ಚಾರ್ಮಾಡಿ ಘಾಟ್ ರಸ್ತೆಯಲ್ಲಿನ 10.8 ಕಿಲೋಮೀಟರ್ 2 ಲೇನ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 343.74 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ.
ನವದೆಹಲಿ (ಜ.19): ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿರುವ ಮಂಗಳೂರು-ಮೂಡಿಗೆರೆ- ತುಮಕೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿನ 10.8 ಕಿಲೋಮೀಟರ್ 2 ಲೇನ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 343.74 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ.
ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿ NH-73ರ ಮಂಗಳೂರು-ಮುದಿಗೆರೆ-ತುಮಕೂರು ವಿಭಾಗದ ವಿಸ್ತರಣೆಗೆ 343.74 ಕೋಟಿ ರೂ. ಮಂಜೂರು ಮಾಡಲಾಗಿದೆ. ಅದನ್ನು ಘಾಟ್ ರಸ್ತೆಯನ್ನು ಸುಸಜ್ಜಿತ 2-ಲೇನ್ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಈಗ 10.8 ಕಿಮೀ ವ್ಯಾಪಿಸಿರುವ ಈ ಯೋಜನೆಯು ಇಂಜಿನಿಯರಿಂಗ್ ಖರೀದಿ ಮತ್ತು ನಿರ್ಮಾಣ (ಇಪಿಸಿ) ಮೋಡ್ ಅಡಿಯಲ್ಲಿ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ.
ಕರ್ನಾಟಕ- ಅಯೋಧ್ಯೆ ಪಾದಯಾತ್ರೆ: ರಾಮ ಮಂದಿರಕ್ಕೆ 1,800 ಕಿ.ಮೀ. ನಡೆದುಕೊಂಡು ಹೋದ ಗದಗಿನ ಗಾಂಧಿ
ಸವಾಲಿನ ಗುಡ್ಡಗಾಡು ಮತ್ತು ಪರ್ವತ ಭೂ ದೃಶ್ಯಗಳನ್ನು ಹೊಂದಿರುವ ಚಾರ್ಮಾಡಿ ಘಾಟ್‌ನಲ್ಲಿ ಸಾರಿಗೆ ಸಂಚಾರವನ್ನು ಹಾಗೂ ಈ ಪ್ರದೇಶದ ಸಂಪರ್ಕವನ್ನು ಹೆಚ್ಚಳ ಮಾಡಲು ಈ ಅನುದಾನ ಸಮಪರ್ಕಕವಾಗಿ ಬಳಕೆ ಆಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.