್ ಟಾರ್ಪಿಡೊಗಳು, ಮಧ್ಯಮ ಶ್ರೇಣಿಯ ಕಡಲ ವಿಚಕ್ಷಣ ಮತ್ತು ಬಹು-ಮಿಷನ್ ಕಡಲ ವಿಮಾನಗಳು ಸೇರಿವೆ. ದೇಶದ ಬೃಹತ್ ಸಮುದ್ರ ಪ್ರದೇಶಗಳನ್ನು ಇನ್ನಷ್ಟು ಪಕ್ವವಾಗಿ ಕಣ್ಗಾವಲು ಮಾಡಲು ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ಗೆ ಹೊಸ ವಿಮಾನಗಳು ಮತ್ತು ಉಪಕರಣಗಳನ್ನು ಪಡೆಯಲು ಅನುಮೋದನೆ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಘೋಷಣೆ ಮಾಡಿದೆ. "ಭಾರತೀಯ ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ (ICG) ಕಣ್ಗಾವಲು ಮತ್ತು ಪ್ರತಿಬಂಧಕ ಸಾಮರ್ಥ್ಯಗಳನ್ನು ಬಲಪಡಿಸಲು" ಮಧ್ಯಮ ಶ್ರೇಣಿಯ ಕಡಲ ವಿಚಕ್ಷಣ ಮತ್ತು ಬಹು-ಮಿಷನ್ ಸಮುದ್ರಯಾನ ವಿಮಾನಗಳ ಖರೀದಿಯನ್ನು ಡಿಎಸಿ ಅನುಮೋದನೆ ಮಾಡಿದೆ.
ರಾಯಿಟರ್ಸ್ ವರದಿಯ ಪ್ರಕಾರ, ಸರ್ಕಾರದ ಈ ಹೇಳಿಕೆಯು ಏರ್‌ಬಸ್ ತಯಾರಿಸಿರುವ C-295 ವಿಮಾನದ ಕಡಲ ಕಣ್ಗಾವಲು ಆವೃತ್ತಿಯ ಉಲ್ಲೇಖವಾಗಿದೆ. ಈ ವಿಮಾನಗಳನ್ನು ಸ್ಪೇನ್ ಮತ್ತು ಭಾರತದಲ್ಲಿ ತಯಾರಿಸಲಾಗುತ್ತದೆ.
ಕೇಂದ್ರವು ಅಗಾಧ ದೂರದಲ್ಲಿರುವ ಮತ್ತಯ ಗೋಚರಿಸದೇ ಇರುವ ಗುರಿಗಳನ್ನು ಪತ್ತೆ ಮಾಡುವ ವ್ಯವಸ್ಥೆಯನ್ನು ಖರೀದಿಸಲು ಅನುಮೋದಿಸಿತು, ಜೊತೆಗೆ ನಿಧಾನ, ಸಣ್ಣ ಮತ್ತು ಕಡಿಮೆ ಮಟ್ಟದಲ್ಲಿ ಹಾರಾಡಯವ ವಿಮಾನ, ಡ್ರೋನ್‌ಗಳ ಬೆದರಿಕೆಗಳ ವಿರುದ್ಧ ವಾಯು ರಕ್ಷಣೆಯನ್ನು ಸುಧಾರಿಸಲು ರಾಡಾರ್ ವ್ಯವಸ್ಥೆಯನ್ನು ಸಹ ಅನುಮೋದನೆ ಮಾಡಿದೆ. ಅದರೊಂದಿಗೆ ಜಲಾಂತರ್ಗಾಮಿ ನೌಕೆಗಳನ್ನು ದೂರದಿಂದ ಪತ್ತೆಹಚ್ಚಲು ನೌಕಾ ಹಡಗುಗಳಿಗೆ ಸುಧಾರಿತ ಸೋನಾರ್ ಖರೀದಿ ಮಾಡುವ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ.
Global Technology Summit 2023: ಹೊಸಕಾಲದ ಯುದ್ಧಗಳಲ್ಲಿ ಟೆಕ್ನಾಲಜಿಯೇ ಗೇಮ್ ಚೇಂಜರ್ ಎಂದ ರಾಜನಾಥ್ ಸಿಂಗ್
"ಭಾರತೀಯ ನೌಕಾಪಡೆಯ ಹಡಗುಗಳನ್ನು ಎದುರಾಳಿಗಳಿಂದ ಒಡ್ಡುವ ಬೆದರಿಕೆಗಳಿಗಿಂತ ಒಂದು ಹೆಜ್ಜೆ ಮುಂದಿಡುವಂಥ ನಿಟ್ಟಿನಲ್ಲಿ ಜಲಾಂತರ್ಗಾಮಿ ನೌಕೆಗಳ ದೀರ್ಘ ವ್ಯಾಪ್ತಿಯ ಪತ್ತೆಗಾಗಿ ಕಡಿಮೆ ಆವರ್ತನಗಳಲ್ಲಿ ಮತ್ತು ವಿವಿಧ ಆಳಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಆಕ್ಟಿವ್ ಟೋವ್ಡ್ ಅರೇ ಸೋನಾರ್ ಅನ್ನು ಸಹ ಖರೀದಿ ಮಾಡಲಾಗುತ್ತದೆ.
ದೇಶದ ನಾಗರಿಕರು ಸೈನಿಕರ ಜತೆ ಯುದ್ಧಕ್ಕೆ ಕೈಜೋಡಿಸಿದ್ರೆ ಪಿಒಕೆಗೆ ಭಾರತ ಲಗ್ಗೆ: ರಾಜನಾಥ್ ಸಿಂಗ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ