ಭಾರತ ಅಭಿವೃದ್ಧಿ ಪಡಿಸಿದ ಕೋವ್ಯಾಕ್ಸಿನ್, ಕೋವಿಶೀಲ್ಡ್ ತುರ್ತು ಬಳಕೆಗೆ ಅನುಮತಿ!

By Suvarna NewsFirst Published Jan 2, 2021, 9:34 PM IST
Highlights

ಭಾರತದಲ್ಲಿ ಕೊರೋನಾ ಲಸಿಕೆ ನೀಡುವಿಕೆ ಡ್ರೈ ರನ್ ಕಾರ್ಯಕ್ರಮ ಆರಂಭಗೊಂಡಿದೆ. ಇದರ ನಡುವೆ ಮತ್ತೊಂದು ಸಂತಸ ಸುದ್ದಿ ಹೊರಬಂದಿದೆ. ಭಾರತ ಅಭಿವೃದ್ಧಿಪಡಿಸಿರುವ ಎರಡು ಕೊರೋನಾ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ

ನವದೆಹಲಿ(ಜ.02): ಕೊರೋನಾ ವೈರಸ್ ವಿರುದ್ಧ ಹೋರಾಡಲು ಭಾರತ ಸಜ್ಜಾಗಿದೆ. ಆಕ್ಸ್‌ಫರ್ಡ್ ಆಸ್ಟ್ರಾಝೆನಿಕಾ ಲಸಿಕೆಗೆ ಅನುಮತಿ ನೀಡಿದ ಬೆನ್ನಲ್ಲೇ ಇದೀಗ ಭಾರತ ಅಭಿವೃದ್ಧಿ ಪಡಿಸಿದ ಎರಡು ಕೊರೋನಾ ಲಸಿಕೆಗೆ ಕೇಂದ್ರ ಡ್ರಗ್ ನಿಯಂತ್ರಕ ಸಂಸ್ಥೆ ಅನುಮತಿ ಮೀಡಿದೆ. ಈ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬಹುದೊಡ್ಡ ಯಶಸ್ಸು ಸಿಕ್ಕಿದೆ.

ಕೊರೋನಾ ಲಸಿಕೆ ಪಡೆದರೆ ಮಕ್ಕಳಾಗುವುದಿಲ್ಲ; ಬಾಂಬ್ ಸಿಡಿಸಿದ ಸಮಾಜವಾದಿ ನಾಯಕ!...

ಹೈದರಾಬಾದ್‌ನಲ್ಲಿರುವ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಹಾಗೂ ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಅಭಿವೃದ್ಧಿ ಪಡಿಸಿರುವ  ಕೊರೋನಾ ಲಸಿಕೆ  ತುರ್ತು ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ. ಎರಡೂ ಸಂಸ್ಥೆಗಳ ಕೊರೋನಾ ಲಸಿಕೆಯನ್ನು ತುರ್ತು ಬಳಕೆ ಹಾಗೂ ಕೆಲ ನಿರ್ದಿಷ್ಠ ನಿಬಂಧನೆಗಳಿಗೆ ಅನುಸಾರ ಅನುಮತಿ ನೀಡಲಾಗಿದೆ.

ಅನುಮತಿ ಬಳಿಕ ಆಕ್ಸ್ ಫರ್ಡ್ ವಿವಿ ಹಾಗೂ ಆಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ವ್ಯಾಕ್ಸಿನ್ ಕೋವಿಶೀಲ್ಡ್ ಆಮದು ಮಾಡಿಕೊಳ್ಳಲು ಇದೀಗ ಕೇಂದ್ರ ಸರ್ಕಾರ ತಯಾರಿ ನಡೆಸುತ್ತಿದೆ.  ಇದೇ ವೇಳೆ ಅಹಮ್ಮದಾಬಾದ್‌ನ ಕ್ಯಾಡಿಲಾ ಹೆಲ್ತ್‌ಕೇರ್‌ಗೆ ಫೇಸ್ 3 ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ನೀಡಿದೆ. 

click me!