ಹಾಸ್ಟೆಲ್‌ ಸೀಲಿಂಗ್‌ ಫ್ಯಾನ್‌ಗೆ ಕಬ್ಬಿಣದ ಪಂಜರ ಹಾಕಿದ್ರು; ಕೇಕೆ ಹಾಕಿ ನಕ್ಕ ಕೆಲವರು; ಆದರೆ ಉದ್ದೇಶ ಬೇರೆ ಐತಿ

Published : May 03, 2026, 12:34 PM IST
ceiling fan cage guard for safety

ಸಾರಾಂಶ

Ceiling Fan Cage Guard For Safety in Hostel: ಶಾಲೆ ಹಾಸ್ಟೆಲ್‌ವೊಂದಕ್ಕೆ ಸೀಲಿಂಗ್‌ ಫ್ಯಾನ್‌ಗೆ ಈಗ ಕಬ್ಬಿಣದ ಪಂಜರ ಹಾಕಲಾಗಿದೆ. ಇದನ್ನು ನೋಡಿ ಅನೇಕರು ನಕ್ಕಿದ್ದಾರೆ. ಶಾಲೆಯಲ್ಲಿ ಹೀಗೆಲ್ಲ ಮಾಡ್ತಾರಾ ಎಂದು ಕೆಲವರು ಆಶ್ಚರ್ಯಪಟ್ಟಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

ಇತ್ತೀಚೆಗೆ ಹಾಸ್ಟೆಲ್‌ವೊಂದರಲ್ಲಿ ಸೀಲಿಂಗ್ ಫ್ಯಾನ್‌ಗಳ ಸುತ್ತ ರಕ್ಷಣಾತ್ಮಕ ಲೋಹದ ಪಂಜರಗಳನ್ನು (metal cages) ಅಳವಡಿಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ. ಯಾಕೆ ಈ ರೀತಿ ಮಾಡಲಾಗಿದೆ ಎಂದು ಜನರಲ್ಲಿ ಕುತೂಹಲಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಕೆಲವರು ನಕ್ಕಿದ್ದಾರೆ.

ಸೀಲಿಂಗ್‌ ಫ್ಯಾನ್‌ಗೆ ಕಬ್ಭಿಣದ ಪಂಜರ

ಹೌದು, ಸೀಲಿಂಗ್‌ ಫ್ಯಾನ್‌ ಸುತ್ತ ಕಬ್ಬಿಣದ ಪಂಜರ ಹಾಕಲಾಗಿದೆ. ಈ ರೀತಿ ಯಾರೂ ಮಾಡಿರೋದಿಲ್ಲ. ಕೆಲವರಿಗೆ ಈ ವಿಷಯ ನಿಜಕ್ಕೂ ನಗು ತರಿಸಿದೆ. ಸುರಕ್ಷತಾ ದೃಷ್ಟಿಯಿಂದ ಈ ರೀತಿ ಮಾಡಲಾಗಿದೆಯಂತೆ. ಹೌದು, ವಿದ್ಯಾರ್ಥಿಗಳು ಸಣ್ಣ ಪುಟ್ಟ ಕಾರಣಕ್ಕೆ ಆತ್ಮ*ಹತ್ಯೆ ಮಾಡಿಕೊಳ್ತಾರೆ. ಹೀಗಾಗಿ ಮುಂಜಾಗ್ರತೆಯಿಂದ ಈ ಕ್ರಮ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೆ ಖರ್ಚು ಮಾಡಿರೋದು ಎಲ್ಲರ ಗಮನ ಸೆಳೆಯಲಾಗಿದೆ.

ಎಷ್ಟು ಖರ್ಚು ಆಯ್ತು?

ಆ ಕಬ್ಬ ಪಂಜರಗಳನ್ನು ಹಾಕಲು ಸುಮಾರು ₹12,000 ಖರ್ಚು ಮಾಡಲಾಗಿದೆಯಂತೆ, ಆದರೆ ಸೀಲಿಂಗ್ ಫ್ಯಾನ್‌ಗಳ ಬೆಲೆ ಹೆಚ್ಚು ಕಡಿಮೆ 3000 ರೂ ಇರಬಹುದು. ಕೆಲವರು ಮಾತ್ರ ಇದು ಈ ಅತಿಯಾದ ರಕ್ಷಣೆ ಎಂದು ಜೋಕ್ ಮಾಡಿದರೆ, ಇನ್ನು ಕೆಲವರು ತರಗತಿಗಳಲ್ಲಿ ಸುರಕ್ಷತೆ ಮಾಡಿಕೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ.

ಜೋಕ್‌ ಮಾಡಿದ ಕೆಲವರು

ಈಗ ಈ ವಿಡಿಯೋ, ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಅನೇಕರು ಇದನ್ನು 'ದೇಸಿ ಜುಗಾಡ್' ಮತ್ತು 'ಓವರ್ ಇಂಜಿನಿಯರಿಂಗ್'ನ ಮಿಶ್ರಣ ಎಂದು ಕರೆದರೆ, ಮತ್ತೆ ಕೆಲವರು ಈ ಶಾಲೆಯ ನಿರ್ಧಾರದ ಹಿಂದಿನ ಉದ್ದೇಶವನ್ನು ಶ್ಲಾಘಿಸಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Kapil Sharma: ಕಪಿಲ್ ಶರ್ಮಾ ಕೆಫೆ ಬಳಿ ಮತ್ತೆ ಗುಂಡಿನ ದಾಳಿ? ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಪೋಸ್ಟ್ ವೈರಲ್!
ಮೊಬೈಲ್​ನಲ್ಲಿ ಬಂದ ​ಸೌಂಡ್​ ಕೇಳಿ ​ ಬ್ಲಾಸ್ಟ್ ಆಯ್ತಂತ ಜೀವನೇ ಹಾರೋಯ್ತು - Bigg Boss ಮಲ್ಲಮ್ಮ ಏನ್​ ಹೇಳಿದ್ರು ಕೇಳಿ