
ನವದೆಹಲಿ (ಆ.17): ಫೋನ್ ಕರೆಗಳ ಮೂಲಕ ವಂಚನೆಯನ್ನು ತಡೆಯಲು, ಸರ್ಕಾರವು ಸಿಮ್ ಕಾರ್ಡ್ ಡೀಲರ್‌ಗಳಿಗೆ ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ. ಇದಲ್ಲದೇ ಬಲ್ಕ್ (ಸಗಟು) ಸಿಮ್ ಸಂಪರ್ಕ ನೀಡುವುದನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಮಾಹಿತಿ ನೀಡಿದ್ದಾರೆ. ನಿಯಮ ಪಾಲಿಸದ ಡೀಲರ್ ಗಳಿಗೆ 10 ಲಕ್ಷ ದಂಡವನ್ನೂ ವಿಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. 'ಮೇ 2023 ರ ನಂತರ ಸರ್ಕಾರವು 52 ಲಕ್ಷ ವಂಚನೆಯ ಸಿಮ್ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಿದೆ. ಇದಲ್ಲದೆ, 67,000 ಸಿಮ್ ಕಾರ್ಡ್ ಡೀಲರ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಅದೇ ಸಮಯದಲ್ಲಿ, 300 ಸಿಮ್ ಕಾರ್ಡ್ ಡೀಲರ್‌ಗಳ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹಾಗೇನಾದರೂ ನಿಮ್ಮದು ಬ್ಯುಸಿನೆಸ್ ಸಂಪರ್ಕವಾಗಿದ್ದಲ್ಲಿ ಅದಕ್ಕೂ ಕೂಡ ವೆರಿಫಿಕೇಶನ್ ಕಡ್ಡಾಯವಾಗಿರುತ್ತದೆ. ಒಂದು ಕಂಪನಿ ಒಂದಷ್ಟು ಸಿಮ್‌ಗಳನ್ನು ಖರೀದಿಸಿ ತನದನ ಉದ್ಯೋಗಿಗಳಿಗೆ ಹಂಚಿದ್ದಲ್ಲಿ, ಪ್ರತಿಯೊಬ್ಬ ವ್ಯಕ್ತಿಗೆ ಪ್ರತ್ಯೇಕವಾಗಿ ಕೆವೈಸಿ ಮಾಡುವುದು ಅಗತ್ಯವಾಗಿರುತ್ತದೆ.
ಉದಾಹರಣೆಗೆ, ನೀವು ವ್ಯವಹಾರ ಉದ್ದೇಶಕ್ಕಾಗಿ 1000 ಸಿಮ್ ಕಾರ್ಡ್‌ಗಳನ್ನು ತೆಗೆದುಕೊಂಡಿದ್ದರೆ, ಅದನ್ನು ನೀವು ನಿಮ್ಮ ಉದ್ಯೋಗಿಗಳಿಗೆ ನೀಡಬೇಕಾದರೆ, ಪ್ರತಿ ಉದ್ಯೋಗಿಗೆ ಕೆವೈಸಿ ಮಾಡಿದ ನಂತರವೇ ನೀವು ಸಿಮ್ ಅನ್ನು ನೀಡಬೇಕಾಗುತ್ತದೆ. ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್ ಡೀಲರ್ ಗಳಿದ್ದಾರೆ ಎಂದು ಸಚಿವರು ಹೇಳಿದರು. ಹೊಸ ನಿಯಮದ ಪ್ರಕಾರ, ಪ್ರತಿಯೊಬ್ಬರಿಗೂ ಪೊಲೀಸ್ ಪರಿಶೀಲನೆಗೆ ಸಾಕಷ್ಟು ಸಮಯ ನೀಡಲಾಗುತ್ತದೆ ಎಂದಿದ್ದಾರೆ.
ಕಳೆದುಹೋದ ದಶಕದಿಂದ 'ಟೆಕೇಡ್'ವರೆಗೆ, ಭಾರತ ಈಗ ವಿಶ್ವದ ಅತ್ಯಂತ ವೇಗದ ಟೆಲಿಕಾಮ್ ನೆಟ್‌ವರ್ಕ್ !
ಸಿಮ್ ಬಾಕ್ಸ್ ಎಂಬ ಸಾಧನದ ಮೂಲಕ ಅನೇಕ ಸ್ವಯಂಚಾಲಿತ ಕರೆಗಳನ್ನು ಒಂದೇ ಬಾರಿಗೆ ಮಾಡಬಹುದು. ವಂಚಕರು ಒಂದೇ ಬಾರಿಗೆ ಹಲವಾರು ಫೋನ್ ಕರೆಗಳನ್ನು ಮಾಡಲು ಈ ಯಂತ್ರವನ್ನು ಬಳಸುತ್ತಾರೆ, ನಂತರ ಸಿಮ್ ಅನ್ನು ನಿಷ್ಕ್ರಿಯಗೊಳಿಸುತ್ತಾರೆ. ಬಳಿಕ ಹೊಸ ಬ್ಯಾಚ್‌ಅನ್ನು ಅವರಿಗೆ ನೀಡುತ್ತಾರೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.ಈ ವರ್ಷದ ಮೇ ತಿಂಗಳಿನಲ್ಲಿ ಪಂಜಾಬ್ ಪೊಲೀಸರು ನಕಲಿ ಗುರುತಿನ ಚೀಟಿಯಲ್ಲಿ ತೆಗೆದ 1.8 ಲಕ್ಷ ಸಿಮ್‌ಗಳನ್ನು ನಿಷ್ಕ್ರಿಯಗೊಳಿಸಿದ್ದರು. ಅದೇ ಸಮಯದಲ್ಲಿ, ತಪ್ಪಾಗಿ ಸಿಮ್ ಕಾರ್ಡ್‌ಗಳನ್ನು ವಿತರಿಸಿದ 17 ಡೀಲರ್‌ಗಳನ್ನು ಸಹ ಬಂಧಿಸಲಾಗಿತ್ತು.
ಪಾಕ್ ಗಡಿಯಲ್ಲಿ ಭಾರತದ ವಿರುದ್ಧ ಚೀನಾ ಮಸಲತ್ತು: ಟೆಲಿಕಾಂ ಟವರ್, ಭೂಗತ ಬಂಕರ್ ನಿರ್ಮಾಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ