ಅಶ್ಲೀಲತೆ, ಹಿಂಸೆ ಇಲ್ಲದ ಕಂಟೆಟ್ ಪ್ರಸಾರ ಮಾಡಿ: ಕೇಂದ್ರದ ಸೂಚನೆಗೆ ಒಟಿಟಿ ವಿರೋಧ

By Kannadaprabha NewsFirst Published Jul 15, 2023, 8:55 AM IST
Highlights

ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಮುನ್ನ ವಿಷಯಗಳು ಅಶ್ಲೀಲತೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಅಂಶಗಳಿಂದ ಮುಕ್ತವಾಗಿರಬೇಕು. ಸ್ವತಂತ್ರವಾಗಿ ಪರಿಶೀಲಿಸಿ ನಂತರ ಚಿತ್ರಗಳನ್ನು ಬಿಡುಗಡೆ ಮಾಡಬೇಕು ಎಂದು ಒಟಿಟಿ ಪ್ಲಾಟ್‌ಫಾಮ್‌ರ್‍ಗಳಾದ ನೆಟ್‌ಫ್ಲಿಕ್ಸ್‌, ಅಮೆಜಾನ್‌, ಡಿಸ್ನಿ ಮತ್ತು ಇತರ ಸ್ಕ್ರೀಮಿಂಗ್‌ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ನವದೆಹಲಿ: ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಮುನ್ನ ವಿಷಯಗಳು ಅಶ್ಲೀಲತೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಅಂಶಗಳಿಂದ ಮುಕ್ತವಾಗಿರಬೇಕು. ಸ್ವತಂತ್ರವಾಗಿ ಪರಿಶೀಲಿಸಿ ನಂತರ ಚಿತ್ರಗಳನ್ನು ಬಿಡುಗಡೆ ಮಾಡಬೇಕು ಎಂದು ಒಟಿಟಿ ಪ್ಲಾಟ್‌ಫಾಮ್‌ರ್‍ಗಳಾದ ನೆಟ್‌ಫ್ಲಿಕ್ಸ್‌, ಅಮೆಜಾನ್‌, ಡಿಸ್ನಿ ಮತ್ತು ಇತರ ಸ್ಕ್ರೀಮಿಂಗ್‌ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಜೂ.20ರಂದು ವಾರ್ತ ಮತ್ತು ಪ್ರಸಾರ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.  ಆದರೆ ಕೇಂದ್ರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಸಂಸ್ಥೆಗಳು ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.  ಒಟಿಟಿಗಳಲ್ಲಿ ತೀರಾ ಅಸಭ್ಯವಾದ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತರಬಲ್ಲ ಸೂಕ್ತವಲ್ಲದ ಅಂಶಗಳನ್ನು ಪ್ರಸಾರ ಮಾಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಲ್ಲೇ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ಸಚಿವಾಲಯದ ಸಭೆಯಲ್ಲಿ ಅಮೆಜಾನ್‌, ಆ್ಯಪಲ್‌ ಟಿವಿ, ಡಿಸ್ನಿ, ನೆಟ್‌ಫ್ಲಿಕ್ಸ್‌, ರಿಲಯನ್ಸ್‌ ಬ್ರಾಡ್‌ಕಾಸ್ಟ್‌ ಯೂನಿಟ್‌, ವಯಾಕಾಮ್‌18 ಭಾಗಿಯಾಗಿದ್ದವು.

ನಗ್ನತೆಗೆ ಪ್ರಚೋದಿಸುತ್ತೆ OTT ಫ್ಲ್ಯಾಟ್​ಫಾರ್ಮ್

ಒಟಿಟಿ ಫ್ಲ್ಯಾಟ್​ಫಾರ್ಮ್‌ಗಳ ನಗ್ನತೆ ಹಾಗೂ ಅಶ್ಲೀಲತೆ ಬಗ್ಗೆ ಕೆಲ ದಿನಗಳ ಹಿಂದೆ ನಟಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದಿತ್ಯ ಪಾಂಚೋಲಿ ಅವರ ಪತ್ನಿ, ನಟಿ ಜರೀನಾ ವಾಹಬ್ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ನಗ್ನತೆ ಮತ್ತು ಅಶ್ಲೀಲತೆಯ ಕೀಳುಮಟ್ಟದ ಪ್ರಭಾವದ ಕುರಿತು ಮಾತನಾಡಿದ್ದರು.  ನ್ಯೂಸ್ ಪೋರ್ಟಲ್‌ನೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಅವರು ಈ ಕೆಟ್ಟ ಸಂಪ್ರದಾಯದ ಕುರಿತು ಮಾತನಾಡಿದ್ದಾರೆ.  ವೆಬ್ ಸರಣಿ 'ಶೋಸ್ಟಾಪರ್'ನಲ್ಲಿ (Show Stopper) ಪಾತ್ರವೊಂದಕ್ಕೆ ಇವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅದನ್ನು ರಿಜಿಕ್ಟ್​ ಮಾಡಿದ ನಟಿ ಓಟಿಟಿ ಫ್ಲ್ಯಾಟ್​ಫಾರ್ಮ್​ ಇಂದು ಯಾವ ಮಟ್ಟಕ್ಕೆ ಇಳಿದಿದೆ ಎಂಬ ಬಗ್ಗೆ ತಿಳಿಸಿದ್ದಾರೆ.  ಆದ್ದರಿಂದ ತಾವು ವೆಬ್‌ಸಿರೀಸ್​ನಲ್ಲಿ ನಟಿಸುವುದಕ್ಕೆ ಹಿಂದೇಟು ಹಾಕಿರುವುದಾಗಿ ಹೇಳಿದರು.

ಕಿಚನ್‌ನಲ್ಲಿ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿದ ಗೃಹಿಣಿ, ಸೆರಗು ಮುಚ್ಕೊಳಮ್ಮಾ ಎಂದ ನೆಟ್ಟಿಗರು
 
OTT ಶೋಗಳಲ್ಲಿ ಸಾಕಷ್ಟು ಇಂಟಿಮೇಟ್ (Intimate) ದೃಶ್ಯಗಳಿರುತ್ತವೆ. ಎಲ್ಲವೂ  'ಅಗತ್ಯವಿದೆ' ಎಂದು ನಾನು ಭಾವಿಸುವುದಿಲ್ಲ. ಅನಗತ್ಯವಾಗಿ ಇವುಗಳನ್ನು ತುರುಕಿಸಲಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ ಇಂಥ ದೃಶ್ಯಗಳನ್ನುಮಾಡಲು ನಟ-ನಟಿಯರಿಗೇ ಮುಜುಗುರ ಇಲ್ಲದಿದ್ದರೆ ಏನೂ ಮಾಡಲು ಆಗುವುದಿಲ್ಲ. ಹೊಸ ಪೀಳಿಗೆ ಇದೇ ಬೆಸ್ಟ್​ ಎನಿಸಿಕೊಂಡರೆ ಅದು ಅಂತಿಮವಾಗಿ ಅವರಿಗೆ ಬಿಟ್ಟ ವಿಷಯ ಎಂದಿರುವ ನಟಿ ಜರೀನಾ, ಈ ಬಗ್ಗೆ ಹೆಚ್ಚಿನ ಕಾಂಟ್ರವರ್ಸಿ ಮಾಡಲು ಇಷ್ಟಪಡಲಿಲ್ಲ. ಇಂಥ ದೃಶ್ಯಗಳನ್ನು ನೋಡಬೇಕೋ, ಬೇಡವೋ ಎಂದು ನಿರ್ಧರಿಸುವವರು ಅಂತಿಮವಾಗಿ ಜನರೇ ತಾನೆ. ಈ ಬಗ್ಗೆ ಹೆಚ್ಚಿಗೆ ಹೇಳಿ ಪ್ರಯೋಜನವಿಲ್ಲ ಎಂದಿದ್ದರು.

ಪ್ರಸ್ತುತ ದೇಶದಲ್ಲಿ ಮುದ್ರಣ ಮಾಧ್ಯಮಗಳನ್ನು ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ, ನ್ಯೂಸ್‌ ಚಾನೆಲ್‌ಗಳನ್ನು ನ್ಯೂಸ್‌ ಬ್ರಾಡ್‌ಕಾಸ್ಟರ್‌ ಅಸೋಸಿಯೇಷನ್‌ ನಿಯಂತ್ರಿಸುತ್ತಿವೆ. ಅಡ್ವರ್‌ಟೈಸಿಂಗ್‌ ಸ್ಟ್ಯಾಂಡರ್ಡ್‌ ಕೌನ್ಸಿಲ್‌ ಜಾಹೀರಾತುಗಳಿಗೆ ಮೂಗುದಾರ ಹಾಕುತ್ತದೆ. ಸಿಬಿಎಫ್‌ಸಿ (CBFC) ಚಲನಚಿತ್ರಗಳ ಸೆನ್ಸಾರ್‌ ಮಾಡುತ್ತದೆ. ಆದರೆ, ಡಿಜಿಟಲ್‌ ಕಂಟೆಂಟ್‌ ನಿಯಂತ್ರಕ್ಕೆ ಯಾವುದೇ ಪ್ರಾಧಿಕಾರ ಅಥವಾ ಮಂಡಳಿ ಇರಲಿಲ್ಲ. ಯಾರ ಅನುಮತಿಯೂ ಇಲ್ಲದೆ ನ್ಯೂಸ್‌ ವೆಬ್‌ಸೈಟ್‌ ನಡೆಸಬಹುದಾಗಿತ್ತು. ಹೀಗಾಗಿ ಪ್ರತಿಕೂಲ ಪರಿಣಾಮ ಬೀರುವ ಕಂಟೆಂಟ್‌ ಪ್ರದರ್ಶಿಸುವ ಒಟಿಟಿ ವೇದಿಕೆಗಳು, ನ್ಯೂಸ್‌ ಪೋರ್ಟಲ್‌ಗಳು, ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧನೆ ಒಳಪಡಿಸುವ ಉದ್ದೇಶದಿಂದ ಕೆಲ ತಿಂಗಳ ಹಿಂದೆ  ಸುಪ್ರೀಂಕೋರ್ಟ್‌ ಇವುಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ಸೇರಿಸಿ ಮಹತ್ವದ ಆದೇಶ ಹೊರಡಿಸಿತ್ತು. 

ದೂರು ನೀಡಿದ BJP ಸದಸ್ಯೆ ವಿರುದ್ಧ ಸಿಡಿದೆದ್ದ ಉರ್ಫಿ; ಅಶ್ಲೀಲತೆ ಪಾಠ ಹೇಳಿದ ನಟಿ

click me!