
ನವದೆಹಲಿ (ಮಾ.11): ಶಿಕಾಗೋದಿಂದ ದೆಹಲಿಗೆ ಬರುತ್ತಿದ್ದ ಏರಿಂಡಿಯಾ ವಿಮಾನದ ಶೌಚಾಲಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಬಟ್ಟೆ ತುಂಬಿ ಹೋಗಿದ್ದರ ಪರಿಣಾಮ ವಿಮಾನ ಮರಳಿ ಶಿಕಾಗೋದಲ್ಲೇ ಲ್ಯಾಂಡ್ ಅದ ಘಟನೆ ಮಾ.5ರಂದು ನಡೆದಿದೆ. ಸುಮಾರು 300 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ದೆಹಲಿಗೆ ತೆರಳಲು 5 ಗಂಟೆ ಆಗಸಕ್ಕೆ ಹಾರಿತ್ತು. ಆದರೆ ನಂತರ ಶಿಕಾಗೋಗೇ ಹಿಂದಿರುಗಿದೆ. ತಾಂತ್ರಿಕ ಸಮಸ್ಯೆಯಿಂದ ವಿಮಾನ ಹಿಂದಿರುಗಿದೆ ಎಂದು ಏರ್ ಇಂಡಿಯಾ ಹೇಳಿದೆ. ಆದರೆ ಪ್ರಯಾಣಿಕರೊಬ್ಬರು, ‘ವಿಮಾನದಲ್ಲಿರುವ 12 ಶೌಚಾಲಯಗಳ ಪೈಕಿ 8 ಶೌಚಾಲಯಗಳು ಬ್ಲಾಕ್ ಅಗಿದ್ದು ಹೀಗಾಗಿ ವಿಮಾನ ಹಿಂದಿರುಗಿತ್ತು’ ಎಂದಿದ್ದಾರೆ. ಪೈಪ್‌ಗಳಲ್ಲಿ ಪ್ಲಾಸ್ಟಿಕ್, ಬಟ್ಟೆ ತುಂಬಿಕೊಂಡಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ.
aಅಂದಾಜು 10 ಗಂಟೆಗಳ ಕಾಲ ಆಗಸದಲ್ಲಿದ್ದ ವಿಮಾನ ಬಳಿಕಸ ಶಿಕಾಗೋಗೆ ವಾಪಾಸಾಗಿದೆ. ಟಾಯ್ಲೆಟ್ ಬ್ಲಾಕ್ ಆದ ಕಾರಣ ವಿಮಾನ ಶಿಕಾಗೋಗೆ ವಾಪಾಸ್ ತೆರಳಿದೆ ಎನ್ನುವ ಸುದ್ದಿ ಬೆನ್ನಲ್ಲಿಯೇ ಏರ್‌ಇಂಡಿಯಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಏರ್ ಇಂಡಿಯಾ ಇದನ್ನು ತಾಂತ್ರಿಕ ಸಮಸ್ಯೆ ಎಂದು ಹೇಳಿದ್ದು, ಎಲ್ಲಾ ಪ್ರಯಾಣಿಕರಿಗೆ ಸಂಪೂರ್ಣವಾಗಿ ಹಣ ರೀಫಂಡ್ ಮಾಡಲಾಗುವುದು ಎಂದು ತಿಳಿಸಿದೆ.
ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ವಿಮಾನ ವಾಪಾಸ್ ಶಿಕಾಗೋಗೆ ಮರಳಲು ಟಾಯ್ಲೆಟ್ ಸಮಸ್ಯೆಯೇ ಕಾರಣ ಎಂದು ತಿಳಿಸಿದ್ದಾರೆ. ವಿಮಾನದ 12 ಟಾಯ್ಲೆಟ್‌ಗಳ ಪೈಕಿ 8 ಟಾಯ್ಲೆಟ್‌ಗಳು ಬ್ಲಾಕ್ ಆಗಿದ್ದವು. ಈ ಬಗ್ಗೆ ವಿಮಾನದ ಅಧಿಕಾರಿಗಳಿಗೆ ಮಾಹಿತಿ ಇತ್ತು. ಹಾಗಿದ್ದರೂ ಅವರು ವಿಮಾನವನ್ನು ಪ್ರಯಾಣಕ್ಕೆ ಟೇಕ್‌ಆಫ್ ಎಂದಿದ್ದಾರೆ.
ಏರ್ ಇಂಡಿಯಾ ಭರ್ಜರಿ ಆಫರ್, ಕೇವಲ 1535 ರೂಗೆ ವಿಮಾನ ಪ್ರಯಾಣ! ತಕ್ಷಣ ಬುಕ್ ಮಾಡಿ
'ವಿಮಾನದ ಸಿಬ್ಬಂದಿಗೆ ಇದರ ಮಾಹಿತಿ ಇತ್ತು. ಹಾಗಿದ್ದರೂ ಅವರು ಟೇಕ್ ಆಫ್ ಮಾಡಿದರು. ಅದಲ್ಲದೆ, ವಿಮಾನದ ಕ್ಯಾಪ್ಟನ್ ಕೂಡ ಫ್ಲೈಟ್ ಶಿಕಾಗೋಗೆ ಮರಳುತ್ತಿದೆ ಅನ್ನೋದು ತಿಳಿಸಿರಲಿಲ್ಲ. ಸ್ಕ್ರೀನ್ ಫ್ಲೈಟ್ ಮ್ಯಾಪ್‌ನಲ್ಲಿ ಈ ವಿಷಯ ಗಮನಿಸಿದ ಕೆಲ ಪ್ರಯಾಣಿಕರು ಈ ವಿಚಾರ ತಿಳಿಸಿದ್ದರೆ ಎಂದು ರೆಡ್ಡಿಟ್‌ನಲ್ಲಿ ಪ್ರಯಾಣಿಕರೊಬ್ಬರು ಬರೆದಿದ್ದಾರೆ. ಕೆಲವು ಪ್ರಯಾಣಿಕರು ಗದ್ದಲ ಸೃಷ್ಟಿಸಿದ ನಂತರವೇ ಕ್ಯಾಪ್ಟನ್ ಹಿಂದಿರುಗುವಿಕೆಯ ಬಗ್ಗೆ ಘೋಷಣೆ ಮಾಡಿದರು ಎಂದು ಅವರು ಹೇಳಿದ್ದಾರೆ.
ಏರ್ ಇಂಡಿಯಾ ಪ್ರಯಾಣಿಕ ಇಡೀ ಘಟನೆಯನ್ನು "ಮುಜುಗರ" ಎಂದು ಕರೆದರೆ, ರೆಡ್ಡಿಟ್‌ನಲ್ಲಿ ಇತರರು ವಿಮಾನಯಾನ ಸಂಸ್ಥೆಯ ಸೇವಾ ಗುಣಮಟ್ಟದಲ್ಲಿನ ನಿರಂತರ ಕುಸಿತಕ್ಕಾಗಿ ಟೀಕೆ ಮಾಡಿದ್ದಾರೆ.
₹1499ಕ್ಕೆ ಫ್ಲೈಟ್ ! ಏರ್ ಇಂಡಿಯಾ ಬಸ್ ಟಿಕೆಟ್ ರೇಟಲ್ಲಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ