
ಲಖನೌ (ಮೇ.03) ಮದುವೆ ಸಂಭ್ರಮದಲ್ಲಿ ಕಾರಿನಲ್ಲಿ ತೆರಳಿದ ವರನ ಮೇಲೆ ಗುಂಡಿನ ದಾಳಿ ನಡೆಸಿದ ಹತ್ಯೆ ಪ್ರಕರಣದಲ್ಲಿ ಮಹಾ ತಿರುವು ಸಿಕ್ಕಿದೆ. 27 ವರ್ಷದ ವರ ಕುಟುಂಬಸ್ಥರೊಂದಿಗೆ ಮದುವೆ ಮಂಟಪಕ್ಕೆ ತೆರಳುತ್ತಿದ್ದ ವೇಳೆ ಮುಖ ಮುಚ್ಚಿಕೊಂಡು ಬೈಕ್‌ನಲ್ಲಿ ಬಂದ ಇಬ್ಬರು ಸತತ ಗುಂಡಿನ ದಾಳಿ ನಡೆಸಿ ವರನ ಹತ್ಯೆ ನಡೆಸಿದ್ದರು. ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ವರನ ಹತ್ಯೆ ಹಿಂದೆ ಹುಡುಗಿ ಕುಟುಂಬಸ್ಥರ ಕೈವಾಡ ಬಯಲಾಗಿದೆ. ಈ ಘಟನೆ ಉತ್ತರ ಪ್ರದೇಶದ ಬಿಪಿಪುರ ಗ್ರಾಮದಲ್ಲಿ ನಡೆದಿದೆ.
27ರ ಹರೆಯದ ವರ ಅಜಾದ್ ಬಿಂದ್ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾನೆ. ಮದುವೆ ಮನೆಯಲ್ಲಿ ಸೂತಕದ ಚಾಯೆ ಆವರಿಸಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಈ ಕೃತ್ಯದ ಹಿಂದೆ ಹುಡುಗಿಯ ಸಂಬಂಧಿಕರ ಕೃತ್ಯ ಬಯಲಾಗಿದೆ.
ಶುಕ್ರವಾರ ಸಂಜೆ 7 ಗಂಟೆಗೆ ವರ ಹಾಗೂ ಆತನ ಕುಟುಂಬಸ್ಥರು ಮದುವೆ ನಿಶ್ಚಯಿಸಿದ್ದ ಮಂಟಪಕ್ಕೆ ತೆರಳಿದ್ದಾರೆ. ವರ ಹಾಗೂ ಆತನ ಕುಟುಂಬಸ್ಥರು ಹಲವು ಕಾರು ಹಾಗೂ ಇತರ ವಾಹನ ಮೂಲಕ ತೆರಳಿದ್ದಾರೆ. ವರನ ಕಾರು ಮೊದಲು ಹೊರಟಿದೆ. ವರನ ಕಾರು ಮಂಟಪದತ್ತ ತೆರಳುತ್ತಿದ್ದಂತೆ ಬೈಕ್‌ನಲ್ಲಿ ಮಾಸ್ಕ್ ಧರಿಸಿದ್ದ ಇಬ್ಬರು ಈ ಕಾರನ್ನು ಹಿಂಬಾಲಿಸಿದ್ದಾರೆ. ಸಿಸಿಟಿವಿ ಇಲ್ಲದ ಕಡೆ ಬೈಕ್‌ನಲ್ಲಿದ್ದ ಇಬ್ಬರು ಮುಂಭಾಗದಲ್ಲಿ ಕುಳಿತಿದ್ದ ವರನತ್ತ ಗುಂಡು ಹಾರಿಸಿದ್ದಾರೆ. ಸತತ ಗಂಡು ಹಾರಿಸಿದ್ದಾರೆ.
ಕಾರು ಚಾಲಕ ಗಾಯಗೊಂಡ ಕಾರಣ ಕಾರು ನಿಲ್ಲಿಸಿದ್ದಾನೆ. ಇತ್ತ ನಿಲ್ಲಿಸದ ಬೆನ್ನಲ್ಲೇ ಇಬ್ಬರು ಮಾಸ್ಕ್ ಧರಿಸಿದ ವ್ಯಕ್ತಿಗಳು ವರನತ್ತ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ವರನ ಅಜಾದ್ ಬಿಂದ್‌ನನ್ನು ಆಸ್ಪತ್ರೆ ದಾಖಲಿಸಲಾಗಿದೆ. ಇತ್ತ ಕಾರಿನಲ್ಲಿದ್ದ ಇತರರು ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಇತ್ತ ಹಲವು ಗುಂಡುಗಳು ದೇಹ ಹೊಕ್ಕಿದ ಕಾರಣ ವರನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಹುಡುಗಿ ಸಂಬಂಧಿಕರೇ ಈ ಕೃತ್ಯ ಎಸಗಿರುವ ಮಾಹಿತಿ ಬಯಲಾಗಿದೆ. ಅಜಾದ್ ಬಿಂದ್ ವಿರುದ್ದ ಹಳೇ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎಂದು ಹೇಳಳಾಗುತ್ತಿದೆ. ಹುಡುಗಿ ಸಂಬಂಧಿ ಪ್ರದೀಪ್ ಬಿಂದ್ ಹಾಗೂ ಆತನ ಸಹಚರರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಪ್ರಾಥಮಿಕ ಮಾಹಿತಿಗಳು ಹೇಳಿದೆ. ಹಳೇ ದ್ವೇಷದ ಕಾರಣ ಈ ಹತ್ಯೆ ನಡೆದಿದೆ. ಇದಕ್ಕೂ ಮೊದಲು ಅಜಾದ್ ಬಿಂದ್ ಮೇಲೆ ದಾಳಿಯಾಗಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ