ಬಿಜೆಪಿ ತೊರೆಯಲು ಮುಂದಾದ್ರ ಮಾಜಿ ಸಿಎಂ? ಮುಜುಗರ ಜೊತೆ ಕೋಲಾಹಲ ಸೃಷ್ಟಿಸಿದ ಹೇಳಿಕೆ

Published : Sep 26, 2026, 12:09 PM IST
Nitin Nabin PM Modi

ಸಾರಾಂಶ

ಮಾಜಿ ಮುಖ್ಯಮಂತ್ರಿ ಬಹಿರಂಗವಾಗಿ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿಯಲ್ಲಿ ನಾವು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಮರಳಿ ಕಾಂಗ್ರೆಸ್ ಸೇರಿಕೊಳ್ಳುವ ಮಾತುಗಳು ಕೇಳಿಬಂದಿದೆ.

ನವದೆಹಲಿ (ಸೆ.26) ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಬಿಜೆಪಿ ವಿರುದ್ಧವೂ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪ್ರತಿಭಟನೆ ತೀವ್ರಗೊಳಿಸಿದೆ. ಕೇಂದ್ರ ಬಿಜೆಪಿ ಅಣತಿಯಂತೆ ಚುನಾಣಾ ಆಯೋಗ ಮುಖ್ಯಸ್ಥ ಗ್ಯಾನೇಶ್ ಕುಮಾರ್ ಎಸ್ಐಆರ್ ಮಾಡಿದ್ದಾರೆ. ಮತದಾರರ ಹೆಸರು ಡಿಲೀಟ್ ಮಾಡಿದ್ದಾರೆ. ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಪ್ರಧಾನಿ ಮೋದಿ-ಅಮಿತ್ ಶಾ ಉತ್ತರಿಸಬೇಕು ಎಂದು ಪಟ್ಟು ಹಿಡಿದು ಹೋರಾಟ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿರುವ ಅಮರಿಂದರ್ ಸಿಂಗ್ ನೀಡಿದ ಹೇಳಿಕೆ ಕೋಲಾಹಲ ಸೃಷ್ಟಿಸಿದೆ. ಅಮರಿಂದರ್ ಸಿಂಗ್ ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿಕೊಳ್ಳುತ್ತಾರಾ ಅನ್ನೋ ಪ್ರಶ್ನೆಗಳು ಮೂಡುತ್ತಿದೆ. ಬಿಜೆಪಿ ತೊರೆಯುವ ಕುರಿತು ಸ್ವತಃ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ.

ಅಮರಿಂದರ್ ಸಿಂಗ್ ಕೋಲಾಹಲ ಸೃಷ್ಟಿಸಿದ ಹೇಳಿಕೆ

ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್‌ನ ಪ್ರಮುಖ ನಾಯಕ. ಸದ್ಯ ಬಿಜೆಪಿಯಲ್ಲಿರುವ ಅಮರಿಂದರ್ ಸಿಂಗ್ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆ ಕುರಿತು ಬಿಜೆಪಿ ನಾಯಕರು ತಮ್ಮನ್ನು ಸಂಪರ್ಕಿಸಿಲ್ಲ, ಮಾತನಾಡಿಸಿಲ್ಲ, ಅಭಿಪ್ರಾಯ ಕೇಳಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಕಳೆದ 6 ದಶಕಗಳಿಂದ ಪಂಜಾಬ್‌ನ ರಾಜಕೀಯದಲ್ಲಿರುವ ನನ್ನನ್ನು ಒಂದು ಮಾತು ಕೇಳಿಲ್ಲ. ಪಂಜಾಬ್ ಇತಿಹಾಸದಲ್ಲಿ ಸುದೀರ್ಘ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಕೆಲವೆ ನಾಯಕರ ಪೈಕಿ ನಾನು ಒಬ್ಬ. ಆದರೆ ಬಿಜೆಪಿ ಸಂಪೂರ್ಣ ನಿರ್ಲಕ್ಷ್ಯಿಸಿದೆ ಎಂದು ಅಮರಿಂದರ್ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಅಮರಿಂದರ್ ಸಿಂಗ್ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರಿಕೊಳ್ಳುತ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.

ಬಿಜೆಪಿ ತೊರೆಯುವ ಕುರಿತು ಅಮರಿಂದ್ ಸಿಂಗ್ ಹೇಳಿದ್ದೇನು

ಪಕ್ಷದಲ್ಲಿ ನಡೆಯುತ್ತಿರುವ ವಿಚಾರ ಕುರಿತು ನನ್ನ ಅಭಿಪ್ರಾಯ ಹೇಳಿದ್ದೇನೆ. ಆದರೆ ಬಿಜೆಪಿ ತೊರೆಯುವ ಕುರಿತು ಹೇಳಿಲ್ಲ. ರಾಜಕೀಯದಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದೇನೆ. ನಾನಿರುವ ಪಕ್ಷದಲ್ಲಿ ನಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ ಕುರಿತು ಹೇಳಿದ್ದೇನೆ. ಹಾಗಂತ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರುತ್ತೇನೆ ಎಂದಲ್ಲ. ನಾನು ಪಕ್ಷದಲ್ಲಿ ಅಪ್ರಸ್ತುತವಲ್ಲ ಎಂದಿದ್ದಾರೆ.

ನನಗೆ ವಯಸ್ಸಾಗಿಲ್ಲ, 92ರಲ್ಲೂ ಪ್ರಧಾನಿಯಾದವರಿದ್ದಾರೆ

ನನ್ನ ವಯಸ್ಸು 84. ಹಲವರು ವಯಸ್ಸಾಗಿದೆ ಹೀಗಾಗಿ ರಾಜಕೀಯದಿಂದ ದೂರ ಉಳಿಯುತ್ತಾರೆ ಎಂದುಕೊಂಡಿದ್ದರೆ ತಪ್ಪು ಎಂದು ಬಿಜೆಪಿ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. 94ರ ಹರೆಯಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನ ಮಂತ್ರಿಯಾಗಿದ್ದಾರೆ. ಹೀಗಾಗಿ ವಯಸ್ಸಿನ ಕಾರಣ ಹೇಳುವುದು ಸೂಕ್ತವಲ್ಲ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

₹1 ಲಕ್ಷ ಫೀಸ್‌ಗೆ ಪರದಾಡಿದ್ದ ಯುವಕ; ದಿನಕ್ಕೆ 17 ಗಂಟೆ ದುಡಿದು 25ನೇ ವಯಸ್ಸಿಗೇ ಕೋಟ್ಯಾಧಿಪತಿಯಾದ ಯೂಟ್ಯೂಬರ್!
ಐಡಿಬಿಐ ಖಾಸಗಿಯವರಿಗೆ ಮಾರಾಟಕ್ಕೆ ಸರ್ಕಾರ ಕ್ರಮ: ಷೇರು ಖರೀದಿಗೆ ಪೈಪೋಟಿ, ಯಾರ ಪಾಲಾಗಲಿದೆ ಬ್ಯಾಂಕ್?