ಸೇನೆಯಿಂದ ಸ್ವದೇಶಿ ನಿರ್ಮಿತ ಪ್ಯಾರಾಚೂಟ್‌ ಪರೀಕ್ಷೆ ಯಶ

Kannadaprabha News   | Kannada Prabha
Published : Oct 17, 2025, 04:56 AM IST
DRDO achieves major milestone with indigenous military combat parachute system

ಸಾರಾಂಶ

ದೇಶಿ ನಿರ್ಮಿತ ಯುದ್ಧ ಪ್ಯಾರಾಚೂಟ್‌ಅನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ವಾಯುಪಡೆಯ ವಿಂಗ್ ಕಮಾಂಡರ್ ಈ ಪ್ಯಾರಾಚೂಟ್‌ನೊಂದಿಗೆ 32,000 ಅಡಿ ಎತ್ತರದಿಂದ ಹಾರುವ ಮೂಲಕ ಅದರ ಕಾರ್ಯಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ.

ನವದೆಹಲಿ: ಸ್ವದೇಶಿ ನಿರ್ಮಿತ ಯುದ್ಧ ಪ್ಯಾರಾಚೂಟ್‌ಅನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ವಾಯುಪಡೆಯ ವಿಂಗ್ ಕಮಾಂಡರ್ ವಿಶಾಲ್ ಲಕೇಶ್, ಮಾಸ್ಟರ್ ವಾರಂಟ್ ಅಧಿಕಾರಿ ಆರ್.ಜೆ. ಸಿಂಗ್, ಮತ್ತು ಮಾಸ್ಟರ್ ವಾರಂಟ್ ಅಧಿಕಾರಿ ವಿವೇಕ್ ತಿವಾರಿ ಅವರು ಈ ಪ್ಯಾರಾಚೂಟ್‌ನೊಂದಿಗೆ 32,000 ಅಡಿ ಎತ್ತರದಿಂದ ಹಾರುವ ಮೂಲಕ ಅದರ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದ್ದಾರೆ.

ಈ ಪ್ಯಾರಾಚೂಟ್‌ ಅನ್ನು ಬೆಂಗಳೂರು ಮತ್ತು ಆಗ್ರಾದಲ್ಲಿರುವ ಪ್ರಯೋಗಾಲಯಗಳಲ್ಲಿ ನಿರ್ಮಿಸಲಾಗಿರುವುದು ವಿಶೇಷ. ಜತೆಗೆ, ಅಷ್ಟು ಎತ್ತರದಿಂದ ಸ್ವದೇಶಿ ಪ್ಯಾರಾಚೂಟ್‌ನ ಪರೀಕ್ಷೆ ನಡೆಸಲಾಗಿರುವುದು ಇದೇ ಮೊದಲು.

ವಿಶೇಷತೆ, ಉಪಯೋಗವೇನು?:

ಈ ಸೇನಾ ಪ್ಯಾರಾಚೂಟ್‌ಗಳು ಶಸ್ತ್ರಾಸ್ತ್ರ, ಮದ್ದುಗುಂಡು, ಬದುಕುಳಿಯುವ ಕಿಟ್‌ ಸೇರಿ 150 ಕೆ.ಜಿ. ತೂಕ ಹೊರಬಲ್ಲದು. ಇದನ್ನು ಬಳಸುವವರು ಸುರಕ್ಷಿತವಾಗಿ ಇಳಿಯುವುದನ್ನು ಖಚಿತಪಡಿಸಲು ಅದು ಕೆಲಗೆ ಬರುವ ವೇಗವೂ ಕಡಿಮೆಯಿರಲಿದೆ. ಜತೆಗೆ ನಾವಿಕ್‌ ಜಿಪಿಎಸ್‌ ವ್ಯವಸ್ಥೆಯೂ ಇದರಲ್ಲಿರುವುದರಿಂದ ನಿಗದಿಗ ಸ್ಥಳದಲ್ಲಿ ನಿಖರವಾಗಿ ಲ್ಯಾಂಡ್‌ ಆಗಲು ಸಾಧ್ಯವಾಗುತ್ತದೆ. ಇದು ವಾಯು ದಾಳಿ ಅಥವಾ ಹಿಮಾಲಯದಂತಹ ಭೂಪ್ರದೇಶಗಳಲ್ಲಿ ತ್ವರಿತ ಪ್ರತಿಕ್ರಿಯೆಗೆ ನಿರ್ಣಾಯಕ. ಈ ಪ್ಯಾರಾಚೂಟ್‌ಗಳನ್ನು ಎಲ್ಲಾ ಹವಾಮಾನದಲ್ಲೂ ಬಳಸಬಹುದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..