ಕೇಂದ್ರದ ಜನಗಣತಿಗೆ ಚಾಲನೆ : ನ.10 -30ರ ವರೆಗೆ ಪೂರ್ವದ ಸಿದ್ಧತೆ

Kannadaprabha News   | Kannada Prabha
Published : Oct 17, 2025, 06:05 AM IST
India Census

ಸಾರಾಂಶ

: 2027ರ ಮೊದಲ ಹಂತದ ಜನಗಣತಿಗೆ ಪೂರ್ವಭಾವಿಯಾಗಿ ಇದೇ ವರ್ಷದ ನ.10ರಿಂದ 30ರ ವರೆಗೆ ಗಣತಿಪೂರ್ವ ಸಿದ್ಧತೆಗಳ ಭಾಗವಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಯ್ದ ಸ್ಥಳಗಳಲ್ಲಿರುವ ಮನೆಗಳ ಪಟ್ಟಿ ಮಾಡಿ, ಗಣತಿ ನಡೆಸಲಾಗುವುದು.

ನವದೆಹಲಿ: 2027ರ ಮೊದಲ ಹಂತದ ಜನಗಣತಿಗೆ ಪೂರ್ವಭಾವಿಯಾಗಿ ಇದೇ ವರ್ಷದ ನ.10ರಿಂದ 30ರ ವರೆಗೆ ಗಣತಿಪೂರ್ವ ಸಿದ್ಧತೆಗಳ ಭಾಗವಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಯ್ದ ಸ್ಥಳಗಳಲ್ಲಿರುವ ಮನೆಗಳ ಪಟ್ಟಿ ಮಾಡಿ, ಗಣತಿ ನಡೆಸಲಾಗುವುದು. ಜತೆಗೆ, ನ.1ರಿಂದ 7ರ ವರೆಗೆ ಸ್ವಯಂ ಗಣತಿಗೂ ಅನುವು ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2026ರ ಏ.1 ಮತ್ತು 2027ರ ಫೆ.28ರ ನಡುವೆ ನಡೆಯಲಿರುವ 2 ಹಂತದ ಗಣತಿಗೆ ಮಾಡಿಕೊಂಡ ಸಿದ್ಧತೆ ಎಷ್ಟುಪರಿಣಾಮಕಾರಿಯಾಗಿದೆ ಎಂಬುದನ್ನು ಅಳೆಯಲು ಈ ಪೂರ್ವಭಾವಿ ಗಣತಿ ನಡೆಸುತ್ತಿರುವುದಾಗಿ, ಜನಗಣತಿ ಆಯುಕ್ತ ಮೃತ್ಯುಂಜಯ್‌ ಕುಮಾರ್‌ ನಾರಾಯಣ್‌ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಜಾತಿ ಗಣತಿಯನ್ನೂ ಒಳಗೊಂಡಿರುವ ಇದು, ದೇಶದಲ್ಲಿ ನಡೆಯುತ್ತಿರುವ ಮೊದಲ ಡಿಜಿಟಲ್‌ ಗಣತಿಯಾಗಲಿದೆ.

ಏನೇನಿರುತ್ತದೆ?:

ಪರೀಕ್ಷಾ ಹಂತದ ಗಣತಿಯಲ್ಲಿ ಪ್ರಶ್ನೆಗಳು, ದತ್ತಾಂಶ ಸಂಗ್ರಹಣೆ, ತರಬೇತಿ, ಸರಕು, ಮೊಬೈಲ್ ಅಪ್ಲಿಕೇಶನ್ ಮತ್ತು ಸಾಫ್ಟ್‌ವೇರ್ ಪರಿಶೀಲನೆ ನಡೆಸಿ, ಯಾವುದಾದರೂ ಸಮಸ್ಯೆ ಕಂಡುಬಂದಲ್ಲಿ ಅವುಗಳನ್ನು ಪರಿಹರಿಸಲಾಗುವುದು.

2 ಹಂತದ ಗಣತಿ:

ಜನಗಣತಿಯನ್ನು 2 ಹಂತದಲ್ಲಿ ನಡೆಸಲಾಗುವುದು. ಮೊದಲ ಹಂತದಲ್ಲಿ ಪ್ರತಿ ಮನೆಯ ಪರಿಸ್ಥಿತಿ, ಆಸ್ತಿ, ಸೌಕರ್ಯಗಳನ್ನು ಪರಿಗಣಿಸಲಾಗುವುದು. 2ನೇ ಹಂತದಲ್ಲಿ ಜನಸಂಖ್ಯೆ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ, ಸಂಸ್ಕೃತಿ ಸೇರಿದಂತೆ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲಾಗುವುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..