ಮೋದಿ ಸರ್ಕಾರದ ಮಹತ್ವದ ಘೋಷಣೆ| ಕೇಂದ್ರದ ನಿರ್ಧಾರದಿಂದ 20 ಲಕ್ಷ ಮಂದಿಗೆ ಲಾಭ| ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್‌ನಲ್ಲಿ ಮಾಹಿತಿ
ನವದೆಹಲಿ[ಅ.17]: ಕೇಂದ್ರ ಸರ್ಕಾರ ರಾಷ್ಟ್ರ ರಾಜಧಾನಿ ದೆಹಲಿಯ ಹಳ್ಳಿಗಾಡು ಪ್ರದೇಶದಲ್ಲಿ ನೆಲೆಸುತ್ತಿರುವ ಲಕ್ಷಾಂತರ ಮಂದಿಗೆ ಸಿಹಿ ಸುದ್ದಿ ನೀಡಿದೆ. ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ.
ಟ್ವಿಟ್ ಮಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ 'ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ದೆಹಲಿ ಪರ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುತ್ತಾ, 88 ಹಳ್ಳಿಗಳನ್ನು ನಗರೀಕೃತ ಗ್ರಾಮವನ್ನಾಗಿಸುವ ನಿರ್ಧಾರ ತೆಗೆದುಕೊಂಡಿದೆ' ಎಂದಿದ್ದಾರೆ.
. सरकार का दिल्ली के लिए एक ऐतिहासिक फैसला | 88 गाँवों को शहरीकृत गाँव घोषित किया | 20 लाख लोगों को फ़ायदा मिला | अब सारी सुविद्याएँ मिलेगी | प्लान पास होंगे, कर्जा मिलेगा, सड़क बनेगी | मोदीजी को धन्यवाद् |
— Prakash Javadekar (@PrakashJavdekar)undefined
ಅಲ್ಲದೇ 'ಕೇಂದ್ರದ ಈ ನಿರ್ಧಾರದಿಂದ 20 ಲಕ್ಷ ಜನರು ನೇರ ಫಲಾನುಭವಿಗಳಾಗುತ್ತಾರೆ. ಈ ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಎಲ್ಲಾ ಸೌಕರ್ಯಗಳು ಸಿಗಲಿವೆ. ಎಲ್ಲಾ ಯೋಜನೆಗಳು ಜಾರಿಯಾಗಲಿವೆ. ಇಲ್ಲಿನ ಜನರಿಗೆ ಸುಲಭವಾಘಿ ಸಾಲ ಸಿಗಲಿದೆ ಹಾಗೂ ಒಳ್ಳೆಯ ಗುಣಮಟ್ಟದ ರಸ್ತೆಗಳೂ ನಿರ್ಮಾಣವಾಗಲಿದೆ' ಎಂದಿದ್ದಾರೆ.
ಅನಧಿಕೃತ ಕಾಲೋನಿಗಳ 40 ಲಕ್ಷ ಜನರಿಗೂ ಲಾಭ ನೀಡುವ ಯೋಜನೆ
ಕಳೆದ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಕ್ಯಾಬಿನೆಟ್ ಸಭೆಯೊಂದರಲ್ಲಿ ದೆಹಲಿಯ ಅನಧಿಕೃತ ಕಾಲೋನಿಯಲ್ಲಿ ವಾಸಿಸುವ 40 ಲಕ್ಷ ಜನರಿಗೆ ಮನೆಯ ಮಾಲೀಕತ್ವ ಹಕ್ಕು ನೀಡುವ ನಿರ್ಧಾರ ತೆಗೆದುಕೊಂಡಿತ್ತು. ಕೇಂದ್ರ ಸಚಿವ ಹರ್ದೀಪ್ ಸಿಂಗ್, ಕ್ಯಾಬಿನೆಟ್ ಸಭೆ ಬಳಿಕ ಪತ್ರಿಕಾ ಗೋಷ್ಠಿಯೊಂದನ್ನು ನಡೆಸಿ 'ದೆಹಲಿಯ ಅನಧಿಕೃತ ಕಾಲೋನಿಗಳನ್ನು ಅಧಿಕೃತಗೊಳಿಸಲು ನಿರ್ಧರಿಸಲಾಗಿದೆ. ದೆಹಲಿಯಲ್ಲಿ ಒಟ್ಟು 1,797 ಅಕ್ರಮ ಕಾಲೋನಿಗಳಿವೆ. ಸರ್ಕಾರದ ಈ ನಿರ್ಧಾರದಿಂದ ಕಾಲೋನಿಯಲ್ಲಿ ವಾಸಿಸುವ 40 ಲಕ್ಷ ಮಂದಿಗೆ ಲಾಭವಾಗಲಿದೆ' ಎಂದಿದ್ದರು.